ನವದೆಹಲಿ: ಮೇಘಾಲಯದ ಪೂರ್ವ ಖಾಸಿ ಬೆಟ್ಟದಲ್ಲಿರುವ ತನ್ನ ಮನೆಯಲ್ಲಿ 37 ವರ್ಷದ ವ್ಯಕ್ತಿಯನ್ನು ಭಾನುವಾರ ಮುಂಜಾನೆ ಹತ್ಯೆಗೈದದ್ದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.ಬುಡಕಟ್ಟು ಮತ್ತು ಬುಡಕಟ್ಟೆತರ ಗುಂಪುಗಳ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 3 ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿರ್ಕಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಗೇಬ್ರಿಯಲ್ ಇಂಗ್ರಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವ್ಯಕ್ತಿಯ ಹತ್ಯೆಯಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಮೃತಪಟ್ಟವನನ್ನು ಉಪಾಸ್ ಉದ್ದೀನ್ ಎಂದು ಗುರುತಿಸಲಾಗಿದೆ ಎಂದು ಇಂಗ್ರಾಯ್ ಹೇಳಿದ್ದಾರೆ.


ಹಿಂಸಾತ್ಮಕ ಘರ್ಷಣೆಗಳ ಹಿನ್ನಲೆಯಲ್ಲಿ ಹೇರಿದ ರಾತ್ರಿ ಕರ್ಫ್ಯೂ ಅನ್ನು ಭಾನುವಾರ ಬೆಳಿಗ್ಗೆ 8 ಗಂಟೆಗೆ ತೆಗೆದುಹಾಕಲಾಯಿತು, ಲುಮ್ಡಿಯೆಂಗ್ಜ್ರಿ ಮತ್ತು ಸದರ್ ಪೊಲೀಸ್ ಠಾಣೆ ಮತ್ತು ಕಂಟೋನ್ಮೆಂಟ್ ಬೀಟ್ ಹೌಸ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ, ಅನಿರ್ದಿಷ್ಟ ಕರ್ಫ್ಯೂ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಇಚಮತಿ ಪ್ರದೇಶದಲ್ಲಿ ಶುಕ್ರವಾರ ಮತ್ತು ಶಿಲ್ಲಾಂಗ್‌ನ ಇವ್ದು ಮಾರುಕಟ್ಟೆಯಲ್ಲಿ ಶನಿವಾರ ನಡೆದ ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 9 ಗಂಟೆಯಿಂದ ಕರ್ಫ್ಯೂ ವಿಧಿಸಲಾಗಿದೆ ಎಂದು ಅವರು ಹೇಳಿದರು.ಮೇಘಾಲಯ ಜಲಾನಯನ ಅಭಿವೃದ್ಧಿ ಪ್ರಾಧಿಕಾರದ ಉದ್ಯೋಗಿಯೊಬ್ಬರನ್ನು ಶನಿವಾರ ರಾತ್ರಿ ಮಾವತಬಾದಲ್ಲಿ ಹಲ್ಲೆ ಮಾಡಲಾಗಿದೆ ಮತ್ತು ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ ಎಂದು ಇಂಗ್ರಾಯ್ ಹೇಳಿದ್ದಾರೆ.


ಇಂಡೋ-ಬಾಂಗ್ಲಾದೇಶದ ಗಡಿಗೆ ಸಮೀಪದಲ್ಲಿರುವ ಇಚಮತಿ ಪ್ರದೇಶದಲ್ಲಿ ನಡೆದ ರ್ಯಾಲಿಯ ಸಂದರ್ಭದಲ್ಲಿ  ನಡೆದ ಘರ್ಷಣೆಯಲ್ಲಿ ಮೂರು ಸಾವುಗಳ ನಂತರ ಪರಿಸ್ಥಿತಿ ಉದ್ವಿಗ್ನವಾಗಿದೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಅಧಿಕಾರಿಗಳು ಲುಮ್ಡಿಯೆಂಗ್ಜ್ರಿ ಮತ್ತು ಸದರ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಸ್ತರಿಸಲಾಗಿದೆ ಮತ್ತು ಆ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಗಂಭೀರ ಕುಸಿತ ಉಂಟಾಗಬಹುದೆಂಬ ಭಯದಿಂದ ಕಂಟೋನ್ಮೆಂಟ್ ಬೀಟ್ ಹೌಸ್ ಅನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.