ಇನ್ಫೋಸಿಸ್ ಸಿಇಒಗೆ ಕೇಂದ್ರ ಸರ್ಕಾರದಿಂದ ಸಮನ್ಸ್ ಜಾರಿ
ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಮುಂದುವರಿದಿರುವ ತೊಡಕುಗಳನ್ನು ವಿವರಿಸಲು ಹಣಕಾಸು ಸಚಿವಾಲಯವು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್ ಗೆ ಸಮನ್ಸ್ ಜಾರಿ ಮಾಡಿದೆ.ಜೂನ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ನವದೆಹಲಿ: ನೂತನ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಮುಂದುವರಿದಿರುವ ತೊಡಕುಗಳನ್ನು ವಿವರಿಸಲು ಹಣಕಾಸು ಸಚಿವಾಲಯವು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್ ಗೆ ಸಮನ್ಸ್ ಜಾರಿ ಮಾಡಿದೆ.ಜೂನ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಪಾರೇಖ್ ಮತ್ತು ಹಿರಿಯ ಕಾರ್ಯನಿರ್ವಾಹಕ ಪ್ರವೀಣ್ ರಾವ್ ಅವರಿಗೆ ಹೆಚ್ಚು ಮಾನವೀಯ ಮತ್ತು ಬಳಕೆದಾರ ಸ್ನೇಹಿ ಪೋರ್ಟಲ್ ಮಾಡಲು ಕೇಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಇದನ್ನೂ ಓದಿ : SBI Alert : ಡೆಬಿಟ್ ಕಾರ್ಡ್ ಗ್ರಾಹಕರೇ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ
ಇನ್ಫೋಸಿಸ್ (Infosys) ಹೊಸ ಪೋರ್ಟಲ್ ಅನ್ನು ವಿನ್ಯಾಸಗೊಳಿಸಿದೆ, ಇದು ಜೂನ್ 7 ರಂದು ಸೇವೆಯನ್ನು ಆರಂಭಿಸಿದ ನಂತರ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವುದನ್ನು ಕಂಡುಕೊಂಡಿದೆ,ಈ ವಿಚಾರವಾಗಿ ಬಳಕೆದಾರರು ಆಗಾಗ್ಗೆ ಸೈಟ್ನ ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡುವುದಲ್ಲದೆ ಹಣಕಾಸು ಸಚಿವರನ್ನು ಟ್ಯಾಗ್ ಮಾಡಿದ್ದಾರೆ.
LIC Policy : ನಿತ್ಯ 199 ರೂ. ಹೂಡಿಕೆ ಮಾಡಿ 94 ಲಕ್ಷ ರೂಪಾಯಿ ಪಡೆಯಿರಿ !
ಇಲ್ಲಿಯವರೆಗೆ, ಇನ್ಫೋಸಿಸ್ ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರು ವಾರಕ್ಕೊಮ್ಮೆ ಶ್ರೀಮತಿ ಸೀತಾರಾಮನ್ ಅವರಿಗೆ ವರದಿ ಮಾಡುತ್ತಿದ್ದರು.ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸಿದ ಶ್ರೀ ನಿಲೇಕಣಿ ಅವರು ಕೆಲವೇ ದಿನಗಳಲ್ಲಿ ಅವುಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.ತೆರಿಗೆ ರಿಟರ್ನ್ಸ್‌ಗಳ ಇ-ಫೈಲಿಂಗ್‌ನಲ್ಲಿ ಸೈಟ್‌ನ ತೊಂದರೆ ಬಳಕೆದಾರರಿಗೆ ಸಮಸ್ಯೆಯನ್ನುಂಟು ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