ಹೋಳಿ ಹಬ್ಬಕ್ಕೂ ಮುನ್ನವೆ ಛತ್ತಿಸ್ಗಡ್ ದ ನಾರಾಯನಪುರ್ ಪ್ರದೇಶದಲ್ಲಿ ನಕ್ಷಲರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಈ ಪ್ರದೇಶದಲ್ಲಿ ಮಾವೋವಾದಿಗಳು IED ಬ್ಲಾಸ್ಟ್ ಮಾಡುವ ಮೂಲಕ ಭದ್ರತಾ ಪಡೆಗಳ ಬೆಂಗಾವಲು ವಾಹನವನ್ನು ಉಡಾಯಿಸಿದ್ದಾರೆ. ನಕ್ಸಲರು ಈ ಕೃತ್ಯ ಎಸಗಿದ್ದ ವೇಳೆ ವಾಹನದಲ್ಲಿ ಜವಾನರಿದ್ದರು ಎನ್ನಲಾಗಿದೆ. ಈ ಬ್ಲಾಸ್ಟ್ ನಲ್ಲಿ ಒಟ್ಟು ಮೂವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ DGP DM ಅವಸ್ಥಿ, ಈ IED ಬ್ಲಾಸ್ಟ್ ನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (DRG) ನ ಜವಾನರು ಹುತಾತ್ಮರಾಗಿದ್ದು ಹಲವು ಜವಾನರು ಗಾಯಗೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಛತ್ತೀಸ್‌ಘಡದಲ್ಲಿ ಮತ್ತೆ ಎನ್ಕೌಂಟರ್, ಇಬ್ಬರು ನಕ್ಸಲರು ಸಾವು


ಭೂಪೇಶ್ ಬಘೆಲ್, ಹುತಾತ್ಮ ಯೋಧರ ಪ್ರತಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಗಾಯಗೊಂಡ ಯೋಧರಿಗೆ ಅತ್ಯತ್ತಮ ಚಿಕಿತ್ಸೆ ನೀಡಲು ನಿರ್ದೇಶನಗಳನ್ನು ನೀಡಿದ್ದಾರೆ. ಇದಲ್ಲದೆ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆವಶ್ಯಕ ಕ್ರಮಗಳನ್ನು ಕೈಗೊಳ್ಳಲು ಅವರು ರಾಜ್ಯದ ಪೋಲೀಸ್ ಮಹಾನಿರ್ದೇಶಕರಿಗೆ ಸೂಚನೆಗಳನ್ನು ನೀಡಿದ್ದಾರೆ.


ಇದನ್ನೂ ಓದಿ-ಛತ್ತೀಸ್‌ಗಢದಲ್ಲಿ ಡೀಸೆಲ್ ಟ್ಯಾಂಕರ್ ಸ್ಫೋಟಿಸಿದ ನಕ್ಸಲರು; ಮೂವರು ನಾಗರಿಕರ ಸಾವು


ಘಟನೆಯ ಕುರಿತು ಮಾಹಿತಿ ನೀಡಿರುವ ನಾರಾಯಣಪುರ SP ಮೋಹಿತ್ ಗರ್ಗ್ ಬ್ಲಾಸ್ಟ್ ನಡೆದ ವೇಳೆ ಭದ್ರತಾ ಪಡೆಯ ಯೋಧರು ಬಸ್ ಮೂಲಕ ಪ್ರಯಾಣ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಬ್ಲಾಸ್ಟ್ ಬಳಿಕ ಬಸ್ ಪಲ್ಟಿ ಹೊಡೆದಿದೆ. ಇದರಿಂದ ಬಸ್ ನಲ್ಲಿದ್ದ ಹಲವು ಯಾತ್ರಿಗಳು ಗಾಯಗೊಂಡಿದ್ದಾರೆ. ಪ್ರಸ್ತುತ ಹೆಚ್ಚುವರಿ ತಂಡವನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು SP ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-Jharkhand: IED ಸ್ಫೋಟದಲ್ಲಿ 2 ಯೋಧರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.