ನವದೆಹಲಿ: ತೆಲಂಗಾಣದ ಖಮ್ಮಂನಲ್ಲಿ ಚುನಾವಣಾ ರ್ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ "ದೆಹಲಿಯಲ್ಲಿ ನರೇಂದ್ರ ಮೋದಿ ಎಲ್ಲ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು.



COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಎಲ್ಲ ಸಂಸ್ಥೆಗಳನ್ನು ನಾಶಪಡಿಸುತ್ತಿದ್ದಾರೆ. ಅದು ಸಿಬಿಐ,ಆರ್ಬಿಐ, ಚುನಾವಣಾ ಆಯೋಗವಿರಬಹುದು ಇವೆಲ್ಲವುಗಳನ್ನು ಅವರು ನಾಶಪಡಿಸಲಿಕ್ಕೆ ಪ್ರಯತ್ನ ಪಡುತ್ತಿದ್ದಾರೆ, ತೆಲಂಗಾಣದಲ್ಲಿ ಕೆಸಿಆರ್ ಕುಟುಂಬ ಅದನ್ನು ಮಾಡುತ್ತಿದೆ ಎಂದು ಕಿಡಿಕಾರಿದರು. ಇನ್ನೊಂದೆಡೆ ರೈತರು,ಮಹಿಳೆಯರು ಎಲ್ಲರು ತೊಂದರೆ ಅನುಭವಿಸುತ್ತಿದ್ದಾರೆ. ತೆಲಂಗಾಣ, ಚತ್ತೀಸ್ ಘಡ್, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಗೆದ್ದ ನಂತರ ದೆಹಲಿಯಲ್ಲಿ ಮಹಾಘಟಭಂದನ್ ಮೋದಿಯನ್ನು ಸೋಲಿಸಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.



ತೆಲಂಗಾಣದಲ್ಲಿ ಕೆಸಿಆರ್ ಸರ್ಕಾರವನ್ನು ಸೋಲಿಸಲು ಈ ಬಾರಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ತೆಲುಗುದೇಶಂ ಹಾಗೂ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.