ನವದೆಹಲಿ:  ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳ ನಂತರ ಮುಂಬೈ ಕಾಂಗ್ರೆಸ್  ಅಧ್ಯಕ್ಷ ಮಿಲಿಂದ್ ದಿಯೋರಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ದೆಹಲಿಯಲ್ಲಿ ಪ್ರಮುಖ ಜವಾಬ್ದಾರಿ ವಹಿಸಬಹುದು ಎಂದು  ಅವರು ಸುಳಿವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಿಲಿಂದ್ ದಿಯೋರಾ “ನಾನು ಪಕ್ಷವನ್ನು ಒಗ್ಗೂಡಿಸುವ ಹಿತದೃಷ್ಟಿಯಿಂದ ಎಂಆರ್‌ಸಿಸಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ್ದೆ. ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ನಾನು ಸಹ ರಾಜೀನಾಮೆ ನೀಡಬೇಕೆಂದು ಭಾವಿಸಿದೆ. ಈಗ ನಾನು ಸಮಿತಿಯೊಂದನ್ನು ರಚಿಸಲು ಸಲಹೆ ನೀಡಿದ್ದೇನೆ, ಅವರು ಸೂಕ್ತ ಹೆಸರುಗಳನ್ನು ಗುರುತಿಸಲಿದ್ದಾರೆ. ಈಗ ನಾನು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿಯನ್ನು ಎದುರು ನೋಡುತ್ತಿದ್ದೇನೆ.  ಜೊತೆಗೆ ಮುಂಬೈ ಕಾಂಗ್ರೆಸ್ ನ್ನು ಒಗ್ಗೂಡಿಸುವುದಾಗಲಿ ಅಥವಾ ಮಾರ್ಗದರ್ಶನ ಮಾಡುವುದಾಗಲಿ ಅದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.


ಮುಂಬೈನ ಎಲ್ಲಾ ಆರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಲೋಕಸಭಾ ಚುನಾವಣೆಗೆ ಕೇವಲ ಒಂದು ತಿಂಗಳ ಮೊದಲುಸಂಜಯ್ ನಿರುಪಮ್ ಅವರ ಬದಲಿಗೆದಿಯೋರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು