ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ರಜಿಸ್ಟರ್(NPR)ನ ಅಪ್ಡೇಟ್ ಗಾಗಿ ಮೋದಿ ಸಚಿವ ಸಂಪುಟ ಮಂಜೂರಾತಿ ನೀಡಿದೆ. ಅಷ್ಟೇ ಅಲ್ಲ ಮೋದಿ ಸಚಿವ ಸಂಪುಟ ಸಭೆ NPR ಅಂದರೆ, ನ್ಯಾಷನಲ್ ಪಾಪ್ಯುಲೇಶನ್ ರಜಿಸ್ಟರ್ ನ ಅಪ್ಡೇಟ್ ಮೇಲೆ ಮುದ್ರೆ ಒತ್ತಿದೆ ಎಂದು ಹೇಳಲಾಗುತ್ತಿದೆ. ಈ ಅಪ್ಡೇಟ್ ಗಾಗಿ ಸಚಿವ ಸಂಪುಟ 8500 ರೂ.ಗೆ ಮಂಜೂರಾತಿ ನೀಡಿದೆ ಎನ್ನಲಾಗಿದೆ. ಈ NPR ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾಗಲಿದೆ. ದೇಶದ ಪ್ರತಿಯೋಬ್ಬ ನಾಗರಿಕನ ಗುರುತು ಪತ್ತೆಹಚ್ಚಿ ಡೇಟಾಬೇಸ್ ಸಿದ್ಧಪಡಿಸುವುದು ಈ NPRನ ಉದ್ದೇಶವಾಗಿದೆ. ದೇಶದ ಒಟ್ಟು ಜನರ ಸಂಖ್ಯೆ ಹಾಗೂ ಅವರ ಬಯೋಮೆಟ್ರಿಕ್ ಮಾಹಿತಿ ಈ ಡೇಟಾಬೇಸ್ ಒಳಗೊಂಡಿರಲಿದೆ.


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯ ಸರ್ಕಾರಗಳು ಈಗಾಗಲೇ NPR ಅನ್ನು ವಿರೋಧಿಸಿವೆ. 2010 ರಲ್ಲಿ ಅಸ್ತಿತ್ವದಲ್ಲಿದ್ದ ಮನಮೋಹನ್ ಸಿಂಗ್ ಸರ್ಕಾರ ಈ NPR ರಚನೆಗೆ ಮೊದಲ ಹೆಜ್ಜೆ ಇಟ್ಟಿತ್ತು.


ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು NRC ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಕೇಂದ್ರ ಸರ್ಕಾರ ಮತ್ತೊಮ್ಮೆ NPR ಅನ್ನು ಜಾರಿಗೊಳಿಸಲು ಮುಂದಾಗಿದೆ. ಇಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ NPRನ ನವೀನಿಕರಣಕ್ಕೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೇ. ಕೇರಳ ಹಾಗೂ ಪಶ್ಚಿಮ ಬಂಗಾಳದ ಸರ್ಕಾರಗಳು NPR ಅನ್ನು ಕೂಡ ವಿರೋಧಿಸಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ ಇದು NRCಗಿಂತ ತುಂಬಾ ವಿಭಿನ್ನವಾಗಿದೆ. ನ್ಯಾಷನಲ್ ಪಾಪ್ಯುಲೇಶನ್ ರಜಿಸ್ಟರ್ ಅಡಿ 1 ಏಪ್ರಿಲ್, 2020 ರಿಂದ 30 ಸೆಪ್ಟೆಂಬರ್, 2020ರವೆರೆಗೆ ನಾಗರಿಕರ ಡೇಟಾಬೇಸ್ ಸಿದ್ಧಪಡಿಸಲು ದೇಶಾದ್ಯಂತ ಮನೆ ಮನೆಗೆ ತೆರಳಿ ಜನಸಂಖ್ಯಾ ಗಣತಿ ನಡೆಯಲಿದೆ.  


NPR ಅಂದರೇನು?
NPRನ ಫುಲ್ ಫಾರ್ಮ್ ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್. ದೇಶದ ಸಾಮಾನ್ಯ ಜನರ ಗುರುತು ಪತ್ತೆಹಚ್ಚಿ ಡೇಟಾಬೇಸ್ ಸಿದ್ಧಪಡಿಸುವುದು ಇದರ ಪ್ರಮುಖ ಉದ್ದೇಶ. ಈ ಡೇಟಾಬೇಸ್ ನಲ್ಲಿ ಜನಸಂಖ್ಯೆಯ ಜೊತೆಗೆ ಜನರ ಬಯೋಮೆಟ್ರಿಕ್ ಮಾಹಿತಿಯೂ ಕೂಡ ಇರಲಿದೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ 2010ರಲ್ಲಿ NPR ಸಿದ್ಧಪಡಿಸಲು ಮೊದಲಬಾರಿಗೆ ಹೆಜ್ಜೆ ಇಟ್ಟಿತ್ತು. 2011 ರ ಜನಗಣತಿಗೆ ಮುನ್ನವೇ ಈ ಕಾರ್ಯ ಆರಂಭಗೊಂಡಿತ್ತು.


ಇದೀಗ ಮತ್ತೊಮ್ಮೆ 2021 ರಲ್ಲಿ ಜನಗಣತಿ ಕೆಲಸ ಆರಂಭವಾಗಲಿದೆ. ಏತನ್ಮಧ್ಯೆ NPRಗೆ ಸಂಬಂಧಿಸಿದಂತೆಯೂ ಕೂಡ  ಕೆಲಸ ಆರಂಭವಾಗಿದೆ. ಒಂದೆಡೆ ಈ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ನಾಗರಿಕರನ್ನು ಪತ್ತೆಹಚ್ಚುವುದು NRC ಉದ್ದೇಶವಾಗಿದ್ದರೆ, ಇನ್ನೊಂದೆಡೆ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಸ್ತಳೀಯ ಕ್ಷೇತ್ರದಲ್ಲಿ ವಾಸಿಸುವ ಯಾವುದೇ ನಿವಾಸಿ NPR ನಲ್ಲಿ ತಮ್ಮ ಹೆಸರು ನೊಂದಾಯಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಹೊರದೇಶದ ವ್ಯಕ್ತಿಯೂ ಕೂಡ ಭಾರತದಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ವಾಸಿಸುತ್ತಿದ್ದಾರೆ ಅಂತಹವರು ಕೂಡ NPR ತಮ್ಮ ಹೆಸರು ಪಂಜೀಕೃತಗೊಳಿಸುವುದು ಕಡ್ಡಾಯವಾಗಿದೆ. NPR ಮೂಲಕ ಜನರ ಬೈಯೋಮೆಟ್ರಿಕ್ ದಾಖಲೆಗಳನ್ನು ಸಿದ್ಧಪಡಿಸಿ, ಸರ್ಕಾರಿ ಯೋಜನೆಗಳ ಲಾಭವನ್ನು ಯೋಗ್ಯ ಲಾಭಾರ್ಥಿಗಳಿಗೆ  ತಲುಪಿಸುವ ಉದ್ದೇಶ ಸರ್ಕಾರ ಹೊಂದಿದೆ