Modi ಸರ್ಕಾರದ ಚಾಲೆಂಜ್: ಈ ಕೆಲಸ ಮಾಡಿ 1 ಕೋಟಿ ರೂ. ಬಹುಮಾನ ಗೆಲ್ಲಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಸ್ಟಾರ್ಟ್ ಅಪ್‌ಗಳಿಗಾಗಿ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಡೆವಲಪ್ಮೆಂಟ್ ಸವಾಲನ್ನು ಪ್ರಾರಂಭಿಸಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಸ್ಟಾರ್ಟ್ ಅಪ್‌ಗಳಿಗಾಗಿ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಅಭಿವೃದ್ಧಿಗಳಿಸಲು ಸವಲೆಸಗಿದೆ. ಈ ಸವಾಲಿನ ಹೆಸರು “Innovative Challenge for Development of Video Conferencing Solution”. ಈ ಸ್ಪರ್ಧೆಯ ವಿಜೇತರಿಗೆ 1 ಕೋಟಿ ಮೊತ್ತ ಬಹುಮಾನದ ರೂಪದಲ್ಲಿ ಸಿಗಲಿದೆ. ಕಳೆದ ವಾರವಷ್ಟೇ ಖ್ಯಾತ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಜೂಮ್‌ನಲ್ಲಿ ಭದ್ರತೆಗೆ ಸಂಬಂಧಿಸಿದ ಕೆಲವು ಲೋಪಗಳು ಕಂಡುಬಂದ ಹಿನ್ನೆಲೆ ಸರ್ಕಾರ ಈ ಘೋಷಣೆ ಮಾಡಿದೆ. ಕಳೆದ ವಾರ, ಜೂಮ್ ಬಳಕೆ ಮಾಡುವವರಿಗೆ ಜಾಗರೂಕರಾಗಿರಲು ಸರ್ಕಾರ ಸಲಹೆಯನ್ನು ನೀಡಿದ್ದು. ಭದ್ರತೆಯ ಹಿತದೃಷ್ಟಿಯಿಂದ ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಈ ಆ್ಯಪ್ ಬಳಸುವ ಹಾಗಿಲ್ಲ ಎಂದು ಹೇಳಲಾಗಿತ್ತು.
ಇದರಲ್ಲಿ ಹೇಗೆ ಭಾಗವಹಿಸಬೇಕು?
ಈ ಇನ್ನೋವೇಶನ್ ಚಾಲೆಂಜ್ ನಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಆರಂಭಗೊಂಡಿದ್ದು, ಏಪ್ರಿಲ್ 30 ಹೆಸರು ನೋಂದಾಯಿಸಲು ಕೊನೆಯ ದಿನಾಂಕವಾಗಿದೆ. ಆ್ಯಪ್ ಎಲ್ಲಾ ವಿಡಿಯೋ ರೆಸಲ್ಯೂಶನ್ ಮತ್ತು ಆಡಿಯೊ ಗುಣಮಟ್ಟವನ್ನು ಬೆಂಬಲಿಸಬೇಕು ಎಂದು ಸರ್ಕಾರ ಹೇಳಿದೆ. ಇದರೊಂದಿಗೆ, ಕಡಿಮೆ ಮತ್ತು ಹೆಚ್ಚಿನ ನೆಟ್‌ವರ್ಕ್‌ನಲ್ಲಿ ಕೆಲಸ ಸಾಮರ್ಥ್ಯ ಹೊಂದಿರಬೇಕು ಜೊತೆಗೆ ಇದು ಯಾವುದೇ ಸಾಧನ ಮತ್ತು ಬ್ರೌಸರ್‌ನೊಂದಿಗೆ ಕೆಲಸ ಮಾಡಲು ಸಿದ್ಧವಿರಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಷ್ಟೇ ಅಲ್ಲ ಸಿದ್ಧಪಡಿಸಲಾಗುತ್ತಿರುವ ನೂತನ ಆಪ್ ನಲ್ಲಿ ಎನ್ಕ್ರಿಪ್ಟೆಡ್ ನೆಟ್ವರ್ಕ್, ಕಾನ್ಫರನ್ಸ್ ವೇಳೆ ಚ್ಯಾಟ್ ಅವಕಾಶ, ಕಾನ್ಫರೆನ್ಸ್ ವೇಳೆ ಸೈನ್ ಇನ್ ಹಾಗೂ ನಾನ್-ಸೈನ್ ಇನ್ ಗಳ ಆಯ್ಕೆ, ಆಡಿಯೋ ಹಾಗೂ ವಿಡಿಯೋ ರಿಕಾರ್ಡಿಂಗ್ ಆಯ್ಕೆ ಹಾಗೂ ಸ್ಕ್ರೀನ್ ಅಥವಾ ಫೈಲ್ ಶೇರಿಂಗ್ ಆಯ್ಕೆ ಇತ್ಯಾದಿಗಳು ಇರಬೇಕು ಎಂದು ಸರ್ಕಾರ ಹೇಳಿದೆ.
