ಸಂಜಯ್ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದ ಮನೇಕಾ ಗಾಂಧಿ, ವರುಣ್ ಗಾಂಧಿ
ಸಂಜಯ್ ಗಾಂಧಿಯವರ 39 ನೇ ಸ್ಮರಣಾರ್ಥ ದಿನದಂದು ಬಿಜೆಪಿ ಮುಖಂಡರಾದ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಹಲವಾರು ಪಕ್ಷದ ಕಾರ್ಯಕರ್ತರೊಂದಿಗೆ ಭಾನುವಾರ ಶಾಂತಿ ವನದಲ್ಲಿ ದಿವಂಗತ ನಾಯಕನಿಗೆ ಗೌರವ ಸಲ್ಲಿಸಿದರು.
ನವದೆಹಲಿ: ಸಂಜಯ್ ಗಾಂಧಿಯವರ 39 ನೇ ಸ್ಮರಣಾರ್ಥ ದಿನದಂದು ಬಿಜೆಪಿ ಮುಖಂಡರಾದ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಹಲವಾರು ಪಕ್ಷದ ಕಾರ್ಯಕರ್ತರೊಂದಿಗೆ ಭಾನುವಾರ ಶಾಂತಿ ವನದಲ್ಲಿ ದಿವಂಗತ ನಾಯಕನಿಗೆ ಗೌರವ ಸಲ್ಲಿಸಿದರು.
ಮನೇಕಾ ಗಾಂಧಿ (ಸಂಜಯ್ ಗಾಂಧಿಯವರ ಪತ್ನಿ) ಮತ್ತು ಪುತ್ರ ವರುಣ್ ಗಾಂಧಿ ಇಬ್ಬರೂ ಧಾರ್ಮಿಕ ಗ್ರಂಥಗಳಿಂದ ಸ್ತುತಿ ಗೀತೆಗಳನ್ನು ಪಠಿಸುವ ಮೂಲಕ ಸ್ಮಾರಕದಲ್ಲಿ ಪುಷ್ಪಾ ಅರ್ಚನೆ ಗೌರವ ಸಲ್ಲಿಸಿದರು.
ಮಾಜಿ ಸಂಸದ ಸಂಜಯ್ ಗಾಂಧಿ 1980 ರಲ್ಲಿ ನವದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ನಿಧನರಾದರು. ಅವರು ದೆಹಲಿ ಫ್ಲೈಯಿಂಗ್ ಕ್ಲಬ್‌ನ ನೂತನ ವಿಮಾನದ ಮೂಲಕ ತಮ್ಮ ಕಚೇರಿಯ ಮೇಲೆ ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿದ್ದಾಗ ನಿಯಂತ್ರಣವನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿತ್ತು. ಇದೇ ವೇಳೆ ವಿಮಾನದಲ್ಲಿದ್ದ ಏಕೈಕ ಪ್ರಯಾಣಿಕ ಕ್ಯಾಪ್ಟನ್ ಸುಭಾಷ್ ಸಕ್ಸೇನಾ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದರು.