Modi Cabinet Meeting: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕ್ಯಾಬಿನೆಟ್ ಸಭೆಯಲ್ಲಿ ಮೋದಿ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ 2023 ಅನ್ನು ಅನುಮೋದಿಸಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Naxal Attack: 'ಹುತಾತ್ಮರ ಬಲಿದಾನ ಸ್ಮರಿಸಲಾಗುವುದು' ಛತ್ತೀಸ್ಗಡ್ ನಕ್ಸಲ್ ದಾಳಿಯನ್ನು ಖಂಡಿಸಿದ ಪಿಎಂ ಮೋದಿ


ವಿದ್ಯಾರ್ಥಿಗಳಿಗೆ ಭಾರಿ ನೆಮ್ಮದಿಯ ಸುದ್ದಿ
ಸಚಿವ ಸಂಪುಟ ಸಭೆಯಲ್ಲಿ ಒಟ್ಟು 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಮೋದಿ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಇದರಿಂದ 15000 ಹೆಚ್ಚುವರಿ ನರ್ಸಿಂಗ್ ಸೀಟುಗಳು ಲಭ್ಯವಾಗಲಿವೆ. ಈ ಎಲ್ಲಾ ಕಾಲೇಜುಗಳು 2027 ರ ವೇಳೆಗೆ ಸಿದ್ಧವಾಗಲಿದೆ. ಅವುಗಳ ನಿರ್ಮಾಣಕ್ಕೆ ಸರ್ಕಾರ 1570 ಕೋಟಿ ರೂ. ಖರ್ಚು ಮಾಡಲಿದೆ.


ಇದನ್ನೂ ಓದಿ-Dantewada Naxal Attack: 13 ವರ್ಷಗಳಲ್ಲಿ 9 ನಕ್ಸಲ್ ದಾಳಿಗಳು 200 ಪೊಲೀಸರು ಹುತಾತ್ಮ, ಇಲ್ಲಿದೆ ಡೀಟೈಲ್ಸ್


ದಾಂತೇವಾಡದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಮೋದಿ ಸಂಪುಟ ಸಭೆಯಲ್ಲಿ ಮೊದಲು ದಾಂತೇವಾಡದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಲ್ಲದೇ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಅವರ ನಿಧಾನಕ್ಕೂ ಕೂಡ  ಸಂಪುಟ ಶ್ರದ್ಧಾಂಜಲಿ ಸಲ್ಲಿಸಿದೆ. ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ದಾಂತೇವಾಡದಲ್ಲಿ ನಕ್ಸಲೀಯರ ಐಇಡಿ ದಾಳಿಯಲ್ಲಿ ಹುತಾತ್ಮರಾದ 10 ಡಿಆರ್‌ಜಿ ಜವಾನರು ಮತ್ತು ಚಾಲಕನಿಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿರೋಮಣಿ ಅಕಾಲಿದಳದ ಪೋಷಕ ಪ್ರಕಾಶ್ ಸಿಂಗ್ ಬಾದಲ್ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.