ನವದೆಹಲಿ:  ಸಂಸತ್ತಿನಲ್ಲಿ ಗೃಹ ಸಚಿವಾಲಯವು ನೀಡಿದ ಒಂದು ವರದಿಯು ದೇಶದಲ್ಲಿ ಟೆಲಿಫೋನ್ ನಂತಹ ಮೂಲ ಸೌಕರ್ಯವೂ ಇಲ್ಲದಂತ 267 ಪೋಲಿಸ್ ಠಾಣೆಗಳು ಇವೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದೆ. ವರದಿಯ ಪ್ರಕಾರ, ದೇಶದಲ್ಲಿ ಸ್ವಂತ ಕಟ್ಟದವಿಲ್ಲದ 863 ಪೊಲೀಸ್ ಠಾಣೆಗಳಿದ್ದರೆ, ಯಾವುದೇ ವಾಹನ ವ್ಯವಸ್ಥೆಯನ್ನು ಹೊಂದಿರದ 273 ಪೊಲೀಸ್ ಠಾಣೆಗಳಿವೆ ಎಂದರೆ ಆಶ್ಚರ್ಯವಾಗುತ್ತಿದೆಯೇ! ಆದರೆ ಇದು ಸತ್ಯ.


COMMERCIAL BREAK
SCROLL TO CONTINUE READING

ಭಾರತದ ಸಂವಿಧಾನದ ಪ್ರಕಾರ, ಪೊಲೀಸರು ಮತ್ತು ಕಾನೂನು ವ್ಯವಸ್ಥೆ ರಾಜ್ಯ ಸರ್ಕಾರದ ಸುಪರ್ದಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರವು ಪೋಲಿಸ್ ಪಡೆಗಳನ್ನು ಸುಸಜ್ಜಿತಗೊಳಿಸಿ ಆಧುನಿಕಗೊಳಿಸಬೇಕೆಂದು ರಾಜ್ಯಗಳಿಗೆ ಆಧುನೀಕರಣ ವ್ಯವಸ್ಥೆ ಕಲ್ಪಿಸಲು ನೆರವು ಒದಗಿಸುತ್ತದೆ ಎಂದು ಕೇಂದ್ರ ರಾಜ್ಯ ಗೃಹ ಸಚಿವ ಹಂಸರಾಜ್ ಅಹಿರ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.  


ಹಾಗೆ ನೋಡಿದರೆ ದೇಶದ ಪೊಲೀಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಂಖ್ಯೆ ಬಹಳ ಕಡಿಮೆಯಾಗಿದೆ. ಪ್ರಸ್ತುತ ಜನಸಂಖ್ಯೆ ಹಾಗೂ ಪೊಲೀಸ್ ಸಿಬ್ಬಂದಿ ಅನುಪಾತವನ್ನು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೊಲೀಸ್ ಪಡೆ ಅತಿ ಕಡಿಮೆ ಎಂದು ತಿಳಿದುಬಂದಿದೆ. ಭಾರತದಲ್ಲಿ, ಈ ಅನುಪಾತವು ಒಂದು ಲಕ್ಷ ಜನಸಂಖ್ಯೆಗೆ 142 ಮಾತ್ರ, ಆದರೆ ಪಶ್ಚಿಮ ದೇಶದಲ್ಲಿ ಲಕ್ಷ ಜನಸಂಖ್ಯೆಗೆ 250 ಪೋಲೀಸರು ಇದ್ದಾರೆ.


ಹಲವೆಡೆ ಪೊಲೀಸರಿಗೆ ಆಧುನಿಕ ಸಂವಹನ ಸಾಧನಗಳಿಲ್ಲ, ಜೊತೆಗೆ ಬುಲೆಟ್ ಪ್ರೂಫ್ ಜಾಕೆಟ್ ಗಳು, ಹೆಲ್ಮೆಟ್ ಸೇರಿದಂತೆ ಸೂಕ್ತ ರಕ್ಷಣಾ ಸೌಲಭ್ಯಗಳ ಕೊರತೆ ಇರುವುದು ಕೂಡ ಗಮನಿಸಬೇಕಾದ ಅಂಶವಾಗಿದೆ.