ನವದೆಹಲಿ:ದೇಶಾದ್ಯಂತ ಪಸರಿಸುತ್ತಿರುವ ಕೊರೊನಾ ವೈರಸ್ ಪ್ರಕೋಪದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 'ಮನ್ ಕೀ ಬಾತ್' ಕಾರ್ಯಕ್ರಮದ ಮೂಲಕ ದೇಶದ ನಾಗರಿಕರ ಜೊತೆಗೆ ಸಂವಾದ ನಡೆಸಿದ್ದಾರೆ. ಸದ್ಯ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಮಾರಕ ಕೊರೊನಾ ವೈರಸ್ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವನ್ನೇ ಬಂಧನದಲ್ಲಿರಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಇದೇವೇಳೆ ದೇಶದ ನಾಗರಿಕರಿಗೆ ಮನವಿ ಮಾಡಿರುವ ಪ್ರಧಾನಿ ಲಾಕ್ ಡೌನ್ ಅನ್ನು ಅನುಸರಿಸಿ ನಿಮ್ಮ ಹಾಗು ನಿಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಿಕೊಳ್ಳಿ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಲಾಕ್ ಡೌನ್ ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ
ತಮ್ಮ ಮನ್ ಕಿ ಬಾತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ನಾನು ಎಲ್ಲಕ್ಕಿಂತ ಮೊದಲು ಈ ದೇಶದ ಎಲ್ಲ ನಾಗರಿಕರ ಬಳಿ ಕ್ಷಮೆ ಯಾಚಿಸುವೆ ಹಾಗೂ ನೀವು ನನ್ನನ್ನು ಕ್ಷಮಿಸುವಿರಿ ಎಂದು ನನ್ನ ಆತ್ಮ ನನಗೆ ಹೇಳುತ್ತಿದೆ. ಏಕೆಂದರೆ, ಕಳೆದ ಕೆಲ ದಿನಗಳಲ್ಲಿ ಕೆಲ ಕಠಿಣ ನಿರ್ಣಯಗಳನ್ನೂ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಎಲ್ಲರು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿಯೊಬ್ಬರೂ ಮನೆಯಲ್ಲಿ ಬಂಧಿಯಾಗಿದ್ದಕ್ಕೆ ಹಲವರಿಗೆ ನನ್ನ ಮೇಲೆ ಕೋಪವೂ ಇರಬಹುದು. ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ಆದರೆ, 130 ಕೋಟಿ ಜನಸಂಖ್ಯೆ ಇರುವ ಭಾರತದಂತಹ ದೇಶವನ್ನು ಕೊರೊನಾ ವಿರುದ್ಧ ಹೋರಾಡಲು ಈ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ" ಎಂದು ಹೇಳಿದ್ದಾರೆ.


ಪ್ರತಿಯೊಬ್ಬರಿಗೆ ಸವಾಲೆಸಗುತ್ತಿದೆ ಕೊರೊನಾ ವೈರಸ್
"ಇಡೀ ವಿಶ್ವವನ್ನೇ ಕೊರೊನಾ ವೈರಸ್ ಬಂಧಿಯಾಗಿರಿಸಿದೆ. ಈ ವೈರಸ್ ಜ್ಞಾನಿಗಳು, ವಿಜ್ಞಾನಿಗಳು, ಬಡವರು, ಶ್ರೀಮಂತರು, ಶಕ್ತಿವಂತರು ಹಾಗೂ ದುರ್ಬಲರು ಎನ್ನದಂತೆ ಎಲ್ಲರಿಗೂ ಸಮಾನ ಸವಾಲನ್ನು ಎಸಗುತ್ತಿದೆ. ಇದಕ್ಕೆ ಯಾವುದೇ ರಾಷ್ಟ್ರದ ಗಡಿ ಇಲ್ಲ. ಇದು ಕ್ಷೇತ್ರವನ್ನು ಕೂಡ ನೋಡುವುದಿಲ್ಲ ಮತ್ತು ವಾತಾವರಣವನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಲಾಕ್ ಡೌನ್ ಪರಿಪಾಲಿಸಿ ತಾವು ಬೇರೆಯೊಬ್ಬರ ಮೇಲೆ ಉಪಕಾರ ಮಾಡುತ್ತಿದ ಎಂದಿಸಬಹುದು. ಆದರೆ ಇಂತಹ ಭ್ರಮೆ ಬೇಡ. ಈ ಲಾಕ್ ಡೌನ್ ಪರಿಪಾಲಿಸಿ ಸ್ವತಃ ರಕ್ಷಿಸಿಕೊಳ್ಳಿ. ಇದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಹಾಗೂ ನಿಮ್ಮ ಕುಟುಂಬಸ್ಥರನ್ನೂ ಕೂಡ ರಕ್ಷಿಸಿ" ಎಂದು ಪ್ರಧಾನಿ ಹೇಳಿದ್ದಾರೆ.


