ನವದೆಹಲಿ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈಗ ವಿಶ್ವ ಕ್ಯಾನ್ಸರ್ ದಿನದಂದು ಹೊಸ ಸಂದೇಶ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇಂತಹ ಗಂಭೀರ್ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದರಿಂದ ಹೊರ ಬರುವುದು ಹೇಗೆ ಎನ್ನುವ ವಿಚಾರವಾಗಿ ಈಗ ಅವರು ಟ್ವೀಟ್ ಮೂಲಕ "ಮನುಷ್ಯನ ಮನಸ್ಥಿತಿ ಎಂತಹ ಕಾಯಿಲೆಯನ್ನು ಕೂಡ ಗುಣಪಡಿಸುತ್ತದೆ" ಎಂದು ತಿಳಿಸಿದ್ದಾರೆ.



ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅವರು ಗೋವಾ ಮುಂಬೈ, ದೆಹಲಿ,ಮುಂಬೈನಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.ಅಮೆರಿಕಾದ ಬಂದ ನಂತರ ಸಂಪಾದಕರೊಂದಿಗೆ ಮಾತನಾಡುತ್ತಾ ಈ ಕಾಯಿಲೆ ವಿಚಾರವಾಗಿ ಭಯಭೀತಿಗೊಂಡಿರಲಿಲ್ಲ ಎಂದು ತಿಳಿಸಿದರು.


ಸ್ಥಳೀಯ ಸಂಪಾದಕರೊಬ್ಬರು ಹೇಳುವಂತೆ " ಅವರು ಕಾಯಿಲೆಯಿಂದ ಬಳಲುತ್ತಿದ್ದಾಗ ಯಾವುದೇ ಒತ್ತಡಕ್ಕೆ ಒಳಗಾಗಿರಲಿಲ್ಲ, ಇದರಿಂದ ಹೊರಬರಲು ತಮಗೆ ಅಂತಹ ಸದೃಢ ಮನಸ್ಥಿತಿ ಇದೆ" ಎಂದು ಹೇಳಿದ್ದರು ಎಂದು ಸಂಪಾದಕರೊಬ್ಬರು ತಿಳಿಸಿದ್ದರು.