ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷದ ಸೆಪ್ಟೆಂಬರ್ ವೇಳೆಗೆ ವೇತನ ಸಂಹಿತೆ 2019 ಅನ್ನು ಜಾರಿಗೆ ತರುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವಾಲಯ ಜುಲೈ 7 ರಂದು ಹೊರಡಿಸಿದ್ದ ಕರಡು ನಿಯಮಗಳನ್ನು ಸರ್ಕಾರದ ಅಧಿಕೃತ ಗ್ಯಾಜೆಟ್‌ನಲ್ಲಿ ಇರಿಸಿದೆ. ಇದು 45 ದಿನಗಳವರೆಗೆ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಓಪನ್ ಅಗಿರಲಿದ್ದು, ಇದರಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೆ ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಕಳೆದ ವರ್ಷ ಸಂಸತ್ತಿನಲ್ಲಿ ಈ ಸಂಹಿತೆಗೆ ಅಂಗೀಕಾರ ನೀಡಲಾಗಿತ್ತು. ಈ ನೂತನ ವೇತನ ಸಂಹಿತೆಯಿಂದ ದೇಶದ ಸುಮಾರು 50 ಕೋಟಿ ಕಾರ್ಮಿಕರಿಗೆ ಲಾಭ ಸಿಗುವ ನಿರೀಕ್ಷೆ ಹೊಂದಲಾಗಿದೆ. 


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಈ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದ್ದು, ಇದರಲ್ಲಿ ವೇತನ, ಬೋನಸ್ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದು ಜಾರಿಯಾದ ಬಳಿಕ ಕೋಡ್ ನಲ್ಲಿ ಒಟ್ಟು ನಾಲ್ಕು ಕಾರ್ಮಿಕ ಕಾನೂನುಗಳು ಶಾಮೀಲಾಗಿರಲಿವೆ. ಅಂದರೆ, ಇದು ಒಂದು ವೇಳೆ ಜಾರಿಗೆ ಬಂದರೆ ಇದರಲ್ಲಿ ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ಬೋನಸ್ ಪಾವತಿ ಕಾಯ್ದೆ ಮತ್ತು ಸಮಾನ ವೇತನ ಕಾಯ್ದೆ ಇರಲಿವೆ.


ವೇತನ ಸಂಹಿತೆಯ ಕರಡು ನಿಯಮಗಳಲ್ಲಿನ ಮುಖ್ಯ ಅಂಶಗಳು
ಕಾರ್ಮಿಕರಿಗೆ ಕನಿಷ್ಠ ಪಾವತಿ ಮತ್ತು ಸಮಯೋಚಿತ ವೇತನ ಪಾವತಿ ಖಾತರಿ

ವಲಯ ಮತ್ತು ವೇತನ ಶ್ರೇಣಿಯನ್ನು ಲೆಕ್ಕಿಸದೆ ವೇತನ ಸಂಹಿತೆಯು ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು ಸಮಯೋಚಿತವಾಗಿ ವೇತನ ಪಾವತಿಸುವ ಅವಕಾಶವನ್ನು ಒಳಗೊಂಡಿದೆ. ವೇತನ ವಿಳಂಬಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಪುರುಷರು, ಮಹಿಳೆಯರು ಮತ್ತು ಟ್ರಾನ್ಸ್ ಜೆಂಡರ್ ಗಳಿಗೆ ವೇತನ ಪಾವತಿಯ ವೇಳೆ ಯಾವುದೇ ತಾರತಮ್ಯವಿಲ್ಲ ಎಂಬುದನ್ನು ಸುನಿಶ್ಚಿತಗೊಳಿಸಲಾಗುವುದು.


ಸರಳ ವ್ಯಾಖ್ಯಾನ
ಕಾರ್ಮಿಕ ಸಂಹಿತೆಯು ಶ್ರಮದ ವ್ಯಾಖ್ಯಾನವನ್ನು ಬಹಳ ಸರಳೀಕೃತಗೊಳಿಸಲಾಗಿದೆ. ಇದರಿಂದ ಪ್ರಕರಣಗಳು ಮತ್ತು ಇತ್ಯಾದಿಗಳ ದರದಲ್ಲಿ ಇಳಿಕೆಯಾಗಲಿದೆ ಮತ್ತು ಇನ್ನೊಂದೆಡೆ ಉದ್ಯೋಗದಾತರಿಗೂ ಕೂಡ ಅವರ ಅನುಸರಣೆ ವೆಚ್ಚ ಕಡಿತಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.


ಕೆಲಸದ ಅವಧಿ
ಕರಡು ನಿಯಮಗಳ ಪ್ರಕಾರ ವೇತನ ಸಂಹಿತೆಯೊಳಗೆ ಪ್ರತಿ ದಿನ 8 ಗಂಟೆಗಳ ಕೆಲಸದ ಅವಧಿ ಕಡ್ಡಾಯವಾಗಿರಲಿದೆ. ಅಷ್ಟೇ ಅಲ್ಲ ಫ್ಯಾಕ್ಟರಿ ಕಾಯ್ದೆಯಡಿ ಈ 8 ಗಂಟೆಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡುವ ಯಾವುದೇ ಪ್ರಸ್ತಾವನೆಯನ್ನು ಮಾಡಲಾಗಿಲ್ಲ. ಇದಕ್ಕೂ ಮೊದಲು ಕೊರೊನಾ ವೈರಸ್ ಪ್ರಕೋಪ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮದ ಹಿನ್ನೆಲೆ ಸರ್ಕಾರ ದಿನದ ಒಟ್ಟು ಕೆಲಸದ ಸಮಯವನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿತ್ತು.