ನವದೆಹಲಿ: ಮೋದಿ ಸರ್ಕಾರ ವಲಸೆ ಕಾರ್ಮಿಕರನ್ನು (Migrant Workers) ಸಶಕ್ತಗೊಳಿಸುವ ಉದ್ದೇಶದಿಂದ ತರಬೇತಿ ನೀಡಲು ಪ್ರಾರಂಭಿಸಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನ 116 ಜಿಲ್ಲೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ ಮತ್ತು ಅಲ್ಲಿ 3 ಲಕ್ಷ ವಲಸೆ ಕಾರ್ಮಿಕರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಕಾರ್ಮಿಕ ಸಚಿವಾಲಯ ಗುರುವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಪ್ರವಾಸಿ ಕಾರ್ಮಿಕರಿಗಾಗಿ ನೌಕರಿಯ ಸಿದ್ಧತೆ ನಡೆಸಲು ಮುಂದಾದ Sonu Sood


ಕೊವಿಡ್ 19ರ ನಂತರದ ಕಾಲದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಹಿನ್ನೆಲೆ ವಲಸೆ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆಯ ಅಡಿ ಗ್ರಾಮೀಣ ಭಾಗದ ಜನರಿಗೆ ಸಶಕ್ತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವಾಲಯ ಹೇಳಿದೆ.


ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳ ಜೊತೆ ಸೇರಿ ಕೌಶಲಾಭಿವೃದ್ಧಿ ಹಾಗೂ ಕಾರ್ಮಿಕ ಇಲಾಖೆ 116 ಜಿಲ್ಲೆಗಳ ಒಟ್ಟು 3 ಲಕ್ಷ ಕಾರ್ಮಿಕರಿಗಾಗಿ 125 ದಿನಗಳ ಕೌಶಲ್ಯಾಭಿವೃದ್ಧಿ ಟ್ರೇನಿಂಗ್ ನಡೆಸಲಿದೆ.  ಈ ತರಬೇತಿಯ ಆರಂಭ ಮೊದಲು ಗುರುತಿಸಲ್ಪಟ್ಟ ಜಿಲ್ಲೆಗಳಲ್ಲಿ ಆರಂಭಗೊಂಡಿದ್ದು, ಮುಂಬರುವ ತಿಂಗಳುಗಳಲ್ಲಿ ನಿಧಾನವಾಗಿ ಇತರ ಜಿಲ್ಲೆಗಳಿಗೂ ಕೂಡ ವಿಸ್ತರಿಸಲಾಗುತ್ತದೆ.


ಇದನ್ನು ಓದಿ- ವಲಸೆ ಕಾರ್ಮಿಕರ ನೆರವಿಗೆ ತನ್ನ ಮೊಬೈಲ್ ನಂಬರ್ ಹಂಚಿಕೊಂಡ Sonu Sood


ಪಿಎಂಕೆವಿವೈ 2016-20ರ ಅಡಿಯಲ್ಲಿ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಅಸ್ತಿತ್ವದಲ್ಲಿರುವ ತರಬೇತಿ ತಜ್ಞರು ಮತ್ತು ಯೋಜನಾ ಅನುಷ್ಠಾನ ಸಂಸ್ಥೆಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಒಂದೆಡೆ ಅಲ್ಪಾವಧಿಯ ತರಬೇತಿ ಕಾರ್ಯಕ್ರಮದಡಿಯಲ್ಲಿ 1.5 ಲಕ್ಷ ವಲಸೆ ಕಾರ್ಮಿಕರಿಗೆ ತರಬೇತಿ ನೀಡಲಾಗಿದ್ದರೆ, ಇನ್ನೊಂದೆಡೆ ಒಂದೂವರೆ ಲಕ್ಷ ವಲಸೆ ಕಾರ್ಮಿಕರನ್ನು ಗುರುತಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ, ಸ್ಥಳೀಯ ಉದ್ಯೋಗಗಳ ಬೇಡಿಕೆ ಮತ್ತು ಹಿಂದಿರುಗಿದ ವಲಸಿಗರಿಗೆ ತರಬೇತಿ ನೀಡಲು ಜಿಲ್ಲಾಡಳಿತ ಈ ಕೆಲಸವನ್ನು ಮಾಡುತ್ತಿದೆ.


ಗ್ರಾಮೀಣಾಭಿವೃದ್ಧಿಗಾಗಿ ಕೌಶಲ್ಯ ಮತ್ತು ಉದ್ಯಮಶೀಲತೆಯ ಉತ್ತೇಜನಕ್ಕೆ ಒತ್ತು ನೀಡಿದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ, ಕೌಶಲ್ಯ ಸಬಲೀಕರಣಕ್ಕಾಗಿ ಕೌಶಲ್ಯ ಭಾರತ ಮಿಷನ್‌ನ ಮೂಲಭೂತ ಅಂಶ ಗ್ರಾಮೀಣ ಅಭಿವೃದ್ಧಿಯಾಗಿದೆ, ಏಕೆಂದರೆ ಒಟ್ಟು 70 ಕಾರ್ಮಿಕರು ಗ್ರಾಮೀಣ ಭಾರತದಿಂದ ಬರುತ್ತಾರೆ ಎಂದು ಹೇಳಿದ್ದಾರೆ.