ನವದೆಹಲಿ: ರೈತರ ಆದಾಯ ಹೆಚ್ಚಿಸಲು ಸರ್ಕಾರ (Modi Government) ನಿರಂತರವಾಗಿ ಹೊಸ ಹೊಸ  ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಇದರ ಹಿಂದೆ ಅವರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಬಾರದು ಎಂಬುದು ಉದ್ದೇಶವಾಗಿರುತ್ತದೆ. ಕಿಸಾನ್ ಸಮ್ಮಾನ್ ನಿಧಿಯಿಂದ ಹಿಡಿದು ಇಂತಹ ಅನೇಕ ಯೋಜನೆಗಳಿದ್ದು, ಅವುಗಳ ಮೂಲಕ ರೈತರು ಕೃಷಿಯನ್ನು ಹೊರತುಪಡಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಇದೀಗ ಸರ್ಕಾರ ರೈತರ ಆದಾಯ ಹೆಚ್ಚಿಸಲು ಫಾರ್ಮ್ ಮಶೀನರಿ ಬ್ಯಾಂಕ್ (Farm Machinery Bank)ನಂತೆಯೇ ಹೊಸ ಯೋಜನೆಯೊಂದನ್ನು ತಂದಿದೆ. ಇದರಿಂದ ರೈತರು ತಮ್ಮ ಹೊಲದಲ್ಲಿ ಕೆಲಸ ಮಾಡುವುದರ ಜೊತೆಗೆ ಇತರರ ಸಹಾಯ ಕೂಡ ಮಾಡಬಹುದಾಗಿದೆ.


COMMERCIAL BREAK
SCROLL TO CONTINUE READING

ಏನಿದೆ ಈ ಹೊಸ ಯೋಜನೆಯಲ್ಲಿ?
ರೈತರಿಗಾಗಿ ಫಾರ್ಮ್ ಮಶಿನರಿ ಬ್ಯಾಂಕ್ ತಯಾರಿಸಲಾಗಿದೆ. ಇಂದಿನ ಕಾಲದಲ್ಲಿ ಯಂತ್ರೋಪಕರಣಗಳು ಇಲ್ಲದೆ ಕೃಷಿ ಕೆಲಸ ನಿರ್ವಹಿಸುವುದು ಅಸಾದ್ಯವಾಗಿ ಬಿಟ್ಟಿದೆ. ಆದರೆ ಪ್ರತಿಯೊಬ್ಬ ರೈತನು ಕೃಷಿಯಲ್ಲಿ ಬಳಸುವ ಯಂತ್ರಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಬಾಡಿಗೆಗೆ ಯಂತ್ರಗಳ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ಯಂತ್ರೋಪಕರಣಗಳ ಬ್ಯಾಂಕ್ ಅನ್ನು ರಚಿಸಿದೆ. ಇದಕ್ಕಾಗಿ ಸರ್ಕಾರ ಮೊಬೈಲ್ ಆ್ಯಪ್ ಗಳ ಮೂಲಕ ರೈತರ ಗುಂಪುಗಳನ್ನು ರಚಿಸಿದೆ.


ಸರ್ಕಾರ ನೀಡಲಿದೆ ಶೇ.80 ರಷ್ಟು ಸಬ್ಸಿಡಿ
ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ತೆರೆಯುವ ಮೂಲಕ ಯುವಕ ನಿಯಮಿತ ಮತ್ತು ಉತ್ತಮ ಆದಾಯವನ್ನು ಗಳಿಸಬಹುದು. ವಿಶೇಷವೆಂದರೆ, ಫಾರ್ಮ್ ಮೆಷಿನರಿ ಬ್ಯಾಂಕ್‌ಗೆ 80 ಪ್ರತಿಶತದಷ್ಟು ಸಬ್ಸಿಡಿ ನೀಡುವುದರೊಂದಿಗೆ ಇತರೆ ಸಹಾಯವನ್ನೂ ಸಹ ಮಾಡಲಿದೆ.


