ನವದೆಹಲಿ: ಅಮಿತಾಬ್ ಬಚ್ಚನ್ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ ಮತ್ತು ಅವರು ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಏತನ್ಮಧ್ಯೆ,  OLX ನಲ್ಲಿ ಒಂದು ಕಾರು ಮಾರಾಟದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಇದು ಬಿಗ್ ಬಿ ನ ಮರ್ಸಿಡಿಸ್ನಂತೆ ಕಾಣುತ್ತದೆ. ಈ ಪೋಸ್ಟ್ ನಲ್ಲಿ  2007 ರ ಮಾದರಿಯ ಈ ಕಾರಿನ ಬೆಲೆ 9.9 ಲಕ್ಷ ಎಂದು ತಿಳಿಸಿದ್ದು, ಅಮಿತಾಬ್ ಬಚ್ಚನ್ ಅಭಿಮಾನಿಯಾಗಿದ್ದರೆ, ಅಂತಹವರು ಈ ಕಾರನ್ನು ಖರೀದಿಸಬಹುದು ಎಂದು ಹೇಳಲಾಗಿದೆ. ಗಮನಾರ್ಹವಾಗಿ,  ಅಮಿತಾಭ್ ಬಚ್ಚನ್ ಅವರ ಕಾರು ಸಂಗ್ರಹದಲ್ಲಿ ಮರ್ಸಿಡಿಸ್ ಬೆಂಝ್ ವಿ ಸೇರಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

OLX ನಲ್ಲಿ ಪೋಸ್ಟ್ ಮಾಡಿದ ಈ ಜಾಹೀರಾತಿನಲ್ಲಿ ಕಾರು ತನ್ನ ಮೂರನೇ ಮಾಲೀಕನ ಹತ್ತಿರದಲ್ಲಿದೆ ಮತ್ತು 50 ಸಾವಿರ ಮೈಲುಗಳಷ್ಟು ಪ್ರಯಾಣಿಸಿದೆ ಎಂದು ತಿಳಿಸಲಾಗಿದೆ. ಕಾರಿನ ಬೆಲೆ 9 ಲಕ್ಷ 99 ಸಾವಿರ. ಸ್ಥಳ- ಬಾಂದ್ರಾ ವೆಸ್ಟ್ ಮುಂಬೈ ಎಂದು ಹೇಳಲಾಗಿದೆ.



ಲೆಕ್ಟಸ್ ಎಲ್ಎಕ್ಸ್ 570, ಮರ್ಸಿಡಿಸ್-ಮೇಬ್ಯಾಕ್ ಎಸ್ 500, ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಮತ್ತು ಪೊರ್ಸೆ ಕ್ಯಾಮೆನ್ ಸೇರಿದಂತೆ ಅಮಿತಾಬ್ ಬಚ್ಚನ್ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೆ, ಅಮಿತಾಬ್ ಬಚ್ಚನ್ ದೇಶದ ಅತ್ಯಂತ ಬೇಡಿಕೆ ಮತ್ತು ಐಷಾರಾಮಿ ಕಾರು ರೋಲ್ಸ್ ರಾಯ್ಸ್ನ ಮಾಲೀಕರಾಗಿದ್ದಾರೆ.