ಶಿಲ್ಲಾಂಗ್: ಮೇಘಾಲಯ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮುಕುಲ್ ಸಂಗ್ಮಾ ಅವರು ಅಂಪತಿ ಮತ್ತು ಸಾಂಗ್ಸಕ್  ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

2010 ರಿಂದ ಮೇಘಾಲಯ ಮುಖ್ಯಮಂತ್ರಿಯಾಗಿದ್ದ ಸಂಗ್ಮಾ ಅವರು ಬಿಜೆಪಿ ಪ್ರತಿಸ್ಪರ್ಧಿ ಬಕುಲ್ ಚ ಹಜೊಂಗ್ ಅವರನ್ನು 6,000 ಮತಗಳಿಂದ ಸೋಲಿಸಿ ಅಂಪತಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.


ಅಂತೆಯೇ ರಾಷ್ಟ್ರೀಯ ಪೀಪಲ್ಸ್ ಪಾರ್ಟಿಯ ಪ್ರತಿಸ್ಪರ್ಧಿ ನಿಹಿಮ್ ಡಿ ಶಿರಾ ಅವರನ್ನು 1,300 ಮತಗಳ ಅಂತರದಿಂದ ಸೋಲಿಸಿ ಸಾಂಗ್ಸಕ್ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿದ್ದು, ಬಿಜೆಪಿ ಮೂರನೇ ಸ್ಥಾನ ಪಡೆದಿದೆ. 


ಮುಖ್ಯಮಂತ್ರಿ ಪತ್ನಿ ಡಿಕಾಂಚಿ ಡಿ ಶಿರಾ ಅವರೂ ಸಹ ಬಿಜೆಪಿ ಪ್ರತಿಸ್ಪರ್ಧಿ ಪ್ರೇಮಾನಂದ ಕೊಚ್ ಅವರನ್ನು 6,000 ಮತಗಳಿಂದ ಸೋಲಿಸುವ ಮೂಲಕ ಮಹೇಂದ್ರಗಂಜ್ ಕ್ಷೇತ್ರದಿಂದ ಗೆದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.


60 ಸದಸ್ಯರ ಮೇಘಾಲಯ ವಿಧಾನಸಭೆಯ 59 ಸ್ಥಾನಗಳಿಗೆ ಫೆಬ್ರವರಿ 27 ರಂದು ಮತದಾನ ನಡೆದಿತ್ತು.