ಯಾದಗಿರಿ: ದೇಶಾದ್ಯಂತ ರೈತ ಸಂಘಟನೆಗಳು ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದ  ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹವು ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಇಂದು ಪ್ರಾರಂಭವಾಗಲಿದೆ.


COMMERCIAL BREAK
SCROLL TO CONTINUE READING

ಒಟ್ಟು 11 ದಿನಗಳ ನಡೆಯುವ ಈ ರೈತರ ಹೋರಾಟದಲ್ಲಿ ಜೈಕಿಸಾನ್ ಆಂದೋಲನ್, ಕರ್ನಾಟಕ ರಾಜ್ಯ ರೈತ ಸಂಘ, ರೈತು ಜಂಟಿ ಕಾರ್ಯ ಸಮಿತಿ, ಕಿಸಾನ್ ಸಂಘರ್ಷ ಸಮಿತಿ ಹಾಗೂ ಇನ್ನು ಹಲವಾರು ರೈತ ಸಂಘಟನೆಗಳು ಭಾಗವಹಿಸಲಿವೆ.


ಈ ಸತ್ಯಾಗ್ರಹ ರೂಪುರೇಷೆಗಳ ಕುರಿತಾಗಿ ಪ್ರತಿಕ್ರಯಿಸಿರುವ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ "ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹ  ಪ್ರಮುಖವಾಗಿ ಗಾಂಧೀಜಿಯವರ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡು ಸಿದ್ದಗೊಳಿಸಿದಂತಹ ಹೋರಾಟದ ಮಾದರಿಯಾಗಿದ್ದು. ಈ ಹೋರಾಟದಲ್ಲಿ ಅಧಿಕಾರಿಗಳು, ಹೋರಾಟಗಾರರು, ಪತ್ರಕರ್ತರಿಗೂ ಕೂಡಾ ಆಹ್ವಾನ ನೀಡಲಾಗಿದೆ" ಎಂದು ತಿಳಿಸಿದ್ದಾರೆ.


ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಿ ರೈತರ ಲೂಟಿಯನ್ನು ತಡೆಗಟ್ಟುವ ವಿಚಾರವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ಯಾದಗಿರಿ ಜಿಲ್ಲೆಯಿಂದ ಆರಂಭವಾಗುವ ಈ ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹದಲ್ಲಿ  ಕೃಷಿ ಮಾರುಕಟ್ಟೆಗಳಿಗೆ ಭೇಟಿ ನೀಡಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. 


ಮೊದಲ ಹಂತದ ಕನಿಷ್ಠ ಬೆಂಬಲ ಬೆಲೆ ಸತ್ಯಾಗ್ರಹದ ವಿವರ ಇಂತಿದೆ:


  • ಮಾರ್ಚ್ 14, 2018:  ಯಾದಗಿರಿ, ಕರ್ನಾಟಕ

  • ಮಾರ್ಚ್ 15, 2018:  ಕರ್ನೂಲ್, ಆಂಧ್ರ

  • ಮಾರ್ಚ್ 16, 2018:  ಸೂರ್ಯಪೇಟ್ & ಕೋಡಾದ್, ತೆಲಂಗಾಣ

  • ಮಾರ್ಚ್ 18 ಮತ್ತು 19, 2018: ಶ್ರೀ ಗಂಗಾನಗರ್, ರಾಜಸ್ಥಾನ

  • ಮಾರ್ಚ್ 20,  2018:  ಅಲ್ವಾರ್, ರಾಜಸ್ಥಾನ

  • ಮಾರ್ಚ್ 21, 2018: ರೆವಾರಿ, ಹರಿಯಾಣ

  • ಮಾರ್ಚ್ 22   2018:  ನುಹ್, ಹರಿಯಾಣ

  • ಮಾರ್ಚ್ 25, 2018:  ರುದ್ರಪುರ, ಉತ್ತರಖಂಡ್

  • ಮಾರ್ಚ್ 26, 2018: ಪ್ರತಾಪ್ ಘಡ್, ಉತ್ತರ ಪ್ರದೇಶ

  • ಮಾರ್ಚ್ 27 ಮತ್ತು 31,  2018: ಮಧ್ಯಪ್ರದೇಶ