ನವದೆಹಲಿ : ಎಮರ್ಜನ್ಸಿ ಸಂದರ್ಭದಲ್ಲಿ ಖಾಸಗೀ ಆಸ್ಪತ್ರೆಯಲ್ಲಿ (Private Hospital) ಚಿಕಿತ್ಸೆ ಪಡೆದರು ಎನ್ನುವ ಕಾರಣಕ್ಕೆ ಸರ್ಕಾರಿ ನೌಕರರ ಮೆಡಿಕ್ಲೈಮ್ ಗೆ ಕೊಕ್ಕೆ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಸಿಜಿಹೆಚ್ಎಸ್(CGHS) ಸೂಚಿಸಿರುವ ಆಸ್ಪತ್ರೆಗಳನ್ನು ಬಿಟ್ಟು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಎಂಬ ಕಾರಣಕ್ಕೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ (Employees & Pensioner’s) ಹಕ್ಕಿನ ಆರೋಗ್ಯ ವಿಮಾ ಸೌಲಭ್ಯವನ್ನು  (Health Insurance) ತಡೆಹಿಡಿಯುವಂತಿಲ್ಲ ಎಂದು ಖಡಕ್ಕಾಗಿ ಹೇಳಿದೆ ಸುಪ್ರೀಂ ಕೋರ್ಟ್ (Supreme Court).


COMMERCIAL BREAK
SCROLL TO CONTINUE READING

“ಸರ್ಕಾರ ಸೂಚಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ನೌಕರರ ಅಥವಾ ಪಿಂಚಣಿದಾರರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ತಡೆಹಿಡಿಯಬಾರದು. ನೌಕರರ ಹಕ್ಕಿನ ಆರೋಗ್ಯ ವಿಮೆಯನ್ನು ತಪ್ಪಿಸುವ ಅಧಿಕಾರ ಸರ್ಕಾರಕ್ಕಿಲ್ಲ. ಆದರೆ, ನೌಕರರು ಕ್ಲೈಮ್ (Mediclaim) ಮಾಡಿರುವ ಕೇಸ್ನ  ಸತ್ಯಾಸತ್ಯತೆ ಪರಿಶೀಲಿಸಬಹುದು. ಅವರು ಹೇಳಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆಯೇ ಇಲ್ಲವೇ ಎಂಬುದನ್ನು  ಪರಿಶೀಲಿಸಬಹುದು” ಎಂದು ಕೋರ್ಟ್ ಹೇಳಿದೆ. 


ಇದನ್ನೂ ಓದಿ :  7th Pay Commission: ಏಪ್ರಿಲ್ 2021 ರಿಂದ ಬದಲಾಗಬಹುದು ನಿಮ್ಮ PF, Gratuity ಕೊಡುಗೆ


“ಅಲ್ಲದೆ ಚಿಕಿತ್ಸೆಯ ಸತ್ಯಾಸತ್ಯತೆಯ ಬಗ್ಗೆ ತಜ್ಞ ವೈದ್ಯರ ಸಲಹೆ ಕೇಳಬಹುದು. ಸತ್ಯಾಂಶಗಳ ತಪಾಸಣೆ ಮಾಡಬಹುದು. ನಿಜಾಂಶಗಳ ಪರಿಶೀಲನೆ ಬಳಿಕ ಚಿಕಿತ್ಸಾ ವೆಚ್ಚ ರಿಲೀಸ್ (Reimburse) ಮಾಡಬಹುದು. ಆದರೆ, ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆದಿದೆ ಎಂಬ ಕಾರಣಕ್ಕೆ ವಿಮಾ ಸೌಲಭ್ಯ ತಡೆಹಿಡಿಯುವಂತಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ. 


ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನುವ ಕಾರಣಕ್ಕೆ ಸರ್ಕಾರಿ ನೌಕರರೊಬ್ಬರ ಆರೋಗ್ಯ ವಿಮಾ ಸೌಲಭ್ಯವನ್ನು  ಕೇಂದ್ರ ಸರ್ಕಾರ (Central government) ತಡೆಹಿಡಿದಿತ್ತು. ಈ ನಿರ್ಧಾರವನ್ನು ಅವರು ಸುಪ್ರೀಂ ಕೋರ್ಟ್ನ ಲ್ಲಿ (Supreme court) ಪ್ರಶ್ನಿಸಿದ್ದರು.  ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ನಿರ್ಧಾರ ಪ್ರಕಟಿಸಿದೆ.


ಇದನ್ನೂ ಓದಿ : Recruitment 2021: ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳಿಗೆ ಅರ್ಜಿ: SSLC ಆದವರಿಗೂ ಅವಕಾಶ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.