ನವದೆಹಲಿ:  ಐಸಿಎಸ್‌ಇ ಮತ್ತು ಸಿಬಿಎಸ್‌ಇ ಅಂಗ ಸಂಸ್ಥೆಗಳು ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮರಾಠಿ ಭಾಷೆಯನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಹೇಳಿದ್ದಾರೆ. ಈಗಾಗಲೇ ರಾಜ್ಯೇತರ ಶಿಕ್ಷಣ ಮಂಡಳಿಗಳಿಗೆ ಸಹಯೋಗ ಹೊಂದಿರುವ ಶಾಲೆಗಳಲ್ಲಿ ಮರಾಠಿ ಭಾಷೆಯನ್ನು ಕಲಿಸಲು ಅವಕಾಶವಿದೆ ಎಂದು ಫಡ್ನವೀಸ್ ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದರು.


COMMERCIAL BREAK
SCROLL TO CONTINUE READING

"ಇದರ ಹೊರತಾಗಿಯೂ, ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಮರಾಠಿ ಭಾಷೆಯನ್ನು ಕಲಿಸದಿದ್ದರೆ, ನಾವು ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ"  ಎಂದು ಮುಖ್ಯಮಂತ್ರಿ ಹೇಳಿದರು. ಅಗತ್ಯವಿದ್ದರೆ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮರಾಠಿ ಭಾಷೆಯನ್ನು ಕಲಿಸಲು ಈಗಿರುವ ಕಾನೂನನ್ನು ತಿದ್ದುಪಡಿ ಮಾಡಬಹುದು ಎಂದು ಫಡ್ನವೀಸ್ ಹೇಳಿದರು. ಸದ್ಯ ಮರಾಠಿ ವಿಷಯವನ್ನು ಸಿಬಿಎಸ್ಇ ಮತ್ತು ಸಿಐಎಸ್ಸಿಇ ನಡೆಸುತ್ತಿರುವ ಶಾಲೆಗಳಲ್ಲಿ 8 ನೇ ತರಗತಿಯವರೆಗೆ ಕಡ್ಡಾಯ ವಿಷಯವಾಗಿದೆ.  


ರಾಜ್ಯೇತರ ಬೋರ್ಡ್ ಶಾಲೆಗಳಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸುವ ಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿದ ಶಿವಸೇನೆ ಎಂಎಲ್ಸಿ ನೀಲಂ ಗೊರ್ಹೆ ಅವರ ಪ್ರಶ್ನೆಯನ್ನು ಮುಖ್ಯಮಂತ್ರಿಗೆ ಕೇಳಿದರು. ರಾಜ್ಯೇತರ ಶಿಕ್ಷಣ ಮಂಡಳಿಗಳಿಗೆ ಹೊಂದಿರುವ ಶಾಲೆಗಳಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಹಲವಾರು ಲೇಖಕರು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.