ಶಿಮ್ಲಾ: ಭಾರತೀಯ ವಾಯುಪಡೆಯ ಮಿಗ್-21 (MiG-21) ಜೆಟ್ ವಿಮಾನವು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಟ್ಟಾ ಜಾಟಿಯಾನ್ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದ್ದು, ಪೈಲೆಟ್ ಮೃತಪಟ್ಟಿರುವುದಾಗಿ ಎಎನ್ಐ ವರದಿ ಮಾಡಿದೆ.



COMMERCIAL BREAK
SCROLL TO CONTINUE READING

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ರಕ್ಷಣಾ ತಂಡ ನಾಪತ್ತೆಯಾಗಿದ್ದ ಪೈಲೆಟ್ ಹುಡುಕಾಟದಲ್ಲಿ  ನಿರತವಾಗಿತ್ತು. ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳ ಚದುರಿಹೊಗಿದ್ದ ಕಾರಣ ಪೈಲೆಟ್ ಹುಡುಕಾಟ ಕಷ್ಟವಾಗಿತ್ತು. ಆದರೀಗ ಕಡೆಗೂ ಪೈಲೆಟ್'ನನ್ನು ಪತ್ತೆ ಮಾಡಿರುವ ರಕ್ಷಣಾ ತಂಡ ಪೈಲೆಟ್ ಸಾವನ್ನಪ್ಪಿರುವುದಾಗಿ ದೃಢಪಡಿಸಿದೆ. ಈ ಘಟನೆಗೆ ಕಾರಣ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ.


ಘಟನೆ ಬಗ್ಗೆ ಮಾಹಿತಿ ನೀಡಿದ ಕಾಂಗ್ರಾ ಎಸ್ಪಿ ಸಂತೋಷ್ ಪಾಟಿಯಲ್, ಪಂಜಾಬ್'ನ ಪಠಾಣ್'ಕೋಟ್ನಿಂದ ಹೊರಟ ಮಿಗ್-21 ಜೆಟ್ ವಿಮಾನ ನಂತರ ಸಂಪರ್ಕ ಕಳೆದುಕೊಂಡಿತ್ತು. ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಬೆಂಕಿ ನಂದಿಸಲಾಗಿದೆ. ವಿಮಾನದ ಅವಶೇಷಗಳು ಚದುರಿಹೋಗಿವೆ" ಎಂದಿದ್ದಾರೆ.


ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.