100 Day Plan New Government : ಹೊಸ ಸರ್ಕಾರ ರಚನೆಯಾದ ತಕ್ಷಣ ಜಾರಿಗೆ ತರುವ  100 ದಿನಗಳ ಯೋಜನೆ ಸಿದ್ಧಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವಾಲಯಗಳಿಗೆ ಸೂಚಿಸಿದ್ದಾರೆ. ಈ ಸೂಚನೆಯ ಅನ್ವಯ ಸಚಿವಾಲಯಗಳು ಹಲವು ಪ್ರಮುಖ ಉಪಕ್ರಮಗಳನ್ನು ಪರಿಗಣಿಸಿವೆ ಎಂದು ವರದಿಯಾಗಿದೆ.ಉದಾಹರಣೆಗೆ,ಯಾವ ಪ್ರಯಾಣಿಕರ ಟಿಕೆಟನ್ನು ಭಾರತೀಯ ರೈಲ್ವೆಯು ರದ್ದುಪಡಿಸುತ್ತದೆಯೋ ಆ ಪ್ರಯಾಣಿಕರಿಗೆ 24 ಗಂಟೆಗಳ ಒಳಗೆ ಮರುಪಾವತಿ ಮಾಡುವ ಯೋಜನೆ ಮೇಲೆ ಸಚಿವಾಲಯ  ಕಾರ್ಯನಿರ್ವಹಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ರೀ ಫಂಡ್ ಆಗಬೇಕಾದರೆ ಕನಿಷ್ಠ ಮೂರು ದಿನ ತೆಗೆದುಕೊಳ್ಳುತ್ತದೆ. ಇದಲ್ಲದೇ ಟಿಕೆಟ್ ಬುಕ್ಕಿಂಗ್, ರೈಲು ಟ್ರ್ಯಾಕಿಂಗ್ ಮುಂತಾದ ಹಲವು ಸೌಲಭ್ಯಗಳಿಗಾಗಿ ‘ಸೂಪರ್ ಆಪ್’ ಬಿಡುಗಡೆ ಮಾಡುವ ಯೋಜನೆಯೂ ಇದೆ. ಇನ್ನು ಗೃಹ ಸಾಲದ ಮೇಲಿನ ಬಡ್ಡಿ ಸಬ್ಸಿಡಿ ಯೋಜನೆ (Home Loan Interest Subsidy) ಯನ್ನು  ಜಾರಿಗೆ ತರಬಹುದು ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಯೋಜನೆಗಳನ್ನು ಸಿದ್ಧಪಡಿಸಿದ್ದು, ಕ್ಯಾಬಿನೆಟ್ ಕಾರ್ಯದರ್ಶಿ ಅವುಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಯವರು ಆಗಸ್ಟ್ 15 ರಂದು ವಸತಿ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಘೋಷಣೆ ಮಾಡಿದ್ದರು. ಯಾವುದೇ ಹೊಸ ಯೋಜನೆಗಳ ಬಗ್ಗೆ ಹೊಸ ಸರ್ಕಾರದ ಮೊದಲ ಮೂರು ತಿಂಗಳುಗಳಲ್ಲಿ  ಯೋಜನೆ ರೂಪಿಸಲಾಗುತ್ತದೆ. 


ಇದನ್ನೂ ಓದಿ : North Goa : ಉತ್ತರ ಗೋವಾದ ಫಾರ್ಮ್ ಹೌಸ್ ನಲ್ಲಿ ಸ್ಫೋಟ , ಒಬ್ಬ ವ್ಯಕ್ತಿಯ ಬಂಧನ


ವರದಿಯ ಪ್ರಕಾರ,ಪ್ರಯಾಣಿಕರಿಗಾಗಿ ಪ್ರಧಾನ ಮಂತ್ರಿ ರೈಲು ಯಾತ್ರಿ ಬಿಮಾ ಯೋಜನೆ ಪ್ರಾರಂಭಿಸಲು ರೈಲ್ವೆ ಯೋಜಿಸಿದೆ.ಇದಲ್ಲದೇ 40,900 ಕಿ.ಮೀ ಉದ್ದದ ಮೂರು ಆರ್ಥಿಕ ಕಾರಿಡಾರ್‌ಗಳಿಗೆ ಕ್ಯಾಬಿನೆಟ್ ಅನುಮೋದನೆಯನ್ನು ನಿರೀಕ್ಷಿಸಲಾಗುತ್ತಿದೆ. ಇದಕ್ಕಾಗಿ 11 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ ಪೂರ್ಣಗೊಂಡ ನಂತರ, ಜಮ್ಮುವಿನಿಂದ ಕಾಶ್ಮೀರಕ್ಕೆ ರೈಲುಗಳನ್ನು ಓಡಿಸುವ ಯೋಜನೆ ಮುಂದುವರಿಯಲಿದೆ.  


ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಬ್ರಿಜ್  ನ್ಯೂ ಪಂಬನ್ ರೈಲ್ವೆ ಸೇತುವೆಯೂ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಸೇತುವೆಯು ದೇಶದ ಮುಖ್ಯ ಭೂಭಾಗವನ್ನು ರಾಮೇಶ್ವರಂಗೆ ಸಂಪರ್ಕಿಸುತ್ತದೆ.


ಇದನ್ನೂ ಓದಿ : ಜಾತಿ ಗಣತಿ, ಆರ್ಥಿಕ ಸಮೀಕ್ಷೆ ಸತ್ಯವನ್ನು ಬಯಲು ಮಾಡಲಿದೆ: ರಾಹುಲ್ ಗಾಂಧಿ


ಮೂಲಗಳನ್ನು ನಂಬುವುದಾದರೆ, ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸುವತ್ತ ಕೂಡಾ ರೈಲ್ವೇ ಗಮನ ಹರಿಸುತ್ತಿದೆ ಎನ್ನಲಾಗುತ್ತಿದೆ. ಬುಲೆಟ್ ರೈಲು ಯೋಜನೆಗೆ ವೇಗ ನೀಡಲಾಗುತ್ತಿದೆ.


ಇದಲ್ಲದೆ, ರಸ್ತೆ ಸಾರಿಗೆ ಕುರಿತು ಮಾತನಾಡುವುದಾದರೆ ಹೆದ್ದಾರಿ ಸಚಿವಾಲಯವು ರಸ್ತೆ ಅಪಘಾತಗಳ ಸಂತ್ರಸ್ತರಿಗೆ ನಗದು ರಹಿತ ಯೋಜನೆಯನ್ನು ಪ್ರಾರಂಭಿಸಲು ಯೋಜಿಸಿದೆ. ಹೊಸ ಸರ್ಕಾರದ ಮೊದಲ ಮೂರು ತಿಂಗಳಲ್ಲಿ ನಾಲ್ಕು ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಲು ನಾಗರಿಕ ವಿಮಾನಯಾನ ಸಚಿವಾಲಯ ಯೋಜಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.