ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರಿ ಬ್ಯಾಂಕುಗಳಲ್ಲಿನ ಸಾಲ ನೀಡುವ ಕೆಟ್ಟ ಸಂಪ್ರದಾಯದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಕುಸಿತಕ್ಕೆ ಕಾರಣವಾಯಿತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಗೆ ಪ್ರಮುಖವಾಗಿ ಮನಮೋಹನ್ ಸಿಂಗ್-ರಘುರಾಮ್ ರಾಜನ್ ಕಾರಣ ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಕೊಲಂಬಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಮತ್ತು ಪಬ್ಲಿಕ್ ಅಫೆರ್ಸ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನ ಮಂತ್ರಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಆಗಿ ಸಿಂಗ್ ಮತ್ತು ರಾಜನ್ ಅವರ ಜೋಡಿ ಇದ್ದಾಗಿನ ಕೆಟ್ಟ ಹಂತವನ್ನು ಈಗ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು ಹೊಂದಿಲ್ಲ ಎಂಬ ಅಂಶವನ್ನು ನಿಮ್ಮ ಮುಂದೆ ಇಡುತ್ತೇನೆ. ಆಗ ನಮಗೆ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು.


ಆರ್ ಬಿ ಐ ಪ್ರಕಾರ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಸಾಲವು 2011-2012ರಲ್ಲಿ 9,190 ಕೋಟಿ ರೂ. ದಿಂದ 2013-2014ರಲ್ಲಿ 2.16 ಲಕ್ಷ ಕೋಟಿ ರೂ ವರೆಗೆ ಏರಿತು. ಎನ್‌ಡಿಎ ಸರ್ಕಾರ 2014 ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತು. ಆರ್ಥಿಕತೆಯ ಕುಸಿತದ ಹಿನ್ನಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆಗಳನ್ನು ಎದುರಿಸುತ್ತಿದ್ದಾರೆ, ಇದು ಉತ್ಪಾದನೆಯಿಂದ ಹಣಕಾಸುವರೆಗೆ ಪ್ರಮುಖ ಕ್ಷೇತ್ರಗಳಿಗೆ ಅಪಾಯ ತಂದಿದೆ. ಈ ಹಿನ್ನಲೆಯಲ್ಲಿ ಅವರು ಹಲವಾರು ಸುಧಾರಣಾ ಕ್ರಮವಾಗಿ ಸೆಪ್ಟಂಬರ್ ನಲ್ಲಿ ಕಾರ್ಪೋರೆಟ್ ತೆರಿಗೆ ಕಡಿತವನ್ನು ಘೋಷಿಸಿದರು.


ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆರ್‌ಬಿಐ ಗವರ್ನರ್ ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ, 2016 ರ ನವೆಂಬರ್‌ನಲ್ಲಿ ನಡೆದ ನೋಟು ನಿಷೇಧವೂ ಸೇರಿದಂತೆ, ನಗದು-ಅವಲಂಬಿತ ಅನೌಪಚಾರಿಕ ಆರ್ಥಿಕತೆಯ ಬೆನ್ನನ್ನು ಮುರಿದಿದೆ ಎಂದು ಅವರು ಟೀಕಿಸಿದ್ದಾರೆ.