"ಏವಂ ಏವಂ ವಿಕಾರ್, ಅಪಿ ತರುನಾಃ ಸಾಧ್ಯತೆ ಸುಖಂ" ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದ. ಇದರ ಅರ್ಥ ರೋಗಗಳನ್ನು ಹಾಗೂ ಅವುಗಳ ಪ್ರಕೋಪಗಳನ್ನು ಆರಂಭದಲ್ಲಿಯೇ ಹತ್ತಿಕ್ಕಬೇಕು. ಇಲ್ಲದಿದ್ದರೆ ರೋಗವೂ ಅಸಾಧ್ಯವಾಗುತ್ತದೆ ಹಾಗೂ ಅದರ ಚಿಕಿತ್ಸೆಯೂ ಕೂಡ ಕಠಿಣವಾಗುತ್ತದೆ. ಇಂದು ಸಂಪೂರ್ಣ ಭಾರತ ಮತ್ತು ಭಾರತೀಯ ಇದನ್ನೇ ಮಾಡುತ್ತಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಇಷ್ಟವಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ. ಕೆಲವರು ಇದನ್ನು ಮಾಡುತ್ತಿದ್ದು, ಅವರಿಗೆ ಪರಿಸ್ಥಿತಿಯ ಗಂಭೀರತೆ ಇನ್ನೂ ಇಳಿದಿಲ್ಲ. ಒಂದು ವೇಳೆ ನೀವು ಲಾಕ್ ಡೌನ್ ನಿಯಮ ಮುರಿದರೆ, ನೀವು ವೈರಸ್ ನಿಂದ ಪಾರಾಗುವುದು ಕಠಿಣ" ಎಂದು ಪ್ರಧಾನಿ ಈ ವೇಳೆ ಪುನರ್ ಎಚ್ಚರಿಕೆ ನೀಡಿದ್ದಾರೆ.


ದೇಶದ ವೈದ್ಯರನ್ನು ಹುರುದುಂಬಿಸಿದ ಪ್ರಧಾನಿ ಮೋದಿ 
ದೇಶದಲ್ಲಿನ ವೈದ್ಯರ ಸೇವೆಯನ್ನು ಕೊಂಡಾಡಿರುವ ಪ್ರಧಾನಿ ಮೋದಿ, "ವೈದ್ಯರು ನಮ್ಮ ಫ್ರಂಟ್ ಲೈನ್ ಸೈನಿಕರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ನಮ್ಮ ದಾಯಿಯರು. ಇವರಲ್ಲಿ ನಮ್ಮ ಬಂಧುಗಳಿದ್ದಾರೆ, ವೈದ್ಯರಿದ್ದಾರೆ, ಅರೆವೈದ್ಯಕೀಯ ಸಿಬ್ಬಂದಿಗಳಿದ್ದಾರೆ. ಇವರೆಲ್ಲರೂ ಕೂಡ ಕೊರೊನಾ ವೈರಸ್ ಅನ್ನು ಸೋಲಿಸಿದ್ದಾರೆ. ಅವರಿಂದ ನಾವು ಪ್ರೇರಣೆ ಪಡೆಯುವ ಅವಶ್ಯಕತೆ ಇದೆ.. ಧನ ಹಾಗೂ ಯಾವುದೇ ಒಂದು ಬೇಡಿಕೆಯ ಉದೇಶ ಹೊಂದಿರದೆ, ದಯಾ ಭಾವನೆಯಿಂದ ರೋಗಿಗಳ ಸೇವೆಯಲ್ಲಿ ನಿರತರಾಗಿರುವವರೇ  ಸರ್ವಶ್ರೇಷ್ಠ ಚಿಕಿತ್ಸಕರಾಗಿರುತ್ತಾರೆ" ಎಂದು ಪ್ರಧಾನಿ ಹೇಳಿದ್ದಾರೆ.