ನವದೆಹಲಿ: ಹೊಸ ವರ್ಷದಲ್ಲಿ, ಮೋದಿ ಸರ್ಕಾರವು ರೈತರಿಗೆ ದೊಡ್ಡ ಕೊಡುಗೆ ನೀಡುವ ನಿರೀಕ್ಷೆಯಿದೆ. ಪಿಎಂಒ ಮತ್ತು ನೀತಿ ಆಯೋಗದ ಸಭೆಯಲ್ಲಿ ಕೃಷಿ ಸಚಿವಾಲಯದಿಂದ ದೇಶದ ರೈತರ ಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬ ಬಗ್ಗೆ  ಮಾಹಿತಿ ಪಡೆಯಲಾಗಿದೆ. ರೈತರ ಸಾಲಮನ್ನಾ ಮಾಡುವ ಬದಲಿಗೆ ಅವರ ಆರ್ಥಿಕ ಸ್ಥಿತಿಯನ್ನು ಯಾವ ರೀತಿ ಸುಧಾರಿಸಬಹುದು ಎಂಬುದರ ಮೇಲೆ ಸರ್ಕಾರ ಕೆಲಸ ಮಾಡುತ್ತಿದೆ. ಈ ಬಗ್ಗೆ ಕೃಷಿ ಸಚಿವಾಲಯ ಎರಡು ವಿಧಾನಗಳನ್ನು ಸೂಚಿಸಿದೆ. ಮೊದಲನೆಯದಾಗಿ ಬಿತ್ತನೆ ಅವಧಿಯಲ್ಲಿ ರೈತರಿಗೆ ನೇರವಾಗಿ ಹಣ ಪಾವತಿಸುವ. ಎರಡನೆಯದು ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುವುದು. ಆದರೆ ರೈತರ ಸಾಲಮನ್ನಾಕ್ಕಾಗಿ ಅಳವಡಿಸಿಕೊಳ್ಳುವ ವಿಧಾನವನ್ನು ಇನ್ನೂ ನಿರ್ಧರಿಸಬೇಕಾಗಿದೆ.


COMMERCIAL BREAK
SCROLL TO CONTINUE READING

ರೈತರ ಖಾತೆಗೆ 4000 ರೂ. ನೀಡುವ ನಿರೀಕ್ಷೆ:
ಮೂಲಗಳ ಪ್ರಕಾರ, ಸರ್ಕಾರವು ಪರ್ಯಾಯ ತಂತ್ರವನ್ನು ರೂಪಿಸುತ್ತಿದೆ. ಈ ಪ್ರಕಾರ, ರೈತರ ಪ್ರತಿ ಎಕರೆಗೆ 4 ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡುವ ನಿರೀಕ್ಷೆಯಿದೆ. ವಾಸ್ತವವಾಗಿ, ಇದು ತೆಲಂಗಾಣ ಸರಕಾರದ ಒಂದು ಯೋಜನೆಯಾಗಿದ್ದು, ಅದರ ಹೆಸರು 'ತೆಲಂಗಾಣ ರೈತ ಬಂಧು ಯೋಜನೆ'. 


ಈ ಯೋಜನೆಯಡಿ,  ಬಿತ್ತನೆ ಅವಧಿಯಲ್ಲಿ ರೈತರಿಗೆ ಎಕರೆಗೆ ರೂ. 4000 ವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆ. ತೆಲಂಗಾಣದಲ್ಲಿ ಈ ಯೋಜನೆಯನ್ನು ಒಂದು ವರ್ಷಕ್ಕೆ ಜಾರಿಗೊಳಿಸಲಾಗಿದೆ ಮತ್ತು ಈ ವರೆಗೂ ಈ ಬಗ್ಗೆ ಯಾವುದೇ ದೂರುಗಳಿಲ್ಲ. ಇದೀಗ ಕೇಂದ್ರ ಸರ್ಕಾರ ಕೂಡ ಈ ಯೋಜನೆಯನ್ನು ಅಧ್ಯಯನ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಇದನ್ನು ಜಾರಿಗೆ ತರಬಹುದು ಎನ್ನಲಾಗಿದೆ.


1 ಲಕ್ಷವರೆಗಿನ ಸಾಲದ ಬಡ್ಡಿ ಮನ್ನಾ ಸಾಧ್ಯತೆ:
ಶೀಘ್ರದಲ್ಲೇ ರೈತರಿಗೆ ಒಂದು ಸಂತಸದ ಸುದ್ದಿ ಹೇಳುವ ಸಾಧ್ಯತೆಯಿದ್ದು, ಇದು 1 ಲಕ್ಷವರೆಗಿನ ಸಾಲದ ಬಡ್ಡಿ ಮನ್ನಾ ಮಾಡಬಹುದು ಎನ್ನಲಾಗಿದೆ. ಈಗಿರುವ ಶೇ.4ರ ಬಡ್ಡಿದರದ ಬದಲಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದು ಕೇಂದ್ರದ ನಿರ್ಧಾರವಾಗಿದೆ. ಹೆಕ್ಟೇರ್​ಗೆ 50 ಸಾವಿರ ರೂ.ಗಳಂತೆ ಗರಿಷ್ಠ 1 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿರಹಿತ ಸಾಲ ದೊರೆಯಲಿದೆ. ಹಾಗೆಯೇ ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ 70 ಸಾವಿರ ಕೋಟಿ ರೂ. ಸಬ್ಸಿಡಿ ಹಣವನ್ನೂ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಾಕಬಹುದು.


ಸರ್ಕಾರದ ಮೇಲೆ ಹೊರೆ?
ರೈತರ ಆರ್ಥಿಕ ನೆರವು ಸರ್ಕಾರದ ಖಜಾನೆಯ ಮೇಲೆ ದೊಡ್ಡ ಹೊರೆಯಾಗಲಿದೆ. ಒಂದು ಅಂಕಿ ಅಂಶದ ಪ್ರಕಾರ ಸರ್ಕಾರವು 1.5 ರಿಂದ 2 ಲಕ್ಷ ಕೋಟಿ ರೂ. ವರೆಗೆ ಸರ್ಕಾರದ ಮೇಲೆ ಹೊರೆಬೀಳಬಹುದು ಎನ್ನಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೀಘ್ರದಲ್ಲೇ ರೈತರಿಗೆ ಸಂಬಂಧಿಸಿದ ಈ ಪ್ರಕಟಣೆಯನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.