ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವಾರಾದ ನಿತಿನ್ ಗಡ್ಕರಿ, ಪ್ರಕಾಶ್ ಜಾವಡೆಕರ್ ಹಾಗೂ ನರೇಂದ್ರ ತೋಮರ್ ಅವರು ಸಂಪುಟ ನಿರ್ಧಾರಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಸಚಿವ ಸಂಪುಟ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರೈತರ ಸಾಲ ಮನ್ನಾಗಾಗಿ ಗಡವು ಸಡಿಲಿಕೆ ಹಾಗೂ ಬಡ್ಡಿಯಲ್ಲಿ ಪರಿಹಾರ ಇವುಗಳಲ್ಲಿ ಶಾಮೀಲಾಗಿವೆ.


ರೈತರ ಹಿತದ್ರ್ಹಷ್ಟಿಯಿಂದ ತೆಗೆದುಕೊಳ್ಳಲಾಗಿರುವ ನಿರ್ಧಾರಗಳ ಕುರಿತು ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಖಾರಿಪ್ ಋತುವಿನ (2020-21) ಒಟ್ಟು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಈ ಬೆಳೆಗಳಿಗೆ ರೈತರಿಗೆ ಶೇ. 50 ರಿಂದ ಶೇ.83ರವರೆಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ಹೇಳಿದ್ದಾರೆ.


ಸಾಲ ನೆಮ್ಮದಿ
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ತೆಗೆದುಕೊಳ್ಳಲಾಗುವ 3 ಲಕ್ಷ ರೂಗಳ ವರೆಗಿನ ಅಲ್ಪಾಧಿ ಸಾಲ ಮರುಪಾವತಿಯ ಅವಧಿಯನ್ನು ಆಗಸ್ಟ್ 2020ರ ವರೆಗೆ ವಿಸ್ತರಿಸಿದೆ. ವಿಸ್ತರಣೆಯಾದ ಈ ಅವಧಿಯಲ್ಲಿ ಬಡ್ಡಿ ರಿಯಾಯ್ತಿ ಕೂಡ ಸಿಗಲಿದೆ ಎಂದು ಸರ್ಕಾರ ಹೇಳಿದೆ.


ಮಾರ್ಚ್ 1, 2020 ರಿಂದ ಆಗಸ್ಟ್ 31, 2020ರ ನಡುವಿನ ಅಲ್ಪಾವಧಿ ಕೃಷಿ ಸಾಲದ ಬಡ್ಡಿಯಲ್ಲಿ ಶೇ.2 ಹಾಗೂ ಸಾಲ ಪಾವತಿಯಲ್ಲಿ ಶೇ.3 ರಷ್ಟು ಲಾಭ ಪಡೆಯಬಹುದಾಗಿದೆ. ಭಾರತ ಸರ್ಕಾರ ದೇಶದ ರೈತರಿಗೆ ಶೇ.7ರ ಬಡ್ಡಿದರದಲ್ಲಿ ಸಾಲ ನೀಡುತ್ತದೆ.


ಇದರಲ್ಲಿ ಸರ್ಕಾರ 3 ಲಕ್ಷ ರೂ.ವರೆಗಿನ ಸಾಲಗಳಿಗೆ ಶೇ 2 ರಷ್ಟು ಬ್ಯಾಂಕ್ ಬಡ್ಡಿಗೆ ರಿಯಾಯಿತಿ ನೀಡಲಿದೆ. ಒಟ್ಟಾರೆಯಾಗಿ, ರೈತರಿಗೆ ಕೇವಲ 4 ಪ್ರತಿಶತದಷ್ಟು ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸಿಗಲಿದೆ.


ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಅಂದರೆ ಸೋಮವಾರ ಈ ಕೇಂದ್ರ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಆದರೆ, ಪ್ರತಿ ಬಾರಿ ಬುಧವಾರ ಈ ಸಭೆ ನಡೆಯುತ್ತದೆ. ಮೋದಿ ಸರ್ಕಾರದ ಎರಡನೇ ಅವಧಿಯ ಕಾರ್ಯಕಾಲದ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಈ ಸಭೆಯನ್ನು ಸೋಮವಾರ ಕರೆಯಲಾಗಿದೆ.