ಕರೋನಾ ಕಾಲದಲ್ಲೊಂದು ಅಪರೂಪದ ಮದುವೆ ; ವಿಮಾನದಲ್ಲೇ ನೆರವೇರಿತು ವಿವಾಹ
ಈ ವಿಮಾನ ಮಧುರೈ ವಿಮಾನ ನಿಲ್ದಾಣದಿಂದ ತೂತುಕುಡಿಗೆ ಹಾರಾಟ ಆರಂಭಿಸಿತ್ತು. ಅಂದರೆ ಸುಮಾರು ಎರಡು ಗಂಟೆಗಳ ಹಾರಾಟ ಆದಾಗಿತ್ತು. ಈ ವಿಮಾನಯಾನದಲ್ಲಿ ವಧು, ವರರು ಮತ್ತು ಅವರ ಕುಟುಂಬಸ್ಥರು ಇದ್ದರು.
ಚೆನ್ನೈ : ಕರೋನಾ ಹಿನ್ನೆಲೆಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ (Lockdown) ಜಾರಿಯಲ್ಲಿದೆ. ಲಾಕ್ ಡೌನ್ ಇರುವುದರಿಂದ ಸಲ್ಲಾ ಸಭೆ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಮದುವೆ ಕಾರ್ಯಕ್ರಮಗಳಿಗೆ (Marriage) ಸೇರುವ ಜನರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಇಲ್ಲೊಂದು ವಿಶೇಷ ರೀತಿಯಲ್ಲಿ ವಿವಾಹ ನೆರವೇರಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಶೇಷ ಸಮಾರಂಭದಲ್ಲಿ ವಧು ವರರ ಎಲ್ಲಾ ಬಂಧು ಮಿತ್ರರೂ ಹಾಜರಿದ್ದರು.
ವಿಮಾನದಲ್ಲೇ ಸತಿಪತಿಗಳಾದ ಜೋಡಿ :
ಈ ವಿಮಾನ ಮಧುರೈ ವಿಮಾನ ನಿಲ್ದಾಣದಿಂದ (Airport) ತೂತುಕುಡಿಗೆ ಹಾರಾಟ ಆರಂಭಿಸಿತ್ತು. ಅಂದರೆ ಸುಮಾರು ಎರಡು ಗಂಟೆಗಳ ಹಾರಾಟ ಆದಾಗಿತ್ತು. ಈ ವಿಮಾನಯಾನದಲ್ಲಿ ವಧು, ವರರು ಮತ್ತು ಅವರ ಕುಟುಂಬಸ್ಥರು ಇದ್ದರು. ಸುಮಾರು 160 ಮಂದಿ ಈ ವಿಮಾನದಲ್ಲಿದ್ದರು. ವಿಮಾಣ ಮಧುರೈ ಮೀನಾಕ್ಷಿ ದೇವಸ್ಥಾನದ (Meenakshi Temple) ಮೇಲೆ ಹಾರಾಟ ನಡೆಸುವಾಗ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡಿಸಿದ್ದಾನೆ. ಅಲ್ಲಿಗೆ ತಮ್ಮ ಎಲ್ಲಾ ನೆಂಟರಿಷ್ಟರ ಸಮ್ಮುಖದಲ್ಲಿ ಈ ಜೊಡಿ ಸತಿಪತಿಗಳಾಗಿದ್ದಾರೆ.
ಇದನ್ನೂ ಓದಿ : Yaas Cyclone ಪರಿಣಾಮ : ಇಂದಿನಿಂದ ಮೇ 29 ರವರೆಗೆ 25 ರೈಲ್ವೆ ಸಂಚಾರ ರದ್ದು!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಫೋಟೋ :
ಈಗ ಈ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗಿವೆ. ಆಘಾತಕಾರಿ ಸಂಗತಿಯೆಂದರೆ, ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಯಾರೂ ಕೂಡಾ ಮಾಸ್ಕ್ (Mask) ಧರಿಸಿರಲಿಲ್ಲ. ಸಾಮಾಜಿಕ ಅಂತರ ಅನ್ನುವುದು ಅಲ್ಲಿ ಇರಲೇ ಇಲ್ಲ. ಸಾಮಾನ್ಯ ದಿನಗಳಲ್ಲಿ ನಡೆಯುವ ಮದುವೆಯಂತೆ ಇಲ್ಲಿ ಎಲ್ಲರೂ ಬಹಳ ಸಾಮಾನ್ಯವಾಗಿಯೇ ಕಂಡುಬಂದಿದ್ದಾರೆ. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವಿಲ್ಲದೆ (Social distancing) ಎಲ್ಲರೂ ಫೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯವೂ ಕಂಡು ಬಂತು.
ಕರೋನಾ ಶಿಷ್ಟಾಚಾರದ ಉಲ್ಲಂಘನೆ :
ಖಾಸಗಿ ವಿಮಾನಯಾನ ಸಂಸ್ಥೆ ಈ ಚಾರ್ಟರ್ಡ್ ಸೇವೆಗೆ ಅನುಮತಿ ನೀಡಿತ್ತು. ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮೋದನೆ ನೀಡಲಾಗಿತ್ತು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸೆಂಥಿಲ್ ವಲವಾನ್ ಹೇಳಿದ್ದಾರೆ. ಆದರೆ, ವಿಮಾನದಲ್ಲಿ ಮದುವೆ (Marriage) ನಡೆಸುವ ಬಗ್ಗೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಮಾನದಲ್ಲಿ ಈ ರೀತಿ ವಿವಾಹ ನೆರವೇರಿಸಿರುವುದು ಕರೋನಾ ಶಿಷ್ಟಾಚಾರದ (Corona guidelines) ನೇರ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ : ಟಾಟಾ ಸ್ಟೀಲ್
ಈ ಮದುವೆಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ವಿಮಾನಯಾನ ಸಂಸ್ಥೆಯಿಂದ ಪ್ರತಿಕ್ರಿಯೆ ಕೋರಲಾಗಿದೆ. ತನಿಖೆಗೆ ಆದೇಶಿಸಲಾಗಿದ್ದು, ಈ ವಿವಾಹದ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.