ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪ್ರೀಮಿಯಂ ಎಂಪಿವಿ ಎಕ್ಸ್‌ಎಲ್ 6 ಅನ್ನು ಬಿಡುಗಡೆ ಮಾಡಲಿದೆ. ಈ ಕಾರು ಮಾರುತಿ ಸುಜುಕಿ ಆರ್ಟಿಗಾ ಎಂಪಿವಿ ಆಧಾರಿತ ಕ್ರಾಸ್ ಓವರ್ ಆಗಿದ್ದು, ಶೈಲಿ ಸ್ವಲ್ಪ ಭಿನ್ನವಾಗಿರಲಿದೆ. ಎಂಪಿವಿ ಎಕ್ಸ್‌ಎಲ್ 6 ಕಾರು ದೆಹಲಿಯಲ್ಲಿ ಆಗಸ್ಟ್ 21 ರಂದು ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಮಾರುತಿಯ ಎಕ್ಸ್‌ಎಲ್ 6 ಕಾರಿನ  ಮೊದಲ ಸ್ಕೆಚ್ ಅನ್ನು ಕಂಪನಿಯು ಶುಕ್ರವಾರ ರಿಲೀಸ್ ಮಾಡಿದೆ.


COMMERCIAL BREAK
SCROLL TO CONTINUE READING

ಆರ್ಟಿಗಾ ಶೈಲಿಗಿಂತ ಸ್ವಲ್ಪ ಭಿನ್ನ
ಆಲ್ ನೆಕ್ಸಾ ಪ್ಲಾಟ್‌ಫಾರ್ಮ್ ಮೂಲಕ ಮಾರುತಿಯು ತನ್ನ ಹೊಸ ಎಕ್ಸ್‌ಎಲ್6 ಅನ್ನು ಮಾರಾಟ ಮಾಡಲಿದೆ. ಈಗಾಗಲೇ ಕಂಪನಿಯು ನೆಕ್ಸಾ ಪ್ಲಾಟ್‌ಫಾರ್ಮ್ ಮೂಲಕ ಇಗ್ನಿಸ್ ಮತ್ತು ಬಲ್ಲಿನೋ ಕಾರನ್ನು ಸಹ ಮಾರಾಟ ಮಾಡುತ್ತಿದೆ. ನೀವೂ ಸಹ ಮೂರು ಸಾಲುಗಳುಳ್ಳ ಪ್ರೀಮಿಯಂ ಎಂಪಿವಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಕಾರು ನಿಮ್ಮ ಬಜೆಟ್‌ಗೆ ಉತ್ತಮವಾದ ಕಾರು ಎಂದೇ ಹೇಳಬಹುದು. ಕಾರ್ ಶೈಲಿಯ ಬಗ್ಗೆ ಹೇಳುವುದಾದರೆ, ಇದು ಆರ್ಟಿಗಾಕ್ಕಿಂತ ಸ್ವಲ್ಪ ಭಿನ್ನವಾಗಿದೆ.


[[{"fid":"179358","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಎರಡು ಕ್ಯಾಪ್ಟನ್ ಆಸನಗಳನ್ನು ಹೊಂದಿರುವ ಆರು ಆಸನಗಳ ಕಾರು 
ಈ ಹೊಸ ಮಾದರಿಯ ಕಾರು ಬಾಡಿ ಕ್ಲಾಡಿಂಗ್, ಹೊಸ ಹೆಡ್‌ಲ್ಯಾಂಪ್, ಹೊಸ ಬಂಪರ್ ಮತ್ತು ಆಕರ್ಷಕ ಫ್ರಂಟ್ ಲುಕ್ ಹೊಂದಿದೆ. 6 ಆಸನಗಳಿರುವ ಈ ಕಾರು ಎರಡು ಕ್ಯಾಪ್ಟನ್ ಆಸನಗಳನ್ನು ಹೊಂದಿರುತ್ತದೆ. ಎಂಜಿನ್ ಬಗ್ಗೆ ಹೇಳುವುದಾದರೆ, ಇದು 1.5 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 105 ಎಚ್‌ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಹೊಂದಿದೆ. ಕಾರು 5 ಸ್ಪೀಡ್ ನ ಮ್ಯಾನುವಲ್ ಗೇರ್‌ಬಾಕ್ಸ್‌ಹೊಂದಿದ್ದು, ಆಗಸ್ಟ್ 21ಕ್ಕೆ ಬಿಡುಗಡೆಯಾಗಲಿದೆ.