ನವದೆಹಲಿ: ನಾಲ್ಕು ಬಾರಿ ಗೋವಾದ ಮುಖ್ಯಮಂತ್ರಿ ಹಾಗೂ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರ್ರಿಕರ್ ಭಾನುವಾರದಂದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು.ಈಗ ಅವರ ಅಂತಿಮ ಸಂಸ್ಕಾರವನ್ನು ಗೋವಾದ ಮಿರಾಮಾರ್ ಬಿಚ್ ನಲ್ಲಿ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದ ಮೂಲಕ ನೆರವೇರಿಸಲಾಯಿತು 


COMMERCIAL BREAK
SCROLL TO CONTINUE READING

ಭಾನುವಾರದಂದು ಪರಿಕ್ಕರ್ ನಿಧನಕ್ಕೆ ರಾಷ್ಟ್ರಪತಿ ಕೊವಿಂದ್ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದರು.ಇಂತಹ ಸರಳ ವ್ಯಕ್ತಿತ್ವದ ನಾಯಕ ಈಗ ಗೋವಾದ ಮೀರಾಮರ್ ಬೀಚ್ ನಲ್ಲಿ ಶಾಶ್ವತ ಚಿರನಿದ್ರೆಗೆ ಜಾರಿದ್ದಾರೆ.ಅವರಿಗೆ ಸರ್ಕಾರಿ ವಿಧಿ ವಿಧಾನಗಳ ಪ್ರಕಾರ 21 ಗನ್ ಸೆಲ್ಯೂಟ್ ಮೂಲಕ ಮೀರಾಮರ್ ಬಿಚ್ ನಲ್ಲಿ ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ್ ಬಂಡೋಕರ್ ಅವರ ಸ್ಮಾರಕದ ಹತ್ತಿರ ಅಂತಿಮ ಸಂಸ್ಕಾರವನ್ನು ನಡೆಸಲಾಯಿತು. 


ಮನೋಹರ್ ಪರ್ರಿಕರ್ ಐಐಟಿ ಬಾಂಬೆಯಲ್ಲಿ ಪದವಿಧರರಾಗಿದ್ದು,ವಿದ್ಯಾರ್ಥಿ ದೆಸೆಯಿಂದಲೇ ಅವರು ಆರೆರೆಸ್ಸ್ ನಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದರು.1994 ರಲ್ಲಿ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿದ್ದರು. ಆಗ ಬಿಜೆಪಿ ಟಿಕೆಟ್ ಮೂಲಕ ಪಣಜಿ ಕ್ಷೇತ್ರವನ್ನು ಗೆಲ್ಲುವುದರ ಮೂಲಕ ರಾಜಕೀಯ ಇನ್ನಿಂಗ್ಸ್ ಗೆ ನಾಂದಿ ಹಾಡಿದ್ದರು. ನಂತರ ಅವರು ರಾಜಕಾರಣದಲ್ಲಿ ಹಿಂದಿರುಗಿ ನೋಡಲೇ ಇಲ್ಲ, ನಾಲ್ಕು ಬಾರಿ ಗೋವಾದ ಮುಖ್ಯಮಂತ್ರಿಯಾಗಿ ಕೇಂದ್ರ ರಕ್ಷಣಾ ಸಚಿವರಾಗಿ ಮಹತ್ವದ ಪಾತ್ರ ನಿರ್ವಹಿಸಿದ್ದರು.ಅಚ್ಚರಿಯೆಂದರೆ ಕ್ಯಾನ್ಸರ್ ಕಾಯಿಲೆ ಇದ್ದಾಗಲೇ ಮಹತ್ವದ ಹುದ್ದೆಯನ್ನು ಅವರು ನಿರ್ವಹಿಸಿದ್ದು ನಿಜಕ್ಕೂ ವಿಶೇಷ.


ಪರ್ರಿಕರ್ ಯಾವಾಗಲು ತಮ್ಮ ಸರಳತೆ ಸಜ್ಜನಿಕೆಯಿಂದಲೇ ಎಲ್ಲ ಪಕ್ಷಗಳ ನಾಯಕರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.ಇದೆ ಕಾರಣದಿಂದಲೇ ಅವರು ಮೃತಪಟ್ಟಾಗ ಪಕ್ಷಾತೀತವಾಗಿ ಅವರ ಕಾರ್ಯನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೆ ಇದಕ್ಕೆ ಸಾಕ್ಷಿ ಎನ್ನಬಹುದು.