ಹೊಚ್ಚ ಹೊಸ Maruti Car ಗಳನ್ನು ಬಾಡಿಗೆಗೆ ಪಡೆಯಬೇಕೆ? ಕಂಪನಿ ಆರಂಭಿಸಿದೆ ಈ ನೂತನ ಸೇವೆ
ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಆಟೋ ಕಂಪನಿಗಳು ಕಾರು ಮಾರಾಟವನ್ನು ಹೆಚ್ಚಿಸಲು ಮತ್ತು ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ.
ನವದೆಹಲಿ: ಇನ್ಮುಂದೆ ನೀವು ನಿಮ್ಮ ಮನಸಿನ ಆಯ್ಕೆಯ ಮೇರೆಗೆ ಮಾರುತಿ ಸುಜುಕಿ ಕಾರುಗಳನ್ನು ಬಾಡಿಗೆಯ ಮೇಲೆ ಪಡೆಯಬಹುದಾಗಿದೆ. ಹೌದು, ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ , ತನ್ನ ವೆಹಿಕಲ್ ಆನ್ ಲೀಸ್ ಸಬ್ಸ್ಕ್ರಿಪ್ಶನ್ ಸೇವೆ ಆರಂಭಿಸಿದೆ. ಕಂಪನಿಯು ಇದನ್ನು 'ಮಾರುತಿ ಸುಜುಕಿ ಸಬ್ಸ್ಕ್ರಾಯಿಬ್' ಬ್ರಾಂಡ್ ಹೆಸರಿನಲ್ಲಿ ಪರಿಚಯಿಸಿದೆ.
ಸಾಮಾನ್ಯವಾಗಿ ಗುತ್ತಿಗೆ ಅಥವಾ ಬಾಡಿಗೆಗೆ ವಾಹನ ನೀಡುವ ಯೋಜನೆಯಲ್ಲಿ, ಕಂಪನಿಯು ಗ್ರಾಹಕರಿಗೆ ತನ್ನ ವೈಯಕ್ತಿಕ ಬಳಕೆಗಾಗಿ ಷರತ್ತುಬದ್ಧ ವಾಹನವನ್ನು ನಿಗದಿತ ಅವಧಿಗೆ ಒದಗಿಸುತ್ತದೆ. ಇದಕ್ಕಾಗಿ ಗ್ರಾಹಕರು ಕಾರನ್ನು ಪೂರ್ಣ ಬೆಲೆಗೆ ಖರೀದಿಸಬೇಕಾಗಿಲ್ಲ. ಕಾರಿನ ಅಂತಿಮ ಮಾಲೀಕತ್ವದ ಹಕ್ಕೂ ಕೂಡ ಕಂಪನಿಯ ಬಳಿಯೇ ಇರಲಿದೆ. ಗ್ರಾಹಕರು ಕಾರಿನ ಬಾಡಿಗೆಯನ್ನು ಅದರ ಬಳಕೆಯ ಅವಧಿ ಆಧರಿಸಿ ಪಾವತಿಸಬೇಕು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ, ಆರಂಭದಲ್ಲಿ ಪ್ರಾಯೋಗಿಕ ತತ್ವದ ಆದಾರದ ಮೇಲೆ ಈ ಯೋಜನೆ ಗುರುಗ್ರಾಮ್ ಹಾಗೂ ಬೆಂಗಳೂರಿನಲ್ಲಿ ಈ ಸೇವೆ ಜಾರಿಗೆ ತರಲಾಗಿದೆ ಎಂದು ಹೇಳಿದೆ. ಈ ಯೋಜನೆಯ ಅಡಿ ಗ್ರಾಹಕರು ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಜಾ ಮತ್ತು ಎರ್ಟಿಗಾವನ್ನು ಮಾರುತಿ ಸುಜುಕಿ ಅರೆನಾ ಮಾಧ್ಯಮದ ಮೂಲಕ ಮತ್ತು ಬಾಲೆನೊ, ಸಿಯಾಜ್ ಮತ್ತು ಎಕ್ಸ್‌ಎಲ್ ಕಾರುಗಳನ್ನು ನೆಕ್ಸ ಮೂಲಕ ಬಾಡಿಗೆಗೆ ಪಡೆಯಬಹುದಾಗಿದೆ.
ಈ ಸೇವೆ ಒದಗಿಸಲು ಕಂಪನಿ ಒರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಜಪಾನ್‌ನ ಒರಿಕ್ಸ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾಗಿದ್ದು ಈ ಕಂಪನಿ ಭಾರತದಲ್ಲಿ ಸೇವೆಯನ್ನು ನಿರ್ವಹಿಸಲಿದೆ.
ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಆಟೋ ಕಂಪನಿಗಳು ಕಾರು ಮಾರಾಟವನ್ನು ಹೆಚ್ಚಿಸಲು ಮತ್ತು ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಕಳೆದ ವರ್ಷ ಮಾರುತಿಯ ಪ್ರತಿಸ್ಪರ್ಧಿ ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ಇಂತಹ ಸೇವೆಯನ್ನು ಪ್ರಾರಂಭಿಸಿತ್ತು. ಇದನ್ನು ಆರು ನಗರಗಳಲ್ಲಿ ಸ್ವಂತ ಬಳಕೆಗಾಗಿ ಬಾಡಿಗೆಗೆ ವಾಹನಗಳನ್ನು ಒದಗಿಸುವ ರೆವ್ ಕಂಪನಿಯ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿತ್ತು.
ಇದೆ ರೀತಿ ಎಂಜಿ ಮೋಟಾರ್ ತನ್ನ ಕಾರುಗಳನ್ನು ಮೈಲೆಸ್ ಸಹಯೋಗದೊಂದಿಗೆ ಬಾಡಿಗೆಗೆ ನೀಡುತ್ತಿದೆ, ಕಂಪನಿಯು ಗ್ರಾಹಕರಿಗೆ ಸ್ವಂತ ಬಳಕೆಗಾಗಿ ಬಾಡಿಗೆಗೆ ವಾಹನಗಳನ್ನು ಒದಗಿಸುತ್ತದೆ. ಜರ್ಮನ್ ಕಾರು ಕಂಪನಿ ವೋಕ್ಸ್‌ವ್ಯಾಗನ್ ತನ್ನ ಎಲ್ಲಾ ಬಿಎಸ್ -6 ಕಾರುಗಳನ್ನು ಈ ವರ್ಷದ ಮೇ ತಿಂಗಳಿನಿಂದ ಗುತ್ತಿಗೆಗೆ ನೀಡುವ ಯೋಜನೆಯನ್ನು ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ಗ್ರಾಹಕರು ಕನಿಷ್ಠ ಎರಡು ನಾಲ್ಕು ವರ್ಷಗಳವರೆಗೆ ಕಾರನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು.