ಬೆಂಗಳೂರು: ಪ್ರತಿ ವರ್ಷ ಮೇ 1ರಂದು ದೇಶದಾದ್ಯಂತ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಈ ದಿನವನ್ನು ಮೀಸಲಿಡಲಾಗಿದೆ. ಇನ್ನು ವಿವಿಧ ದೇಶಗಳಲ್ಲಿ ಮೇ 1ರಂದು ಸಾರ್ವಜನಿಕ ರಜೆಯನ್ನಾಗಿ ಘೋಷಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: NRIಗಳಿಗಾಗಿ ಕರ್ನಾಟಕದಲ್ಲಿ ಜಾರಿಯಾಗಿದೆ ನೀತಿಗಳು: ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್‌


ಇನ್ನೊಂದು ವಿಶೇಷವೆಂದರೆ ಮೇ 1ರಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಸಂಘಗಳು ಸಂಭ್ರಮದಿಂದ ಈ ದಿನವನ್ನು ಸಾರ್ವಜನಿಕ ಉತ್ಸವದ ದಿನವನ್ನಾಗಿ ಆಚರಣೆ ಮಾಡುತ್ತದೆ. ಜೊತೆಗೆ ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಗೌರವಿಸಲಾಗುತ್ತದೆ. 


ಕಾರ್ಮಿಕರ ದಿನದ ಹಿನ್ನೆಲೆ ಮತ್ತು ಮಹತ್ವ: 
ದಿನದ 15 ಗಂಟೆಗಳ ಕಾಲ ಇದ್ದ ಕೆಲಸದ ಸಮಯದ ಮಿತಿಯನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಪ್ರತಿಭಟನೆ ನಡೆಸಲು ಮುಂದಾದರು. ಹೋರಾಟ ತೀವ್ರ ಸ್ವರೂಪ ಪಡಿದಿದ್ದರಿಂದ ಇದನ್ನು ಹತ್ತಿಕ್ಕಲು ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ದಮನಕಾರಿ ನೀತಿಯನ್ನು ಖಂಡಿಸಿ ಅಲ್ಲಿನ ಜನರು ಪ್ರತೀ ವರ್ಷ ಮೇ 1ರಂದು ಕಾರ್ಮಿಕ ದಿನವನ್ನಾಗಿ ಆಚರಿಸುವಂತೆ ಒತ್ತಾಯಿಸಿದರು. ಇದರ ಫಲವಾಗಿ 1916 ರ ಇಸವಿಯಲ್ಲಿ ಅಮೆರಿಕ ಸರ್ಕಾರ ಕೆಲಸದ ಕಾಲಮಿತಿಯನ್ನು ಕಡಿತಗೊಳಿಸಿ 8 ಗಂಟೆಗಳ ಕಾಲ ಕೆಲಸ ಎಂದು ಆದೇಶ ನೀಡಿತು. ಜೊತೆಗೆ ಮೇ ಒಂದರಂದು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲು ಮುಂದಾಯಿತು. 


ಭಾರತ ಮತ್ತು ಕಾರ್ಮಿಕರ ದಿನ: 
ಅಮೆರಿಕಾದಲ್ಲಿ ಕಾರ್ಮಿಕರ ದಿನ 1916 ರಲ್ಲಿಯೇ ಜಾರಿಗೆ ಬಂದಿದೆ. ಆದರೆ ಭಾರತದಲ್ಲಿ 1923 ನೇ ಇಸವಿಯ ಮೇ 1 ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಆಚರಣೆ ಮಾಡಲಾಗುತ್ತದೆ. ಕಾರ್ಮಿಕರ ದಿನಾಚರಣೆಯಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮತ್ತು ಕಾರ್ಮಿಕರಿಗೆ ಅಂದಿನ ದಿನ ರಜೆ ನೀಡಬೇಕೆಂದು ಸದನದಲ್ಲಿ ಮಸೂದೆ ಮಂಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. 


ಇದನ್ನು ಓದಿ: Sundar Pichai: ಗೂಗಲ್‌ ದೈತ್ಯ ಸಿಇಒ ಸುಂದರ್‌ ಪಿಚೈ ಆಸ್ತಿ ಮೌಲ್ಯ ಎಷ್ಟು ಗೊತ್ತಾ?


ಎರಡನೇ ಮಹಾಯುದ್ಧದ ಬಳಿಕ ಈ ದಿನವನ್ನು ಜಗತ್ತಿನಾದ್ಯಂತ ಹೆಚ್ಚಾಗಿ ಆಚರಿಸಲು ಪ್ರಾರಂಭಿಸಲಾಗಿದೆ. ಕಾರ್ಮಿಕರು ಸೇರಿ ಸಂಘಟನೆಗಳು ಈ ಆಚರಣೆಯಲ್ಲಿ ಹೆಚ್ಚಾಗಿ ಭಾಗವಹಿಸಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದ್ದವು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.