Serum Institute Corona ಲಸಿಕೆಗೆ ಸರಕಾರ ಅನುಮತಿ ನೀಡಿಲ್ಲವೆ? ಇಲ್ಲಿದೆ ವಾಸ್ತವಿಕತೆ
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕೋವಿಡ್ -19 ಲಸಿಕೆಯ ತುರ್ತು ಬಳಕೆಗಾಗಿ ಅರ್ಜಿ ಸಲ್ಲಿಸಿದೆ.
ನವದೆಹಲಿ: Serum Institute Of India ಕೊವಿಡ್ 19 ಲಸಿಕೆಗೆ ಅನುಮೋದನೆ ನೀಡಲಾಗಿಲ್ಲ ಎಂಬ ಕುರಿತ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ತಳ್ಳಿಹಾಕಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ವರದಿಗಳು ನಕಲಿ ಸುದ್ದಿಗಲಾಗಿವೆ ಎಂದು ಸಚಿವಾಲಯ ಹೇಳಿದೆ.
ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮೂಲಗಳು ನೀಡಿರುವ ವರದಿ ಪ್ರಕಾರ, ಇಂದಿನ ಸಬ್ಜೆಕ್ಟ್ ಎಕ್ಸ್ ಪರ್ಟ್ ಕಮಿಟಿ (SEC) ಸಭೆಯಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಹಾಗೂ ಭಾರತ ಬಯೋಟೆಕ್ ನೀಡಿರುವ ದತಾಂಶಗಳು ಪರಿಪೂರ್ಣವಾಗಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ ಇನ್ನಷ್ಟು ಮಾಹಿತಿ ನೀಡಲು ಸೂಚಿಸಲಾಗಿದೆ. ಆದರೆ, ಇದರ ಅರ್ಥ ಅನುಮತಿ ನಿರಾಕರಣೆ ಎಂದಲ್ಲ ಎಂದು ಸಚಿವಾಲಯ ಹೇಳಿದೆ. ಕಂಪನಿ ಪುನಃ ಸಂಪೂರ್ಣ ಮಾಹಿತಿ ತರಲಿದ್ದು, ಸಮಿತಿಯ ಶಿಫಾರಸ್ಸಿನ ಮೇಲೆ DCGI ಅಂತಿಮ ಅನುಮೋದನೆ ನೀಡಲಿದೆ.
ಕಳೆದ ಕೆಲವು ದಿನಗಳಲ್ಲಿ, ಕೋವಿಡ್ -19 ಲಸಿಕೆಯ ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್, ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಫೈಜರ್ ಈ ಮೂರು ಕಂಪನಿಗಳು ಕಂಟ್ರೋಲರ್ ಜನರಲ್ ಆಫ್ ಇಂಡಿಯನ್ ಡ್ರಗ್ಸ್ (DGCI) ಯಿಂದ ಅನುಮತಿ ಕೋರಿವೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ- Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ
ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನೀಡಿರುವ ಮಾಹಿತಿ ಪ್ರಕಾರ DGCI ಕೊವಿಡ್ 19 ಲಸಿಕೆಗಳ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದು, ಅವುಗಳಲ್ಲಿ ಎಲ್ಲಾ ಅಥವಾ ಕೆಲವು ಲಸಿಗೆಗಳಿಗೆ ಲೈಸನ್ಸ್ ನೀಡುವ ನಿರೀಕ್ಷೆ ಇದೆ ಎಂದಿದೆ.
ಇದನ್ನು ಓದಿ-Side Effect ಆರೋಪ, Serum Instituteನಿಂದ 100 ಕೋಟಿ ರೂ.ಮಾನಹಾನಿ ಬೆದರಿಕೆ
ಇದೆ ತಿಂಗಳ ಆರಂಭದಲ್ಲಿ ಬ್ರಿಟನ್ ಫೈಜರ್-ಬಯೋಂಟೆಕ್ ನ ಕೊವಿಡ್ 19 ಲಸಿಕೆ ಬಳಕೆಗೆ ಅನುಮತಿ ನೀಡಿದೆ. ಈ ರೀತಿ ಮಾಡಿದ ಮೊದಲ ದೇಶ ಬ್ರಿಟನ್ ಆಗಿದೆ. ಬ್ರಿಟನ್ ನಲ್ಲಿ ಸೋಮವಾರದಿಂದ ಜನಸಾಮಾನ್ಯರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. 90 ವರ್ಷದ ಮಾರ್ಗರೆಟ್ 'ಮ್ಯಾಗಿ' ಕಿನಾನ್ ಗೆ ಮೊದಲ ಲಸಿಕೆ ನೀಡಲಾಗಿದೆ.