ಪವಿತ್ರ ಅಮರನಾಥ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಸಹಾಯವಾಗುವಂತೆ ಅಮರನಾಥ ದೇಗುಲ ಮಂಡಳಿ ಮೊಬೈಲ್ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಿದೆ. ಈ ಅಪ್ಲಿಕೇಶನ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.


COMMERCIAL BREAK
SCROLL TO CONTINUE READING

ಅಮರನಾಥ ಯಾತ್ರಾರ್ಥಿಗಳ ಪ್ರಯಾಣವನ್ನು ಸುಲಭಗೊಳಿಸುವ ಸಲುವಾಗಿ ಶ್ರೀ ಅಮರನಾಥಜಿ ಯಾತ್ರಾ ಎಂಬ ಮೊಬೈಲ್ ಆ್ಯಪ್ ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್ “ಯಾತ್ರಾರ್ಥಿ ತನ್ನ ಯಾತ್ರೆಯನ್ನು ಯೋಜಿಸಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಇದು ಗುಹೆ ದೇಗುಲದಲ್ಲಿ ಲಭ್ಯವಿರುವ ಸೌಲಭ್ಯಗಳು, ಹವಾಮಾನ ಮುನ್ಸೂಚನೆಗಳು, ಮಾರ್ಗ ಮಾಹಿತಿ, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು, ಆರೋಗ್ಯ ಸಂಬಂಧಿತ ಮಾಹಿತಿ ಮತ್ತು FAQ ಗಳನ್ನು ಉಲ್ಲೇಖಿಸುತ್ತದೆ”ಎಂದು ಅಮರನಾಥ ದೇಗುಲ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.


ಈ ಮೊಬೈಲ್ ಅಪ್ಲಿಕೇಶನ್ ಹೆಲಿಕಾಪ್ಟರ್ ಟಿಕೆಟ್ ಬುಕಿಂಗ್ಗಾಗಿ ಬಳಕೆದಾರರಿಗೆ ಲಿಂಕ್ ಅನ್ನು ಒದಗಿಸುತ್ತದೆ. ಅಲ್ಲದೆ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್‌ನಲ್ಲಿ ಎಸ್‌ಒಎಸ್ ಕಾಲ್ ಅಲರ್ಟ್ ಸಿಸ್ಟಮ್ ಸಹ ಇರುತ್ತದೆ.


ಯಾತ್ರಾ ಪರವಾನಗಿ ಫಾರ್ಮ್ ಸಂಖ್ಯೆಯನ್ನು ಬಳಸಿಕೊಂಡು ಯಾತ್ರಿಕರು ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬಹುದು. ಒಮ್ಮೆ ಲಾಗ್ ಇನ್ ಆದ ನಂತರ, ಯಾತ್ರಿಕರನ್ನು ಚಲನವಲನವನ್ನು ಲೈವ್ ಆಗಿ ನೋಡಬಹುದು. ಇದರಿಂದಾಗಿ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅವರಿಗೆ ಅಗತ್ಯ ಸಹಾಯವನ್ನು ಬೇಗನೆ ತಲುಪಿಸಲು ಸಹಾಯವಾಗುತ್ತದೆ.


ಶ್ರೀ ಅಮರನಾಥಜಿ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇನಿಂದ ಡೌನ್‌ಲೋಡ್ ಮಾಡಬಹುದು.


ಏತನ್ಮಧ್ಯೆ, ಜುಲೈ 1 ರಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆ ಕುರಿತು ಗುಪ್ತಚರ ಸಂಸ್ಥೆಗಳು ಭದ್ರತಾ ಕಳವಳ ವ್ಯಕ್ತಪಡಿಸಿವೆ. ಭಯೋತ್ಪಾದಕರ ಬೆದರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯವಿರುವ ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.


ಯಾತ್ರಾರ್ಥಿಗಳ ಪ್ರಯಾಣದ ಬಗ್ಗೆ ನಿಗಾ ಇಡಲು ಯಾತ್ರಿಕರಿಗೆ 'ಬಾರ್‌ಕೋಡ್' ಪ್ರಾಧಿಕಾರ ಸ್ಲಿಪ್ ನೀಡಲು ಭದ್ರತಾ ಸಂಸ್ಥೆಗಳು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.


ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳು ಮತ್ತು ಇತರ ನಾಗರಿಕರನ್ನು ಸಾಗಿಸುವ ವಾಹನಗಳಲ್ಲಿ ವರ್ಧಿತ ಸಂಖ್ಯೆಯ ಆರ್‌ಎಫ್‌ಐಡಿ (ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಟ್ಯಾಗ್‌ಗಳನ್ನು ಸಹ ಬಳಸಲಾಗುತ್ತದೆ.


ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್‌ಪಿಎಫ್) ಸೇರಿದಂತೆ ಪ್ಯಾರಾ ಮಿಲಿಟರಿ ಪಡೆಗಳು ಹೆಚ್ಚು ಜಾಗರೂಕರಾಗಿರಲು ಮತ್ತು ವಾರ್ಷಿಕ ಅಮರನಾಥ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳಿಗೆ ಪೂರ್ಣ-ನಿರೋಧಕ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ತಿಳಿಸಲಾಗಿದೆ.