Medical Miracle: Noidaನಲ್ಲೊಂದು ವಿಶಿಷ್ಟ ಪ್ರಕರಣ, 3 ವರ್ಷಗಳ ಬಳಿಕ ಮತ್ತೆ ಬಡಿದುಕೊಳ್ಳಲಾರಂಭಿಸಿದ ವ್ಯಕ್ತಿಯ ನಿಂತುಹೋದ ಹೃದಯ
Medical Miracle - ಈ ವ್ಯಕ್ತಿ ಇರಾಕ್ನ ಪ್ರಜೆ. ಅವರ ಹೆಸರು ಹನಿ ಜವಾದ್ ಮೊಹಮ್ಮದ್. ಅವರು 2018 ರಲ್ಲಿ ಇಲ್ಲಿಗೆ ಬಂದರು. ಅವರ ಪ್ರಾಣ ರಕ್ಷಿಸಲು, ವೈದ್ಯರು ಆತನ ದೇಹದಲ್ಲಿ ಕೃತಕ ಹೃದಯ ಅಂದರೆ ವೆಂಟ್ರಿಕಲ್ ಅಸಿಸ್ಟ್ ಡಿವೈಸ್ ಅನ್ನು ಅಳವಡಿಸಿದ್ದರು. ಅದನ್ನು ಇದೀಗ ತೆಗೆದುಹಾಕಲಾಗಿದೆ. ವೈದ್ಯರ ಪ್ರಕಾರ, ವಿಶ್ವಾದ್ಯಂತ ಇಂತಹ ಕೇವಲ 2 ಅಥವಾ 3 ಪ್ರಕರಣಗಳು ಮಾತ್ರ ವರದಿಯಾಗಿವೆ.
ನೋಯೇಡಾ: Medical Miracle - ನೋಯ್ಡಾದಲ್ಲಿ (Noida)ಅಚ್ಚರಿಯ ಪ್ರಕರಣವೊಂದು ಬಳಕಿಗೆ ಬಂದಿದೆ. ಇಲ್ಲಿ ವಾಸಿಸುವ ವ್ಯಕ್ತಿಯ ಹೃದಯ 3 ವರ್ಷಗಳ ಹಿಂದೆ ನಿಂತುಹೋಗಿತ್ತು (Heart Fail). ಅಂದರೆ ಅವನ ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರು ಆತನ ಜೀವವನ್ನು ಉಳಿಸಲು ಕೃತಕ ಹೃದಯವನ್ನು (Artificial Heart) ಹಾಕಿದ್ದರು, ಆದರೆ ಇದೀಗ 3 ವರ್ಷಗಳ ನಂತರ ಇದ್ದಕ್ಕಿದ್ದಂತೆ ಅವರ ನೈಸರ್ಗಿಕ ಹೃದಯ (Origina Heart) ಮತ್ತೆ ಬಡಿದುಕೊಳ್ಳಲು ಆರಂಭಿಸಿದ್ದು, ವೈದ್ಯರು ಆತನ ಎದೆಯಿಂದ ಕೃತಕ ಹೃದಯವನ್ನು ಹೊರತೆಗೆದಿದ್ದಾರೆ.
ಭಾರತದಲ್ಲಿ ಈ ರೀತಿಯ ಪ್ರಕರಣ (Medical Miracle) ವರದಿಯಾಗಿದ್ದು ಇದೇ ಮೊದಲು ಎಂದು ವೈದ್ಯರು ಹೇಳಿದ್ದಾರೆ. ಇದುವರೆಗೆ ವಿಶ್ವಾದ್ಯಂತ ಇಂತಹ ಕೇವಲ 2 ಅಥವಾ 3 ಪ್ರಕರಣಗಳು ಮಾತ್ರ ವರದಿಯಾಗಿವೆ, ಇದರಲ್ಲಿ ರೋಗಿಯ ಹೃದಯ ಮತ್ತೆ ಚೆನ್ನಾಗಿ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಅವರಿಗೆ ಯಾಂತ್ರಿಕ ಕೃತಕ ಹೃದಯದ ಅವಶ್ಯಕತೆ ಬಿದ್ದಿಲ್ಲ.
ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ನೋಯ್ಡಾದ ಫೋರ್ಟಿಸ್ ಹಾರ್ಟ್ ಮತ್ತು ವ್ಯಾಸ್ಕುಲರ್ ಇನ್ಸ್ಟಿಟ್ಯೂಟ್ ನ (Fortis Heart And Vesicular Institute) ಅಧ್ಯಕ್ಷ ಡಾ.ಅಜಯ್ ಕೌಲ್, ಈ ವ್ಯಕ್ತಿ ಇರಾಕ್ ನ (Iraq Patient) ಪ್ರಜೆಯಾಗಿದ್ದಾನೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅವನ ಹೆಸರು ಹನಿ ಜವಾದ್ ಮೊಹಮ್ಮದ್. ಅವರು 2018 ರಲ್ಲಿ ಭಾರತಕ್ಕೆ ಆಗಮಿಸಿದ್ದರು. ಆಗ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಅವನು ಹಾಸಿಗೆಯ ಮೇಲೆ ಮಲಗಿಕೊಂಡಿರುತ್ತಿದ್ದರು. ಹೃದಯ ಕಸಿಗಾಗಿ ಹೃದಯವನ್ನು ಪಡೆಯುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಆತನ ಜೀವವನ್ನು ಉಳಿಸಲು, ವೈದ್ಯರು ಆತನ ದೇಹದಲ್ಲಿ ಕೃತಕ ಹೃದಯ ಅಂದರೆ ವೆಂಟ್ರಿಕಲ್ ಅಸಿಸ್ಟ್ ಡಿವೈಸ್ ಅನ್ನು ಅಳವಡಿಸಿದ್ದರು.
ಇದೀಗ ಮೂರು ವರ್ಷಗಳ ಬಳಿಕ ಪವಾಡ ಎಂಬಂತೆ ಘಟನೆ ನಡೆದಿದೆ. ಆ ವ್ಯಕ್ತಿಯ ಹೃದಯ ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದೆ. ಈಗ ಆ ವ್ಯಕ್ತಿಗೆ ಕೃತಕ ಹೃದಯದ ಅವಶ್ಯಕತೆ ಇಲ್ಲ. ಕೃತಕ ಹೃದಯ ಅಳವಡಿಸಿದ ಎರಡು ವಾರಗಳ ಬಳಿಕ ಆತನಿಗೆ ಡಿಸ್ಚಾರ್ಜ್ ನೀಡಲಾಗಿತ್ತು ಮತ್ತು ನಂತರ ಆತ ಇರಾಕ್ ಗೆ ತೆರಳಿದ್ದಾನೆ. ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆಗಾಗಿ ವ್ಯಕ್ತಿ ಭಾರತಕ್ಕೆ ಭೇಟಿ ನೀಡಬೇಕು.
ಇದನ್ನೂ ಓದಿ-
ವೈದ್ಯರ ಪ್ರಕಾರ ಕೃತಕ ಹೃದಯ ಎಂದರೆ LAVD ಎದೆಯ ಒಳಭಾಗಕ್ಕೆ ಅಳವಡಿಸಲಾಗುತ್ತದೆ. ಈ ಯಂತ್ರದ ತಂತಿ ದೇಹದ ಹೊರಭಾಗದಲ್ಲಿರುತ್ತದೆ. ಇದಕ್ಕಾಗಿ ಎದೆಗೆ ರಂಧ್ರ ಮಾಡಲಾಗುತ್ತದೆ ಮತ್ತು ಈ ಯಂತ್ರ ಬ್ಯಾಟರಿ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಬೇಕು. ಅಷ್ಟೇ ಅಲ್ಲ ದಿನನಿತ್ಯ ಡ್ರೆಸ್ಸಿಂಗ್ ಕೂಡ ಮಾಡಬೇಕು.
ಇದನ್ನೂ ಓದಿ-
ಆತ ಭಾರತಕ್ಕೆ ಬಂದಾಗ ನಾವು ಆತನನ್ನು ಪರೀಕ್ಷಿಸಿದಾಗ ಆತನ ಹೃದಯವು ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಇದರ ನಂತರ ಯಂತ್ರದ ವೇಗವನ್ನು ಕಡಿಮೆಗೊಳಿಸಲಾಯಿತು, ಆದರೆ ಈ ಯಂತ್ರವು ಕಾರ್ಯನಿರತವಾಗಿರಲು ಅನುಮತಿಸಲಾಯಿತು. ವೈದ್ಯರು ಆತನನ್ನು ಎರಡು ವರ್ಷಗಳ ಕಾಲ ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ಅಂತಿಮವಾಗಿ ಇದೀಗ ಆ ವ್ಯಕ್ತಿಯ ಕೃತಕ ಹೃದಯವನ್ನು ತೆಗೆಯಲಾಗಿದೆ.
ಇದನ್ನೂ ಓದಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.