ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಮೋದಿ ಸರ್ಕಾರದ ಅಧಿಕಾರಾವಧಿಯ ಪೂರ್ಣಾವಧಿ ಬಜೆಟ್ ಮಂಡಿಸಿದ್ದಾರೆ. ಜುಲೈ 1, 2017 ರಂದು GST ಅನುಷ್ಠಾನದ ನಂತರ ಇದು ಮೊದಲ ಬಜೆಟ್ ಆಗಿದೆ. ಈ ಬಜೆಟ್ನಲ್ಲಿ, ಅರುಣ್ ಜೇಟ್ಲಿ ದೇಶದ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ  ಕೊಡುಗೆಗಳನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಾರಿ, ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಬಜೆಟ್ ಭಾಷಣದಲ್ಲಿ ಆರೋಗ್ಯ ವಿಮಾ ಯೋಜನೆ ಘೋಷಿಸುವುದರ ಮೂಲಕ ಮುಂದಿನ ಚುನಾವಣೆಗೆ ಉತ್ತಮ ತಳಹದಿಯನ್ನೇ ಹಾಕಿದ್ದಾರೆ. ಈ ಯೋಜನೆಯಡಿಯಲ್ಲಿ ದೇಶದ 50 ಲಕ್ಷ ಜನರು ಚಿಕಿತ್ಸೆಗಾಗಿ 5 ಲಕ್ಷ ರೂ.ಗಳಷ್ಟು ವಿನಾಯಿತಿ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಯೋಜನೆಯು ಜಾರಿಗೆ ಬಂದಲ್ಲಿ ಮೋದಿ ಸರ್ಕಾರ ಇದುವೆರೆಗೂ ತೆಗೆದುಕೊಂಡ ನಿರ್ಧಾರಗಳಲ್ಲಿ ಇದು ಅತ್ಯಂತ ಮಹತ್ವದ ತೀರ್ಮಾನ ಎನಿಸಿಕೊಳ್ಳಲಿದೆ. ಈ ಬಜೆಟ್ 50 ಕೋಟಿ ಆರೋಗ್ಯ ವಿಮೆ ಯೋಜನೆಯ ಪ್ರಯೋಜನವನ್ನು ನೀಡುವ ಮೂಲಕ ದೇಶದ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಲಿದೆ.


ಒಬಾಮರಿಂದ ಪ್ರಭಾವಿತರಾದ ಮೋದಿ 
ಪ್ರಧಾನಿ ನರೇಂದ್ರ ಮೋದಿ ತನ್ನ ನೀತಿಗಳು ಮತ್ತು ನಿರ್ಧಾರಗಳಲ್ಲಿ ಒಬಾಮಾ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಈ ಬಾರಿ ಬಜೆಟ್ ನಲ್ಲಿ  500 ದಶಲಕ್ಷ ಜನರಿಗೆ 5 ಲಕ್ಷ ರೂ.ವರೆಗಿನ ಹಣವಿಲ್ಲದ ಆರೋಗ್ಯ ಸೌಲಭ್ಯವನ್ನು ಘೋಷಿಸಲಾಗಿದೆ.


ಗಮನಾರ್ಹವಾಗಿ, ಯು.ಎಸ್.ಹೆಲ್ತ್ ಕೇರ್ ಸಿಸ್ಟಮ್ನಲ್ಲಿ ಇದುವರೆಗಿನ ಮಹತ್ವದ ಬದಲಾವಣೆಗಳೆಂದು ಪರಿಗಣಿಸಲ್ಪಟ್ಟದ್ದು, ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕಾರವಧಿಯಲ್ಲಿ ಆರೋಗ್ಯ ಸೇವೆಗಳಲ್ಲಿ ಕಂಡ ಮಹತ್ವದ ಬದಲಾವಣೆಗಳೆಂದರೆ, ಆರೋಗ್ಯ ಸೇವೆಗಳ ಮೇಲೆ ಖರ್ಚು ಕಡಿಮೆ ಮಾಡುವುದು, ಆರೋಗ್ಯ ವಿಮೆಯ ವ್ಯಾಪ್ತಿಯನ್ನು ಕಾನೂನು ಪ್ರಾಧಿಕಾರದಲ್ಲಿ ಹೆಚ್ಚಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಒದಗಿಸುವುದು. 


ಮಾರ್ಚ್ 2013 ರಲ್ಲಿ, ಅಧ್ಯಕ್ಷ ಬರಾಕ್ ಒಬಾಮಾ ಅವರು ಪೇಶೆಂಟ್ ಪ್ರೊಟೆಕ್ಷನ್ ಅಂಡ್ ಅಫೋರ್ಡಬಾಲ್ ಕೇರ್ ಆಕ್ಟ್(Pacient protection and affordabale care act-PPASIA)ಗೆ ಸಹಿ ಹಾಕಿದರು. 
ಒಬಾಮರ ಆರೋಗ್ಯ ಕಾಳಜಿಯೊಂದಿಗೆ ಇತರ ಆರೋಗ್ಯ ಸಂಸ್ಥೆಗಳು, ಇತರ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಭಾಗಿಯಾಗಲಿದೆ ಎಂದು ವಿಮರ್ಶಕರು ಹೇಳಿದ್ದರು. ಹಾಗಾಗಿ ಒಬಾಮ ಬೆಂಬಲಿಗರು ಆರೋಗ್ಯ ಕ್ಷೇತ್ರದಲ್ಲಿ ಆದ ಗಮನಾರ್ಹ ಬದಲಾವಣೆಯನ್ನು ಪರಿಗಣಿಸಿದ್ದಾರೆ.


ಬಜೆಟ್ 2018 : ಆರೋಗ್ಯ ಕ್ಷೇತ್ರಕ್ಕೆ ಕೊಡುಗೆಗಳು 


  • ಒಂದು ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ಗಳ ಆಸ್ಪತ್ರೆ ಮತ್ತು ಆರೋಗ್ಯ ಸೇವೆ ವೆಚ್ಚದಲ್ಲಿ ವಿನಾಯಿತಿ.

  • 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ವೆಚ್ಚ ಭರಿಸಲಿರುವ ಸರ್ಕಾರ.

  • ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು 500 ರೂ.ಗಳ ಮಾಶಾಸನ

  • ಮೂರೂ ಸಂಸದೀಯ ಕ್ಷೇತ್ರಗಳಿಗೆ ಒಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯೋಜನೆ.

  • ಆರೋಗ್ಯ ಕೇಂದ್ರಗಳನ್ನು ಜನರಿಗೆ ಮತ್ತಷ್ಟು ಹತ್ತಿರಗೊಳಿಸಲು ರಾಷ್ಟ್ರೀಯ ಆರೋಗ್ಯ ನೀತಿ ಅಡಿಯಲ್ಲಿ 1.5 ಲಕ್ಷ ಕೇಂದ್ರಗಳನ್ನು ಆರಂಭ.

  • ಜನರಿಗೆ ಉಚಿತ ಔಷಧಿ ಮತ್ತು ಸೇವೆಗಾಗಿ 1200 ಕೋಟಿ ರೂ. ವಿನಿಯೋಗ.

  • 24 ನೂತನ ಮೆಡಿಕಲ್ ಕಾಲೇಜುಗಳ ಆರಂಭ