ನೀವು ಶೇ.20ರಷ್ಟು ಹೂಡಿಕೆ ಮಾಡಬೇಕು
ಕೇಂದ್ರ ಸರ್ಕಾರ ದೇಶಾದ್ಯಂತ 'ಕಸ್ಟಮ್ ಹೈರಿಂಗ್ ಸೆಂಟರ್' ನಿರ್ಮಿಸಲು ಪ್ರೋತ್ಸಾಹನ ನೀಡಲಿದೆ ಹಾಗೂ 50 ಸಾವಿರಕ್ಕೂ ಅಧಿಕ ಕಸ್ಟಮ್ ಹೈರಿಂಗ್ ಸೆಂಟರ್ ಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಫಾರ್ಮ್ ಮಷಿನರಿ ಬ್ಯಾಂಕ್ ಗಾಗಿ ರೈತರ ಒಟ್ಟು ಹೂಡಿಕೆ ಶೇ.20 ರಷ್ಟು ಮಾತ್ರ ಇರಲಿದೆ. ಏಕಂದರೆ ಉಳಿತ ಶೇ.80ರಷ್ಟು ಹಣ ಸಬ್ಸಿಡಿ ರೂಪದಲ್ಲಿ ರೈತರಿಗೆ ವಾಪಸ್ ಸಿಗಲಿದೆ. 10 ಲಕ್ಷ ರೂ.ಗಳಿಂದ ಹಿಡಿದು 1 ಕೋಟಿ ರೂ.ಗಳ ವರೆಗೆ ಸಬ್ಸಿಡಿ ಸಿಗಲಿದೆ. 


ಮೂರು ವರ್ಷಗಳಲ್ಲಿ ಕೇವಲ ಒಂದು ಬಾರಿಗೆ ಸಬ್ಸಿಡಿ ಸಿಗಲಿದೆ
ರೈತ ತನ್ನ ತನ್ನ ಕೃಷಿ ಯಂತ್ರೋಪಕರಣ ಬ್ಯಾಂಕ್ ಗಾಗಿ ಬೀಜ ಗೊಬ್ಬರ ಡ್ರಿಲ್, ನೇಗಿಲು, ಥ್ರೆಷರ್, ಟಿಲ್ಲರ್, ರೋಟವೇಟರ್ ಮುಂತಾದ ಯಂತ್ರಗಳನ್ನು ಅನುದಾನದಲ್ಲಿ ಖರೀದಿಸಬಹುದು. ಕೃಷಿ ಇಲಾಖೆಯ ಯಾವುದೇ ಯೋಜನೆಗೆ ಯಂತ್ರೋಪಕರಣಗಳ ಮೇಲೆ ಮೂರು ವರ್ಷಗಳಿಗೊಮ್ಮೆ ಸಬ್ಸಿಡಿ ನೀಡಲಾಗುತ್ತದೆ. ಒಂದು ವರ್ಷದಲ್ಲಿ, ರೈತ ಮೂರು ವಿಭಿನ್ನ ರೀತಿಯ ಯಂತ್ರಗಳು ಅಥವಾ ಯಂತ್ರಗಳಿಗೆ ಅನುದಾನವನ್ನು ಪಡೆಯಬಹುದು.


ಈ ರೀತಿ ಅಪ್ಪ್ಲೈ ಮಾಡಿ
ಫಾರ್ಮ್ ಮೆಷಿನರಿ ಬ್ಯಾಂಕ್‌ಗಾಗಿ, ರೈತರು ತಮ್ಮ ಪ್ರದೇಶದ ಇ-ಮಿತ್ರ ಕಿಯೋಸ್ಕ್ನಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಅನುದಾನಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅನುದಾನಕ್ಕಾಗಿ ಅರ್ಜಿಯೊಂದಿಗೆ, ಯಂತ್ರೋಪಕರಣಗಳ ಬಿಲ್, ಭಮಶಾ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಫೋಟೋ ಪ್ರತಿ ಸೇರಿದಂತೆ ಇನ್ನೂ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗಿದೆ.


ಪ್ರಸ್ತುತ ರಾಜಸ್ಥಾನದಲ್ಲಿ ಆರಂಭಗೊಂಡಿದೆ ಈ ಸೇವೆ
ರಾಜಸ್ಥಾನದಲ್ಲಿ ಈ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಸವಲತ್ತು ನೀಡಲಾಗುತ್ತಿದೆ. ಆದರೆ, ಪರಿಶಿಷ್ಟ ಜಾತಿ, ಬುಡಕಟ್ಟು, ಮಹಿಳೆಯರು, ಬಿಪಿಎಲ್ ಕಾರ್ಡ್ ಹೊಂದಿರುವವರು ಮತ್ತು ಸಣ್ಣ ರೈತರಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ. ಈ ಯೋಜನೆಯಡಿ, 'ಫಸ್ಟ್ ಕಮ್ ಫಸ್ಟ್ ಸರ್ವ್' ಬೇಸಿಸ್ ಮೇಲೆ ರೈತರಿಗೆ ಅನುದಾನದ ಹಣವನ್ನು ನೀಡಲಾಗುವುದು.