ನವದೆಹಲಿ: ಜುಲೈ 1 ರಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ಟ್ಯಾಕ್ಸೇಬಲ್ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್  ಎಂದು ಹೆಸರಿಸಲಾಗಿದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಹೂಡಿಕೆದಾರರು ಪ್ರತಿ 6 ತಿಂಗಳಿಗೊಮ್ಮೆ ಲಾಭ ಪಡೆಯಲಿದ್ದಾರೆ.


COMMERCIAL BREAK
SCROLL TO CONTINUE READING

ವಾಸ್ತವಿಕವಾಗಿ ಇದೊಂದು ಬಾಂಡ್ ಯೋಜನೆಯಾಗಿದೆ. ಇದರಲ್ಲಿ ಹಣ ಹೂಡಿಕೆ ಮಾಡಲು ನೀವು ಬಾಂಡ್‌ಗಳನ್ನು ಖರೀದಿಸಬೇಕಾಗುತ್ತದೆ. ಈ ಬಾಂಡ್‌ಗಳು 7 ವರ್ಷಗಳ ಅವಧಿಗಾಗಿ ನೀಡಲಾಗುವುದು ಮತ್ತು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂತೆ ವರ್ಷಕ್ಕೆ ಎರಡು ಬಾರಿ ಬಡ್ಡಿ ನೀಡಲಾಗುವುದು.


ಉದಾಹರಣೆಗೆ ಸದ್ಯ ನೀವು ಈ ಯೋಜನೆಯಲ್ಲಿ ನಿಮ್ಮ ಹಣ ಹೂಡಿಕೆ ಮಾಡಿರುವಿರಿ ಅಂದುಕೊಳ್ಳೋಣ. ಜನವರಿ 2021ಕ್ಕೆ ನಿಮಗೆ ಅದರ ಬಡ್ಡಿ ಸಿಗಲಿದೆ. ಈ ಬಡ್ಡಿ ಶೇ.7.15ರಷ್ಟು ಇರಲಿದೆ.


ಆರು-ಆರು ತಿಂಗಳ ನಂತರ, ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿಯನ್ನು ಹೊಸದಾಗಿ ನಿಗದಿಪಡಿಸಲಾಗುತ್ತದೆ. ಆರು ತಿಂಗಳು ಪೂರ್ಣಗೊಂಡ ತಕ್ಷಣ, ಬಡ್ಡಿ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ.


ಎಷ್ಟು ಹಣ ಹೂಡಿಕೆ ಮಾಡಬಹುದು?
ಈ ಬಂದ್ ನಲ್ಲಿ ಕನಿಷ್ಠ ಅಂದರೆ ರೂ.1000 ಹೂಡಿಕೆ ಮಾಡಬಹುದು. ಆದರೆ, ಈ ಹೂಡಿಕೆಯಲ್ಲಿ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ.


ಹೂಡಿಕೆ ಹೇಗೆ ಮಾಡಬೇಕು?
ಯಾವುದೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್, IDBI ಬ್ಯಾಂಕ್, ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್ ಹಾಗೂ ICICI ಬ್ಯಾಂಕ್ ಗಳ ಮೂಲಕ ನೀವು ಈ ಬಾಂಡ್ ಗಳನ್ನು ಖರೀದಿಸಬಹುದು. ನಗದು ರೂಪದಲ್ಲಿ ಹಣ ನೀಡಿ 20 ಸಾವಿರ ರೂ.ಗಳವರೆಗಿನ ಬಾಂಡ್ ಗಳನ್ನು ನೀವು ಖರೀದಿಸಬಹುದು.


ಇದಲ್ಲದೆ ಡ್ರಾಫ್ಟ್, ಚೆಕ್ ಹಾಗೂ ಎಲೆಕ್ಟ್ರಾನಿಕ್ ಪೇಮೆಂಟ್ ಮೋಡ್ ಮೂಲಕ ಕೂಡ ನೀವು ಬಾಂಡ್ ಖರೀದಿಸಬಹುದು. ಕೇವಲ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿಯೇ ನಿಮಗೆ ಬಾಂಡ್ ಗಳು ಸಿಗಲಿವೆ ಎಂಬುದು ಇಲ್ಲಿ ಗಮನಾರ್ಹ.


ಆದರೆ ಇದು ತೆರಿಗೆ ಉಳಿತಾಯದ ಬಾಂಡ್ ಅಲ್ಲ. ಹೀಗಾಗಿ ಇದರಿಂದ ಸಿಗುವ ಆದಾಯದ ಮೇಲೆ ನಿಯಮಗಳ ಅನುಸಾರ ಆದಾಯ ತೆರಿಗೆ ಪಾವತಿಸಬೇಕಾಗಲಿದೆ.