ಇಂಟರ್ನೆಟ್ ಆರಂಭ ಆಗುತ್ತಿದ್ದಂತೆ ಮಣಿಪುರದಲ್ಲಿ ಈ ವಿಡಿಯೋ ವೈರಲ್! ಪೊಲೀಸರಿಂದ ಕಠಿಣ ಕ್ರಮ
Manipur Violence Latest Update: ಸುಮಾರು ಮೂರು ತಿಂಗಳಿನಿಂದ ಮಣಿಪುರ ಹಿಂಸಾಚಾರದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ.
Manipur Violence Latest Update: ಮಣಿಪುರದಲ್ಲಿ ಇಂಟರ್‌ನೆಟ್ ಶುರುವಾದ ಕೂಡಲೇ ವಾತಾವರಣವನ್ನು ಹಾಳು ಮಾಡುವ ಗ್ಯಾಂಗ್ ಸಕ್ರಿಯಗೊಂಡಿದೆ. ಕೆಲವು ಅಹಿತಕರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಣಿಪುರ ಮೂಲದವರಲ್ಲದ ವ್ಯಕ್ತಿಗಳು ಶೇರ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: 30 ವರ್ಷಗಳ ಬಳಿಕ ಈ ರಾಶಿಯವರ ಬಾಳಲ್ಲಿ ಶ್ರೀಮಂತಿಕೆ ಪ್ರವೇಶ: ಹಣದ ಮಳೆ ಗ್ಯಾರಂಟಿ: ಹೆಜ್ಜೆಹೆಜ್ಜೆಗೂ ನೆರಳಾಗುವನು ಶನಿ
ಸುಮಾರು ಮೂರು ತಿಂಗಳಿನಿಂದ ಮಣಿಪುರ ಹಿಂಸಾಚಾರದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಜನರನ್ನು ಹತ್ಯೆ ಮಾಡಲಾಗುತ್ತಿದೆ. ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಗುಪ್ತಚರ ಸಂಸ್ಥೆಗಳ ಮೂಲಗಳ ಪ್ರಕಾರ, ಮಣಿಪುರದಲ್ಲಿ ಇಂಟರ್ನೆಟ್ ಪ್ರಾರಂಭವಾದ ತಕ್ಷಣ ವಾತಾವರಣವನ್ನು ಹಾಳು ಮಾಡುವ ಸಂಚು ಶುರುವಾಗಿದೆ. ಮಣಿಪುರ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲದ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ ಈ ವಿಡಿಯೋಗಳನ್ನು ವೈರಲ್ ಮಾಡುತ್ತಿರುವ ಖಾತೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.
ಮೂಲಗಳ ಪ್ರಕಾರ, ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ 6000 ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ. ಇದರಲ್ಲಿ 70 ಪ್ರಕರಣಗಳು ಕೊಲೆಗೆ ಸಂಬಂಧಿಸಿವೆ. 700 ಜನರನ್ನು ಬಂಧಿಸಲಾಗಿದೆ. 123 ಪ್ಯಾರಾ ಮಿಲಿಟರಿಯ ಕಂಪನಿಗಳನ್ನು ಭದ್ರತೆಯ ದೃಷ್ಟಿಯಿಂದ ನಿಯೋಜಿಸಲಾಗಿದೆ. 62 ಕಂಪನಿಗಳ 6 ಸಾವಿರದ 200 ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 12 ಸಾವಿರ ಹೆಚ್ಚುವರಿ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮಣಿಪುರ ಪೊಲೀಸ್ ಸಿಬ್ಬಂದಿ 24 ಗಂಟೆಗಳ ಕಾಲ ನಿಗಾ ಇರಿಸಿದ್ದಾರೆ. ಆದರೆ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಭದ್ರತಾ ಪಡೆಗಳು ವಿಫಲವಾಗಿವೆ.
ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ಹೊರಬಿದ್ದಿದೆ. ಈ ಮಧ್ಯೆ ಮನೆ ಸುಟ್ಟು ಹಾಕಿರುವ ಚಿತ್ರಗಳೂ ವೈರಲ್ ಆಗುತ್ತಿವೆ. ಮಹಿಳೆಯರೊಂದಿಗೆ ಕ್ರೌರ್ಯವಾಗಿ ವರ್ತಿಸುವ ವೀಡಿಯೊ ಕೂಡ ವೈರಲ್ ಆಗುತ್ತಿದ್ದು, ಕೋಪಗೊಂಡ ಜನರು ಆರೋಪಿಯ ಮನೆಗೆ ನುಗ್ಗಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ಬಂದ ಮಹಿಳೆಯರು ಮೊದಲು ಆರೋಪಿಯ ಮನೆಗೆ ನುಗ್ಗಿದ್ದಾರೆ. ಬಳಿಕ ಘೋಷಣೆಗಳನ್ನು ಕೂಗುತ್ತಲೇ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಮನೆಗೆ ಬೆಂಕಿ ಹಚ್ಚಿದ ನಂತರ ಪ್ರತಿಭಟನಾಕಾರರು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉಚಿತ Amazon Prime ಸದಸ್ಯತ್ವ ಪಡೆದುಕೊಳ್ಳಬೇಕೇ? ಹೀಗೆ ಮಾಡಿ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿ ಖುರೆಮ್ ಹೆರ್ದಾಸ್ ಸೇರಿದಂತೆ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ಉಳಿದ ಆರೋಪಿಗಳ ಪತ್ತೆಗೆ ಹಲವಾರು ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ವೈರಲ್ ಆಗಿರುವ ವೀಡಿಯೋದಿಂದ ಎಲ್ಲ ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads