ನವದೆಹಲಿ: ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಬುಧವಾರ(ಎಪ್ರಿಲ್ 03) ಸುಲ್ತಾನಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮೇಲೆ ತೀವ್ರ ವಾಗ್ಧಾಳಿ ನಡೆಸಿದರು. ಕೋಟಿಗಟ್ಟಲೆ ಹಣ ತೆಗೆದುಕೊಂಡು ಮಾಯಾವತಿ ಲೋಕಸಭಾ ಟಿಕೆಟ್ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.



COMMERCIAL BREAK
SCROLL TO CONTINUE READING

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷವು ಪಿಲಿಭಿಟ್ ಬದಲಿಗೆ ಸುಲ್ತಾನ್ಪುರದಿಂದ ಮನೀಕಾ ಗಾಂಧಿಯವರನ್ನು ಕಣಕ್ಕಿಳಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ ವೇಳೆ ಬಿಎಸ್​ಪಿ ಮುಖ್ಯಸ್ಥೆ ಟಿಕೆಟ್ ಮಾರಾಟ ಮಾಡುತ್ತಿರುವುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಆರೋಪಿಸಿದ ಮೇನಕಾ, ಅವರ ಪಕ್ಷದ ಈ ಜನರು ಹೆಮ್ಮೆಯಿಂದ ಹೇಳುತ್ತಾರೆ ಎಂದು ವಾಗ್ಧಾಳಿ ನಡೆಸಿದರು.


ಮಾಯಾವತಿ ಅವರ ಬಳಿ ಬರೋಬ್ಬರಿ 77 ಮನೆಗಳಿವೆ. ನಮ್ಮ ನಾಯಕಿ ಹಣದ ಅಥವಾ ಬೇರೆ ರೂಪದಲ್ಲೂ ತೆಗೆದುಕೊಳ್ಳುತ್ತಾರೆ. ಆದರೆ 15 ಕೋಟಿಯಲ್ಲಿ ರಾಜಿಯಿಲ್ಲ ಎಂಬುದನ್ನು ಪಕ್ಷದ ನಾಯಕರೇ ಹೆಮ್ಮೆಯಿಂದ ಹೇಳುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.


ಮುಂದುವರೆದು ಮಾತನಾಡಿದ ಮೇನಕಾ, ಬಿಎಸ್​ಪಿ ಮುಖ್ಯಸ್ಥೆ ಯಾವುದೇ ಟಿಕೆಟ್ ಅನ್ನು ಉಚಿತವಾಗಿ ನೀಡುವುದಿಲ್ಲ. ಅದಕ್ಕೆ 15 ಕೋಟಿ ರೂ. ಬೆಲೆ ತೆರೆಯಬೇಕಾಗುತ್ತದೆ. ನಾನು ಬಂದೂಕುದಾರಿ(ಚಂದ್ರಭದ್ರ ಸಿಂಗ್ ಅಲಿಯಾಸ್ ಸೋನು ಅವರನ್ನು ಗುರಿಯಾಗಿಟ್ಟುಕೊಂಡು)ಗಳನ್ನು ಕೇಳುತ್ತೇನೆ  ನಿಮಗೆ 15 ಕೋಟಿ ರೂ. ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.