ಚಾಲೆಂಜ್ ನ ಘಟ್ಟಗಳು ಹಾಗೂ ಬಹುಮಾನ
ವಿಡಿಯೋ ಕಾನ್ಫರೆನ್ಸಿಂಗ್ ಸೊಲ್ಯೂಶನ್ ಡೆವಲಪ್ಮೆಂಟ್ ಚಾಲೆಂಜ್ ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಐಡಿಯೆಶನ್, ಪ್ರೋಟೋಟೈಪ್ ಹಾಗೂ ಸೊಲ್ಯೂಶನ್ ಬಿಲ್ಡಿಂಗ್ ಈ ಮೂರು ಹಂತಗಳು ಈ ಚಾಲೆಂಜ್ ನಲ್ಲಿ ಇರಲಿವೆ.
ಮೊದಲ ಹಂತದಲ್ಲಿ ತಂಡಗಳಿಗೆ ಇನ್ನೋವೇಶನ್ ಹಾಗೂ ಐಡಿಯಾಗಳನ್ನು ನಿರ್ಣಾಯಕರ ಮುಂದೆ ಸಾದರು ಪಡಿಸಬೇಕು. ಇವರಲ್ಲಿ ಆಯ್ಕೆಯಾದ ಟಾಪ್ 10 ತಂಡಗಳಿಗೆ ಪ್ರೋಟೋಟೈಪ್ ಸಿದ್ಧಪಡಿಸಲು 5 ಲಕ್ಷ ರೂ. ಫಂಡಿಂಗ್ ಸಿಗಲಿದೆ.
ಎರಡನೇ ಹಂತದಲ್ಲಿ ಆಯ್ಕೆಯಾದ ತಂಡಗಳು ನಿರ್ಣಾಯಕರಿಗೆ ಪ್ರೋಟೋ ಟೈಪ್ ಸಿದ್ಧಪಡಿಸಿ ಸಾದರುಪಡಿಸಬೇಕು. ಈ ಹಂತದಲ್ಲಿ ಕೊನೆಯ ಹಂತದ ಮೂರು ತಂಡಗಳನ್ನು ಆಯ್ಕೆ ಮಾಡಲಾಗುವುದು. ಈ ತಂಡಗಳಿಗೆ ಅಂತಿಮ ಪ್ರಾಡಕ್ಟ್ ಸಿದ್ಧಪಡಿಸಲು ತಲಾ 20 ಲಕ್ಷ ರೂ. ಫಂಡಿಂಗ್ ನೀಡಲಾಗುವುದು.
ಕೊನೆಯ ಹಂತದಲ್ಲಿ ವಿಜೇತರಾಗಿ ಹೊರಹೊಮ್ಮುವ ತಂಡಕ್ಕೆ 1 ಕೋಟಿ ರೂ. ಬಹುಮಾನದ ಜೊತೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸರ್ಟಿಫಿಕೆಟ್ ಕೂಡ ನೀಡಲಿದ್ದಾರೆ. ಇದರ ಜೊತೆಗೆ ವಾರ್ಷಿಕವಾಗಿ ಅವರಿಗೆ 10 ಲಕ್ಷ ರೂ. ಸಪೋರ್ಟ್ ಕೂಡ ಸಿಗಲಿದ್ದು, ಇದರಿಂದ ಅವರು ತಮ್ಮ ಪ್ರಾಡಕ್ಟ್ ಅನ್ನು ಅಭಿವೃದ್ಧಿಗೊಳಿಸಬಹುದು.