ಪಂಚರಾಜ್ಯ ಚುನಾವಣೆಯಲ್ಲಿ ಕೇವಲ 3 ಮತಗಳಿಂದ ಗೆದ್ದ ಅದೃಷ್ಟಶಾಲಿ!
ಮಿಜೋರಾಂನ ತಿವಾಲ್ ಕ್ಷೇತ್ರದ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷದ ಅಭ್ಯರ್ಥಿಯನ್ನು ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟವಂತ ಅಭ್ಯರ್ಥಿ ಎಂದು ಹೇಳಬಹುದು.
ಚುನಾವಣೆಯಲ್ಲಿ, ಮತದಾನದ ಸಮಯದಲ್ಲಿ ಮಾತ್ರವಲ್ಲ, ಮತಎಣಿಕೆ ಸಮಯದಲ್ಲೂ ಅಭ್ಯರ್ಥಿಗಳ ಹೃದಯ ಬಡಿತ ಜೋರಾಗಿಯೇ ಇರುತ್ತದೆ. ಕೇವಲ ಒಂದೇ ಒಂದು ಮತದಿಂದ ಗೆದ್ದರೂ ಗೆಲುವು ಗೆಲುವೇ ಎಂದು ಹೇಳುತ್ತಾರೆ. ಅಂತರ ಎಷ್ಟೇ ಇರಲಿ ಗೆಲುವು ಸಾಧಿಸುವುದು ನಿಜವಾಗಿಯೂ ಅದೃಷ್ಟವೇ ಸರಿ. ಈ ಸಂದರ್ಭದಲ್ಲಿ ಮಿಜೋರಾಂನ ತಿವಾಲ್ ಕ್ಷೇತ್ರದ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷದ ಅಭ್ಯರ್ಥಿಯನ್ನು ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟವಂತ ಅಭ್ಯರ್ಥಿ ಎಂದು ಹೇಳಬಹುದು.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇವಲ ಮೂರು ಮತಗಳಿಂದ ಲಾಲ್ಚಂದ್ ದಾದಾ ಜಯ ಸಾಧಿಸಿದ್ದಾರೆ. ಈ ಚುನಾವಣೆಗಳಲ್ಲಿ ಅತಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಈತ. ಮಿಜೋರಾಮ್ನಲ್ಲಿ ಐಝಾಲ್ ಉತ್ತರ -3 ರಿಂದ ಮಿಜೊ ನ್ಯಾಶನಲ್ ಫ್ರಂಟ್ನ ಸಿ-ಲಾಲ್ಮುಪುಯಾಯಾ 434 ಮತಗಳಿಂದ ಜಯಗಳಿಸಿದ್ದಾರೆ. ಐಝಾಲ್ ದಕ್ಷಿಣ-2 ರಲ್ಲಿ ಸ್ವತಂತ್ರ ಅಭ್ಯರ್ಥಿ ಡೆಂಘಿಂಗ್ಥಾ 179 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಗೆದ್ದಿದೆ. ರಾಜ್ಯದ 40 ಸ್ಥಾನಗಳಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಸೋಲನುಭವಿಸಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಗೆದ್ದಿದೆ. ರಾಜ್ಯದ 40 ಸ್ಥಾನಗಳಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ರಾಜ್ಯದಲ್ಲಿ ಎಂಎನ್ಎಫ್ 37.6 ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ 30.2 ರಷ್ಟು ಮತಗಳನ್ನು ಪಡೆದುಕೊಂಡಿತು.