ದೆಹಲಿ: ದೆಹಲಿಯ ಉಪ ಸಿಎಂ ಮನೀಶ್ ಸಿಸೋಡಿಯಾ ಕರೋನಾ ಸೋಂಕಿಗೆ ಗುರಿಯಾಗಿದ್ದಾರೆ . ಅವರೇ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು "ಲಘು ಜ್ವರ ಬಂದ ಬಳಿಕ ಇಂದು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದೆ. ಅದರ ವರದಿ ಸಕಾರಾತ್ಮಕ ಬಂದಿದೆ. ನಾನು ಸ್ವತಃ ನನ್ನನ್ನು ಐಸೋಲೆಟ್ ಮಾಡಿದ್ದೇನೆ. ಪ್ರಸ್ತುತ ಜ್ವರವಾಗಲಿ ಅಥವಾ ಇತರೆ ಯಾವುದೇ ಸಮಸ್ಯೆ ಇಲ್ಲ ಹಾಗೂ ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಆಶಿರ್ವಾದದಿಂದ ಶೀಘ್ರವೇ ಸಂಪೂರ್ಣ ಗುಣಮುಖನಾಗಿ ಕೆಲಸಕ್ಕೆ ಮರಳಲಿದ್ದೇನೆ" ಎಂದಿದ್ದಾರೆ.



COMMERCIAL BREAK
SCROLL TO CONTINUE READING

ವೈರಸ್ ನಿಂದಾಗುವ ಸಾವಿನ ಚಿಂತೆ ಇರಬೇಕು: ಕೆಜ್ರಿವಾಲ್
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಕೊವಿಡ್-19 ಪ್ರಕರಣಗಳ ಹಿನ್ನೆಲೆ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್, ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ನಿಂದಾಗುತ್ತಿರುವ ಸಾವುಗಳು ಸಂಭವತಃ ವಿಶ್ವದಲ್ಲಿಯೇ ಅತಿ ಕಡಿಮೆಯಾಗಿವೆ. ಆದರೆ, ಸೋಂಕಿತರ ಸಂಖ್ಯೆಗಿಂತ ವೈರಸ್ ನಿಂದ ಆಗುತ್ತಿರುವ ಸಾವುಗಳ ಚಿಂತೆ ಕಾಡುತ್ತಿದೆ ಎಂದಿದ್ದಾರೆ.


ದೆಹಲಿ ವಿಧಾನಸಭೆಯ ಒಂದು ದಿನದ ಅಧಿವೇಶನದ ವೇಳೆ ಮಾತನಾಡಿರುವ ಅವರು, " ಪ್ರಸ್ತುತ ದೆಹಲಿಯಲ್ಲಿ ಅತಿ ಹೆಚ್ಚು ಕೊವಿಡ್ -19 ಟೆಸ್ಟ್ ಗಳನ್ನು ನಡೆಸಲಾಗುತ್ತಿದೆ. ಸುಮಾರು 21 ಲಕ್ಷ ಟೆಸ್ಟ್ ಗಳನ್ನೂ ನಡೆಸುವ ಮೂಲಕ ಇದುವೆರೆಗೆ ದೆಹಲಿ ಜನಸಂಖ್ಯೆಯ  ಸುಮಾರು ಶೇ.11 ರಷ್ಟು ಜನರ ಟೆಸ್ಟ್ ನಡೆಸಲಾಗಿದೆ. ವೈರಸ್ ಸೋಂಕಿಗೆ ಗುರಿಯಾಗುತ್ತಿರುವ ಜನರ ಸಂಖ್ಯೆಗಿಂತ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ಚಿಂತೆಗೀಡು ಮಾಡುತ್ತಿದೆ. ಆದರೂ ಕೂಡ ದೆಹಲಿಯಲ್ಲಿ ಮೃತ್ಯು ದರ ವಿಶ್ವದಲ್ಲಿಯೇ ಅತ್ಯಂತ ಕಡಿಮೆಯಾಗಿದೆ" ಎಂದು ಹೇಳಿದ್ದಾರೆ.