ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣಗಳನ್ನು ನೋಂದಾಯಿಸಲು ಆಂತರಿಕ ದೂರು ಸಮಿತಿಯನ್ನು ಎಲ್ಲ ರಾಜಕೀಯ ಪಕ್ಷಗಳು ರಚಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೀಕಾ ಗಾಂಧಿ ಒತ್ತಾಯಿಸಿದ್ದಾರೆ.ಮೀಟೂ ಚಳುವಳಿಯ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾದ ವಾತಾವರಣವನ್ನು ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆಂತರಿಕ ದೂರು ಸಮಿತಿಯನ್ನು ರಚಿಸಲು ಈಗಾಗಲೇ ಆರು ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಮತ್ತು 59 ಪ್ರಾದೇಶಿಕ ಪಕ್ಷಗಳಿಗೆ ತಾವು ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.ಈ ಕುರಿತಾಗಿ ಪಿಟಿಐ ಗೆ ಪ್ರತಿಕ್ರಿಯಿಸಿರುವ ಮೇನಕಾ ಗಾಂಧಿ  " ಕೆಲಸದ ಸ್ಥಳದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಕಿರುಕುಳದ ಪ್ರತಿಯೊಂದು ಘಟನೆಯ ದೂರನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು 


"ನಾನು ಆಂತರಿಕ ದೂರು ಸಮಿತಿ (ಐಸಿಸಿ) ರೂಪಿಸಲು ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಬರೆದಿದ್ದೇನೆ, ಇದು ಕಾನೂನಿನ ಅಡಿಯಲ್ಲಿ ಈಗಾಗಲೇ ಇರಬೇಕಿದೆ ನಾವು ಆಂತರಿಕ ದೂರು ಸಮಿತಿಯನ್ನು ಹೊಂದಲು ಪ್ರತಿ ಸಂಸ್ಥೆಗೂ ನಿಯಮವಿರುವಾಗ ನಾವು ರಾಜಕೀಯ ಪಕ್ಷಗಳನ್ನು ವಿನಾಯಿತಿ ನೀಡಬೇಕು,ಎಂದು ಅವರು ಅಭಿಪ್ರಾಯಪಟ್ಟರು.


ಈ ಮೊದಲು ಅವರು ಐಸಿಸಿಯನ್ನು ರೂಪಿಸಲು ಎಲ್ಲಾ ಬಾಲಿವುಡ್ ಪ್ರೊಡಕ್ಷನ್ ಹೌಸ್ ಗಳಿಗೆ ಪತ್ರ ಬರೆದಿದ್ದರು ಅದರಲ್ಲಿ  ಬರೆದಿದ್ದರು,ಅದರಲ್ಲಿ ಏಳು ಸಮಿತಿಗಳನ್ನು ರಚಿಸಲಾಗಿತ್ತು.