ನವದೆಹಲಿ : ಗಣರಾಜ್ಯೋತ್ಸವ ಸಮಾರಂಭವು ಇಂದು ದೆಹಲಿಯ ಐತಿಹಾಸಿಕ ವಿಜಯ ಚೌಕದಲ್ಲಿ ಬೀಟಿಂಗ್ ರಿಟ್ರೀಟ್ನೊಂದಿಗೆ ಮುಕ್ತಾಯಗೊಂಡಿತು. 


COMMERCIAL BREAK
SCROLL TO CONTINUE READING

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೂರು ಸೇವೆಗಳ ಮುಖ್ಯಸ್ಥರು ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 



ಸೇನೆ, ನೌಕಾಪಡೆ, ವಾಯುಪಡೆ, ರಾಜ್ಯ ಪೋಲಿಸ್, ಸೆಂಟ್ರಲ್ ಆರ್ಮ್ಡ್ ಪೋಲಿಸ್ ಫೋರ್ಸ್ನ ವಾದ್ಯವೃಂದವು ಸಂಗೀತದೊಂದಿಗೆ 26 ಪ್ರದರ್ಶನಗಳನ್ನು ಪ್ರಸ್ತುತಪಡಿಸಿದವು. 



ಅದರಲ್ಲಿ ದಿ ಇಂಡಿಯನ್ ಸೋಲ್ಜರ್ಸ್, ಝೀಲಂ, ಹೆರಾನಾ ನೃತ್ಯ ಸರಿತ, ಕುಂದನ್ ಸಿಂಗ, ಮಯೂರ್ ನೃತ್ಯ, ನಟರಾಜ್, ಬ್ಯಾಟಲ್ ಆಫ್ ದಿ ಸ್ಕೈ, ದ ಗ್ರೇಟ್ ಮಾರ್ಷಲ್, ದಿ ಬ್ರೇವ್ ವಾರಿಯರ್ಸ್, ಐಎನ್ಎಸ್ ನೀಲಗಿರಿ, ನಮಸ್ತೆ ಇಂಡಿಯಾ, ಜೈ ಭಾರತಿ, ಅಮೃತ್ ವಾನಿ, ವೀರ್ ಗೂರ್ಖಾ ಮತ್ತು ಸೆರೆ- ಇ-ಜವಾನ್ ಗಳನ್ನೂ ಒಳಗೊಂಡಿತ್ತು. 


ಈ ಕಾರ್ಯಕ್ರಮವು ಸಾರೆ ಜಹಾನ್ ಸೇ ಅಚ್ಚಾ ಜನಪ್ರಿಯ ಸಂಗೀತದೊಂದಿಗೆ ಆರಂಭವಾಯಿತು. 



ಸೇನಾ ಬ್ಯಾಂಡ್ಗಳು, ಕೊಳಲುಗಳು ಮತ್ತು ಡ್ರಮ್ ಬ್ಯಾಂಡ್ಗಳ ಸಂಗೀತ ಅಲ್ಲಿದ್ದ ಪ್ರೇಕ್ಷಕರನ್ನು ಮನಸೂರೆಗೊಂಡಿತು.