ನವದೆಹಲಿ: ಮಹಿಳಾ ಪತ್ರಕರ್ತೆಯರಿಂದ ಮೀಟೂ ಲೈಂಗಿಕ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಕೊನೆಗೂ ಒತ್ತಡಕ್ಕೆ ಮಣಿದು ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಮೀಟೂ ಅಭಿಯಾನದ ಭಾಗವಾಗಿ ಹಲವಾರು ಮಹಿಳಾ ಪತ್ರಕರ್ತೆಯರಿಂದ ಆರೋಪ ಬಂದ ಹಿನ್ನಲೆಯಲ್ಲಿ ಈಗ ಅವರು ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಆರೋಪ ಮಾಡಿರುವ ಪತ್ರಕರ್ತೆಯರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಸಚಿವ ಅಕ್ಬರ್ ಈಗ ಪ್ರತಿಪಕ್ಷಗಳಿಂದ ಹಿಡಿದು ಎಲ್ಲ ವಿಭಾಗಗಳಿಂದ ಭಾರಿ ವಿರೋಧ ಬಂದ ಹಿನ್ನಲೆಯಲ್ಲಿ ಈಗ ರಾಜಿನಾಮೆ ನೀಡಿದ್ದಾರೆ.



ಮೀಟೂ ಆರೋಪಗಳು ಬಂದಾಗ ನೈಜಿರಿಯಾ ವಿದೇಶಿ ಪ್ರವಾಸದಲ್ಲಿದ್ದ ಎಂಜೆ ಅಕ್ಬರ್ ಅವರು ಅಲ್ಲಿಂದ ವಾಪಸ್ ಆದ ನಂತರ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದರು. ಅಲ್ಲದೆ ತಮ್ಮ ವ್ಯಕ್ತಿತ್ವವನ್ನು ತೇಜೋವಧೆ ಮಾಡುವ ಕಾರಣಕ್ಕಾಗಿ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದ್ದರು.ಆರೋಪ ಮಾಡಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸಹ ಮುಂದಾಗಿದ್ದರು.


ಮೀಟೂ ಅಭಿಯಾನದ ಭಾಗವಾಗಿ ಲೈಂಗಿಕ ಆರೋಪ ಮಾಡಿರುವ ಬಹುತೇಕ ಮಹಿಳಾ ಪತ್ರಕರ್ತೆಯರು ಎಂ.ಜೆ.ಅಕ್ಬರ್ ಅವರು ಸಂಪಾದಕರಾಗಿದ್ದ ವೇಳೆಯಲ್ಲಿ ಅವರ ಬಳಿ ಕೆಲಸ ಮಾಡಿದವರಾಗಿದ್ದಾರೆ.