ನವದೆಹಲಿ: ಮೀಟೂ ಅಭಿಯಾನದ ಭಾಗವಾಗಿ ಮಹಿಳಾ ಪತ್ರಕರ್ತೆಯರು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ  ಎಂ.ಜೆ.ಅಕ್ಬರ್ ಈಗ ತಳ್ಳಿಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಈಗ ತಮ್ಮ ಮೇಲೆ ಮಾಡಿರುವ ಈ ಆರೋಪಗಳೆಲ್ಲವೋ ಸಹಿತ  ತಮ್ಮ ತೇಜೋವಧೆ ನಡೆಸಿರುವ ರಾಜಕೀಯ ಕುತಂತ್ರ ಎಂದು ಅವರು ತಿಳಿಸಿದ್ದಾರೆ.ಅಲ್ಲದೆ  ತಮ್ಮ ವಿರುದ್ದ ಮಾಡಿರುವ ಸುಳ್ಳು ಆರೋಪಗಳ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ  ಅವರು ತಿಳಿಸಿದ್ದಾರೆ.ಪತ್ರಕರ್ತೆ  ಘಜಾಲ ವಹಾಬ್ ಮತ್ತು ಪ್ರಿಯಾ ರಮಣಿ ಅವರು ಎಂ ಜೆ ಅಕ್ಬರ್ ಅವರ ಮೇಲೆ ಗಂಭೀರ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು ಈ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು.




ಈ ಲೈಂಗಿಕ ಕಿರುಕುಳದ ಆರೋಪಗಳು ಬಂದ ಸಂದರ್ಭದಲ್ಲಿ ವಿದೇಶ ಪ್ರವಾಸದಲ್ಲಿದ್ದ ಸಚಿವ ಅಕ್ಬರ್ ಅವರು ಈಗ  ಈಗ ಭಾರತಕ್ಕೆ ಆಗಮಿಸಿದ್ದು ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ ಆದ್ದರಿಂದ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಎಂ.ಜೆ.ಅಕ್ಬರ್ ಅವರು  ಪತ್ರಕರ್ತರಾಗಿ ಮತ್ತು ಸಂಪಾದಕರಾಗಿ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು ಅದರಲ್ಲಿ ಪ್ರಮುಖವಾಗಿ ದಿ ಸಂಡೆ ಗಾರ್ಡಿಯನ್ ಟೆಲಿಗ್ರಾಫ್,ಏಷ್ಯನ್ ಏಜ್ ನಂತಹ  ಪತ್ರಿಕೆಗಳು ಪ್ರಮುಖವಾದವುಗಳು.