ಚುನಾವಣಾ ನೀತಿ ಸಂಹಿತೆ: 50,000ಕ್ಕಿಂತ ಹೆಚ್ಚು ನಗದು ಕೈಯಲ್ಲಿದ್ದರೆ ಈ 3 ದಾಖಲೆ ಅಗತ್ಯ
ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿದೆ. ಚುನಾವಣಾ ಆಯೋಗ ಮಾರ್ಚ್ 31 ರವರೆಗೆ ಸುಮಾರು 300 ಕೋಟಿ ರೂ. ಗಳಷ್ಟು ಹಣವನ್ನು ವಶಪಡಿಸಿಕೊಂಡಿದೆ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿದೆ. ಚುನಾವಣಾ ಆಯೋಗ ಮಾರ್ಚ್ 31 ರವರೆಗೆ ಸುಮಾರು 300 ಕೋಟಿ ರೂ. ಗಳಷ್ಟು ಹಣವನ್ನು ವಶಪಡಿಸಿಕೊಂಡಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಹಣ ಬಳಕೆ ತಡೆಯಲು ಕಡ್ಡಾಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಆದರೆ ಇದು ವ್ಯಾಪಾರ ವಹಿವಾಟಿನ ಮೇಲೂ ಕೂಡಾ ಪರಿಣಾಮ ಬೀರುತ್ತದೆ ಎಂದು ದೇಶದ ಹಲವು ಭಾಗಗಳಲ್ಲಿ ವ್ಯಾಪಾರಿಗಳು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, 50,000 ಕ್ಕಿಂತಲೂ ಕಡಿಮೆ ಹಣವನ್ನು ಸಾಗಿಸುವವರಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ 50,000 ಕ್ಕಿಂತಲೂ ಹೆಚ್ಚು ಹಣವನ್ನು ಸಾಗಿಸುವವರ ಬಳಿ 3 ದಾಖಲೆಗಳಿರುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದೆ.
ಅಗತ್ಯವಿರುವ ದಾಖಲೆಗಳಿವು:
1. ಗುರುತಿನ ಚೀಟಿ - 50,000 ಕ್ಕಿಂತಲೂ ಹೆಚ್ಚು ಹಣವನ್ನು ಸಾಗಿಸುವ ವ್ಯಕ್ತಿಯು ತನ್ನ ಗುರುತಿನ ಚೀಟಿ ಮತ್ತು ಹಣದ ಮೂಲ ತೋರಿಸುವುದು ಅಗತ್ಯ.
2. ಕ್ಯಾಶ್ ವಿತ್ ಡ್ರಾ ಪುರಾವೆ - ಬ್ಯಾಂಕ್ ವಾಪಸಾತಿ ಸ್ಲಿಪ್ ಅಥವಾ ಸಂದೇಶದಂತೆ(ಮೆಸೇಜ್) ತೋರಿಸಬೇಕು. ಇದು ನಿಮಗೆ ನಗದು ಎಲ್ಲಿಂದ ಬಂದಿದೆ ಎಂಬುದನ್ನು ಸಾಬೀತುಪಡಿಸಬಹುದು.
3. ಹಣ ಸಂದಾಯ ಪುರಾವೆ - ಹಣವನ್ನು ಎಲ್ಲಿಗೆ ಕಳುಹಿಸಲಾಗುತ್ತಿದೆ ಎಂಬ ಪುರಾವೆ. ಆದ್ದರಿಂದ ಹಣವನ್ನು ಯಾರು ಪಡೆಯುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಬಹುದು.
50,000 ಕ್ಕಿಂತಲೂ ಹೆಚ್ಚು ಹಣವನ್ನು ಸಾಗಿಸುವ ವ್ಯಕ್ತಿಯು ಈ ಮೂರು ದಾಖಲೆಗಳನ್ನು ಹೊಂದಿರುವುದು ಮುಖ್ಯ. ಇದರಲ್ಲಿ ಹಣ ಎಲ್ಲಿಂದ ಬಂತು ಮತ್ತು ಯಾರಿಗೆ ನೀಡಲಾಗುತ್ತಿದೆ ಎಂಬುದರ ಪುರಾವೆ ಬಹಳ ಮುಖ್ಯ. ಅದಕ್ಕಾಗಿ ಹಣ ಸಾಗಿಸುವ ವ್ಯಕ್ತಿ/ವ್ಯಾಪಾರಿ ಬಳಿ ಬ್ಯಾಂಕ್ ರಸೀದಿ ಇರಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.