ನವದೆಹಲಿ: ಕಾಂಗ್ರೆಸ್ ವಿರುದ್ಧ ಬಿಎಸ್ಪಿ ಮಾಯಾವತಿ ಟೀಕಾಪ್ರಹಾರ ಮುಂದುವರೆಸಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖಾಸಗಿ ಚಾನಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸುತ್ತಾ ಮಾಯಾವತಿ ರಾಷ್ಟ್ರದ ಪತ್ರೀಕ ಅವರ ಕೊಡುಗೆಯನ್ನು ಗೌರವಿಸುವುದಾಗಿ ಹೇಳಿದ್ದಾರೆ.  


COMMERCIAL BREAK
SCROLL TO CONTINUE READING

"ಮಾಯಾವತಿ ರಾಷ್ಟ್ರೀಯ ಪ್ರತೀಕ, ಅವರು ನಮ್ಮ ಪಕ್ಷದವರಾಗದೆ ಇರಬಹುದು. ಬಿಎಸ್ಪಿಯವರಾಗಿರುವ ಅವರು ದೇಶಕ್ಕೆ ಸಂದೇಶವನ್ನು ನೀಡಿದ್ದಾರೆ ಆದ್ದರಿಂದ ಅವರನ್ನು ಗೌರವಿಸುತ್ತೇನೆ, ಅವರ ಬಗ್ಗೆ ಮೆಚ್ಚುಗೆ ಇದೆ. ನಾವು ರಾಜಕೀಯ ಹೋರಾಟವನ್ನು ಹೊಂದಿದ್ದೇವೆ ಆದ್ದರಿಂದ ನಾವು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕಾಗಿ ಹೋರಾಡುತ್ತೇವೆ. ಆದರೆ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು  ಗೌರವಿಸುತ್ತೇನೆ '' ಎಂದು ಗಾಂಧಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.


ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಹರಿಹಾಯ್ದಿರುವ ಮಾಯಾವತಿ ಬಿಜೆಪಿಯಷ್ಟೇ ಕಾಂಗ್ರೆಸ್ ಕೂಡ ಕೆಟ್ಟದ್ದು ಎಂದು ಅವರು ವಾಖ್ಯಾನಿಸಿದ್ದಾರೆ.ಇಂದು ರಾಜಸ್ತಾನದಲ್ಲಿನ ದಲಿತ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ " ಸುಪ್ರೀಂ ಕೋರ್ಟ್  ಕಾಂಗ್ರೆಸ್, ಪೊಲೀಸ್ ಮತ್ತು ರಾಜ್ಯ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕು  ಸಾಧ್ಯವಾದಷ್ಟು ಬೇಗ ಕ್ರಮವನ್ನು ಕೈಗೊಳ್ಳಬೇಕು " ಎಂದು ಆಗ್ರಹಿಸಿದರು.