Model Tenancy Act: Tenent ಅಥವಾ Rental ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗಾಗಿ ದೊಡ್ಡ ಸುದ್ದಿಯೊಂದು ಪ್ರಕಟವಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಮಾದರಿ ಹಿಡುವಳಿ ಕಾಯ್ದೆಗೆ (Model Tenancy Act) ಅನುಮೋದನೆ ನೀಡಿದೆ. ಇದರಿಡ್ನ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಡಿಗೆಗೆ ಸಂಬಂಧಿಸಿದ ಪ್ರಸ್ತುತ ನಿಯಮಗಳನ್ನು ಬದಲಾಯಿಸಬಹುದಾಗಿದೆ. ಇದರ ಜೊತೆಗೆ ಹೊಸ ಕಾನೂನಿನಲ್ಲಿ ರಾಜ್ಯ ಸರ್ಕಾರಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುವ ಅನುಮತಿ ನೀಡಿದೆ. ದೇಶಾದ್ಯಂತ ಇರುವ ರೆಂಟಲ್ ಹೌಸಿಂಗ್ ಸೆಕ್ಟರ್ ಗೆ (Rental Housing Sector) ಇದರಿಂದ ಲಾಭ ಉಂಟಾಗಲಿದೆ ಎಂದು ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಮಾದರಿ ಹಿಡುವಳಿ ಕಾಯ್ದೆಯ (Model Tenancy Act) ಅಡಿ ಇನ್ಮುಂದೆ ಎಲ್ಲಾ ರಾಜ್ಯಗಳಲ್ಲಿ ಅಥಾರಿಟಿ ನೇಮಕ ಮಾಡಬಹುದಾಗಿದೆ. ಅವರ ಮೂಲಕ ಬಾಡಿಗೆ ವಸತಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಹೊಸ ಕಾನೂನಿನ ಅಡಿ ರೆಂಟಲ್ ಸೆಕ್ಟರ್ (Rental Sector) ನಲ್ಲಿರುವ ಕಾನೂನು ವ್ಯವಸ್ಥೆಯನ್ನು ಸುಧಾರಿಸಲು ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ (Modi Government) ಹೇಳಿದೆ. ಈ ಕಾನೂನಿನಲ್ಲಿ ಸರ್ಕಾರ ಸೂರಿಲ್ಲದವರ ಕುರಿತು ಕೂಡ ಗಮನ ಹರಿಸಿದೆ.


ಇದನ್ನೂ ಓದಿ-7th Pay Commission: DAಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ


ಈ ಕುರಿತು ಕೇಂದ್ರ ಸರ್ಕಾರ (Central Government) ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಎಲ್ಲಾ ಆದಾಯ ಗುಂಪುಗಳಿಗೆ ಸಾಕಾಗುವಷ್ಟು ಬಾಡಿಗೆ ಸೌಕರ್ಯಗಳನ್ನು ರಚಿಸಲಾಗುವುದು. ಇದರಿಂದ ಕ್ರಮೇಣ ಬಾಡಿಗೆ ವಸತಿ ವ್ಯವಸ್ಥೆಯು ಮಾರುಕಟ್ಟೆಯ ರೂಪವನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಈ ಕಾನೂನಿಗೆ ಸಂಬಂಧಿಸಿದ ದೀರ್ಘಾವಧಿಯಿಂದ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದ್ದು, ವಿಷಯ ತಜ್ಞರು ಕಾನೂನಿಯಲ್ಲಿ ಬಳಲಾವಣೆ ತರಲು ಆಗ್ರಹಿಸಿದ್ದರು ಎನ್ನಲಾಗಿದೆ.


ಇದನ್ನೂ ಓದಿ- ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ, ರಿಟೈರ್ಮೆಂಟ್ ಬಳಿಕ ಸ್ವಇಚ್ಛೆಯಿಂದ ಈ ಕೆಲಸ ಮಾಡುವಂತಿಲ್ಲ


ಮಾದರಿ ಹಿಡುವಳಿ ಕಾಯ್ದೆ (Model Tenancy Act) ಜಾರಿಗೆ ಬಂದ ನಂತರ ಖಾಲಿ ಇರುವ ಮನೆಗಳನ್ನು ಬಾಡಿಗೆದಾರರಿಗೆ ತೆರೆಯುವ ಕಸರತ್ತು ನಡೆಯಲಿದೆ. ವಸತಿ ಕೊರತೆಯನ್ನು ಪರಿಹರಿಸಲು ಬಾಡಿಗೆ ಆದಾಯವನ್ನು ವ್ಯವಹಾರ ಮಾದರಿಯಾಗಿ ಕಾಣಬಹುದು ಎಂದು ಸರ್ಕಾರ ಬಯಸಿದೆ. ಇದು ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸಲು ಕಾರಣವಾಗಲಿದ್ದು, ಬಾಡಿಗೆದಾರರು ಮತ್ತು ಭೂಮಾಲೀಕರಿಗೆ ಸರ್ಕಾರವು ಹೊಸ ನಿಬಂಧನೆಗಳು ಮತ್ತು ನಿಯಮಗಳನ್ನು ಸಹ ಸೇರಿಸಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ-ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.