PADMA AWARDS 2020: ಮೇರಿ ಕೋಮ್ ಮತ್ತು ಇತರೆ 7 ಕ್ರೀಡಾಪಟುಗಳಿಗೆ ಪದ್ಮ ಪ್ರಶಸ್ತಿ
ಖ್ಯಾತ ಕ್ರಿಕೆಟಿಗ ಜಹೀರ್ ಖಾನ್, ಫುಟ್ಬಾಲ್ ಆಟಗಾರ್ತಿ ಓಯಿನಾಮ್ ಬೆಮ್ ಬೆಮ್, ಶೂಟರ್ ರಿತು ರಾಯ್, ಬಿಲ್ಲುಗಾರ ತರುಣ್ ದೀಪ್ ರಾಯ್ ಹಾಗೂ ಹಾಕಿ ಆಟಗಾರ್ತಿಯರಾದ ರಾಣಿ ರಾಮ್ ಪಾಲ್, ಎಂ.ಪಿ ಗಣೇಶ್ ಅವರಿಗೆ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನವದೆಹಲಿ: ಒಲಿಂಪಿಕ್ ಪದಕ ವಿಜೇತೆ ಬಾಕ್ಸರ್ ಎಂ.ಸಿ. ಮೇರಿ ಕೊಮ್ ಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನವಾಗಿರುವ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕೇಂದ್ರ ಸರ್ಕಾರ ಶನಿವಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಇನ್ನೊಂದೆಡೆ ಬ್ಯಾಡ್ಮಿಂಟನ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಪಿ.ವಿ. ಸಿಂಧೂ ಅವರಿಗೂ ಕೂಡ ದೇಶದ ಮೂರನೇ ಅತ್ಯುನ್ನತ ನಾಗರಿಕ ಸನ್ಮಾನವಾಗಿರುವ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮೇರಿ ಕೊಮ್ ರೀತಿಯೇ ಪಿ.ವಿ.ಸಿಂಧೂ ಕೂಡ ಒಲಿಂಪಿಕ್ ನಲ್ಲಿ ಪದಕಗಿಟ್ಟಿಸಿಕೊಂಡಿದ್ದಾರೆ. ಇದೇ ವರ್ಷ ಟೋಕಿಯೋನಲ್ಲಿ ನಡೆಯಲಿರುವ ಒಲಿಂಪಿಕ್ ನಲ್ಲಿ ಈ ಇಬ್ಬರೂ ಕೂಡ ಪದಕ ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಕಳೆದ ವರ್ಷ ನಡೆದ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮೇರಿ ಕೋಮ್ ಕಂಚಿನ ಪದಕ ಪಡೆದಿದ್ದರು. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅವರು ಪಡೆದ 8ನೇ ಪದಕವಾಗಿತ್ತು. ಈ ಪಂದ್ಯಾವಳಿಯಲ್ಲಿ ಇದುವರೆಗೆ ಮೇರಿ ಕೊಮ್ ಒಟ್ಟು 6 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಇನ್ನೊಂದೆಡೆ ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪಿ.ವಿ. ಸಿಂಧೂ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದರು. ಬಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದದ ಪಡೆದ ಭಾರತದ ಮೊದಲ ಆಟಗಾರ್ತಿಯಾಗಿದ್ದಾರೆ. ರಿಯೋ ಒಲಿಂಪಿಕ್ ನಲ್ಲಿ ಸಿಂಧೂ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಈ ಉಭಯರನ್ನು ಹೊರತುಪಡಿಸಿ ಟೀಂ ಇಂಡಿಯಾ ಮಾಜಿ ಆಟಗಾರ ಜಹೀರ್ ಖಾನ್, ಭಾರತದ ಮಹಿಳಾ ಹಾಕಿ ಟೀಂನ ನಾಯಕಿ ರಾಣಿ ರಾಮಪಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ರಾಣಿ ರಾಮಪಾಲ್ ನಾಯಕತ್ವದಲ್ಲಿ ಭಾರತೀಯ ಹಾಕಿ ತಂಡ ಟೋಕಿಯೋ ಒಲಿಂಪಿಕ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದೆ.
ಈ ಇಬ್ಬರನ್ನು ಹೊರತುಪಡಿಸಿ ಪದ್ಮಶ್ರೀ ಪ್ರಶಸ್ತಿ ಪಟ್ಟಿಯಲ್ಲಿ ಫುಟ್ಬಾಲ್ ಆಟಗಾರ್ತಿ ಓಯಿನಾಮ್ ಬೆಮ್ ಬೆಮ್ ದೇವಿ, ಭಾರತೀಯ ಪುರುಷರ ಹಾಕಿ ತಂಡದ ಮಾಜಿ ಆಟಗಾರ ಎಂ.ಪಿ. ಗಣೇಶ್, ಶೂಟರ್ ಜೀತು ರಾಯ್, ಬಿಲ್ಲುಗಾರ ತರುಣ್ ದೀಪ್ ರಾಯ್ ಅವರಿಗೂ ಕೂಡ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.
[[{"fid":"184345","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]ಈ ಎಲ್ಲ ಆಟಗಾರರನ್ನು ಹೊರತುಪಡಿಸಿ ಇತ್ತೀಚೆಗೆ ನಿಧನರಾದ ಪೇಜಾವರ ಶ್ರೀ, ಜಾರ್ಜ್ ಫರ್ನಾಂಡಿಸ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕರ್ನಾಟಕದ ತುಳಸಿಗೌಡ, 'ಅಕ್ಷರ ಸಂತ' ಹರೆಕಲ್ ರಾಜಪ್ಪ, ಕೆ.ವಿ ಸಂಪತ್ ಕುಮಾರ್, ಜಯಲಕ್ಷ್ಮಿ, ಉದ್ಯಮಿ ವಿಜಯ್ ಸಂಕೇಶ್ವರ್, ಬೆಂಗಳೂರು ಗಂಗಾಧರ್ ಸೇರಿದಂತೆ ಒಟ್ಟು 118 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.