ಚೆನ್ನೈ: ದ್ರಾವಿಡ ಮುನ್ನೆಟ್ರ ಕಳಗಂ(ಡಿಎಂಕೆ) ಪಕ್ಷದ ನೂತನ ಅಧ್ಯಕ್ಷರಾಗಿ ಎಂ.ಕೆ. ಸ್ಟಾಲಿನ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆ ಮಾಡಿದರೆ, ದುರೈ ಮುರುಗನ್ ಅವರನ್ನು ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಯಿತು.


ಇಷ್ಟು ದಿನ ಪಕ್ಷದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕರುಣಾನಿಧಿ ಅವರ ಪ್ರೀತಿಯ ಪುತ್ರ ಸ್ಟಾಲಿನ್ ಭಾನುವಾರ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಎಂ.ಕೆ. ಸ್ಟಾಲಿನ್ ಅವರ ಸಹೋದರ ಎಂ.ಕೆ. ಅಳಗಿರಿ ಅವರ ಬೆದರಿಕೆಗೆ ಬಗ್ಗದ ಸ್ಟಾಲಿನ್ ಬೆಂಬಲಿಗರು ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಿದರು. 


1969ರಲ್ಲಿ ಪಕ್ಷದ ಅಧ್ಯಕ್ಷರಾಗಿ, 49 ವರ್ಷಗಳ ಕಾಲ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಡಿಎಂಕೆ ವರಿಷ್ಠ ಕರುಣಾನಿಧಿ ಮೂರು ವಾರಗಳ ಹಿಂದೆ ನಿಧನರಾದ ಬಳಿಕ ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನ ತೆರವಾಗಿತ್ತು.