ರಾಜಸ್ತಾನದ ಸಿರೋಹಿ ಬಳಿ ಮಿಗ್-27 ಪತನ: ಅಪಾಯದಿಂದ ಪೈಲಟ್ ಪಾರು
ಭಾರತದ ವಾಯುಪಡೆ ವಿಮಾನವೊಂದು ಭಾನುವಾರ ಪತನಗೊಂಡಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವದೆಹಲಿ: ಭಾರತದ ವಾಯುಪಡೆ ವಿಮಾನವೊಂದು ಭಾನುವಾರ ಪತನಗೊಂಡಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪತನಗೊಂಡಿರುವ ವಿಮಾನವನ್ನು ಅವರು ಮಿಗ್ 27 ಯುಪಿಜಿ ಎಂದು ಗುರುತಿಸಲಾಗಿದ್ದು. ಭಾನುವಾರದಂದು ಅದು ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಪರಿಣಾಮ ಪತನಗೊಂಡಿದೆ ಎಂದು ವಾಯುಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರದಂದು ಮಿಗ್ -27 ವಿಮಾನವು ಸಿರೋಹಿಯ ಶಿಯೋಗನ್ ಸಮೀಪದ ಗೋದಾನಾದಲ್ಲಿ ದಿನನಿತ್ಯದ ಕಾರ್ಯಾಚರಣೆ ನಡೆಸಿತ್ತು, ಈ ವೇಳೆ ಅದು ಇಂಜಿನ್ ನಲ್ಲಿನ ಸಮಸ್ಯೆಯಿಂದಾಗಿ ಪತನಗೊಂಡಿದೆ. ಇದಾದ ನಂತರ ಅವಶೇಷಗಳು ಪತ್ತೆಯಾಗಿವೆ.
ಈ ವರ್ಷ ಇದು ಎರಡನೇ ಘಟನೆಯಾಗಿದ್ದು, ಇದಕ್ಕೂ ಮೊದಲು ಜಮ್ಮು ಕಾಶ್ಮೀರದ ಬಂಡ್ಲಾಮ್ ನಲ್ಲಿ ಇದೇ ರೀತಿಯ ಘಟನೆ ಜರುಗಿತ್ತು, ಆಗ ಆ ದುರಂತದಲ್ಲಿ ಸುಮಾರು 4 ಪೈಲೆಟ್ ಗಳು ಸಾವನ್ನಪ್ಪಿದ್ದರು.