ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೇಕಾ ಗಾಂಧಿ ಅವರು ಮೀಟೂ ಅಭಿಯಾನದಿಂದ ಹೊರಬರುವ ಎಲ್ಲಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿರಿಯ ನ್ಯಾಯಮೂರ್ತಿ ಮತ್ತು ಕಾನೂನು ತಜ್ಞರನ್ನು ಒಳಗೊಂಡ ಸಮಿತಿ ಪ್ರಸ್ತಾಪಿಸಿದ್ದಾರೆ.


COMMERCIAL BREAK
SCROLL TO CONTINUE READING

 MeToo ಅಭಿಯಾನದ ಭಾಗವಾಗಿ ಹೊರಹೊಮ್ಮಿದ ಎಲ್ಲ ಪ್ರಕರಣಗಳನ್ನು ಉಲ್ಲೇಖಿಸಿ ಪಿ.ಟಿ.ಐಗೆ ಮಾತನಾಡಿದ ಸಚಿವೆ ಮೇನಕಾ ಗಾಂಧಿ "ನಾನು ಅವರೆಲ್ಲರನ್ನು ನಂಬಿದ್ದೇನೆ, ಪ್ರತಿಯೊಂದು ದೂರಿನ ಹಿಂದೆ ನೋವು ಮತ್ತು ಆಘಾತವನ್ನು ನಾನು ನಂಬುತ್ತೇನೆ." ಎಂದು ತಿಳಿಸಿದರು 


ನಾಲ್ಕು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸದಸ್ಯರ ಸಮಿತಿಯು #ಮೀಟೂ ಅಡಿಯಲ್ಲಿ ಬಂದಂತಹ ಲೈಂಗಿಕ ಕಿರುಕುಳದ ಪ್ರಕರಣಗಳ ದೂರನ್ನು ಸಾರ್ವಜನಿಕವಾಗಿ  ಚರ್ಚಿಸುತ್ತದೆ ಎಂದು ತಿಳಿಸುತ್ತದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.


ಕಳೆದ ಕೆಲವು ದಿನಗಳಿಂದ ಒಂದಿಲ್ಲೊಂದು ಪ್ರಕರಣಗಳು ಮೀಟೂ ಚಳುವಳಿಯ ಭಾಗವಾಗಿ ಹೊರಹೊಮ್ಮಿವೆ ಈಗ ಅವುಗಳನ್ನು ಚರ್ಚಿಸುವ ಸಲುವಾಗಿ ಕೇಂದ್ರ ಸಚಿವೆ ಮೇನಕಾ ಗಾಂಧಿ  ನಾಲ್ಕು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಈ ವಿಷಯಗಳನ್ನು ಚರ್ಚಿಸುತ್ತದೆ ಎಂದು ತಿಳಿಸಿದ್ದಾರೆ. 


ಇದೇ ವೇಳೆ ಕಾನೂನು ಸಚಿವಾಲಕ್ಕೆ ಯಾವುದೇ ಸಮಯ ಮಿತಿ ನಿಗದಿಪಡಿಸದೇ  ಸಂತ್ರಸ್ತರು  ದೂರು ಸಲ್ಲಿಸಲು ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.